Advertisement
ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ಮಂಡನೆಯಾಗುತ್ತಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಸ್ಥಾನದಲ್ಲಿ ಮುನ್ನುಗ್ಗುತ್ತಿರುವ ತುಮಕೂರು ಜಿಲ್ಲೆಯಲ್ಲಿನ ರೈಲ್ವೆ ಯೋಜನೆಗಳ ವೇಗಕ್ಕೆ ಒತ್ತು ಕೊಡುತ್ತಾರಾ? ಮಂದಗತಿಯಲ್ಲಿರುವ ಹಲವು ಹಳೆಯ, ಹೊಸ ರೈಲ್ವೆ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಅನುಕೂಲವಾಗಲಿದೆಯೇ? ಕುತೂಹಲ ಮೂಡಿದೆ.
Related Articles
Advertisement
ಕೇಂದ್ರ ಸರ್ಕಾರ ರೈಲ್ವೆ ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡುತ್ತದೆ. ಆದರೆ ಆ ಯೋಜನೆಗಳು ಎಷ್ಟರ ಮಟ್ಟಿಗೆ ಕಾರ್ಯ ಗತವಾಗಿವೆ ಎನ್ನುವುದನ್ನು ತುಲನೆ ಮಾಡಿದರೆ ಯೋಜನೆಗಳು ಕಾರ್ಯಗತವಾಗದೇ ನಿಂತಲ್ಲೇ ನಿಂತಿರುತ್ತವೆ ಎನ್ನುವುದಕ್ಕೆ ಜಿಲ್ಲೆಗೆ ಬಜೆಟ್‌ನಲ್ಲಿ ಮಂಜೂರಾಗಿರುವ ಯೋಜನೆಗಳೇ ಸಾಕ್ಷಿಯಾಗಿವೆ. ತುಮಕೂರು-ದಾವಣಗೆರೆ ರೈಲು ಮಾರ್ಗ, ರಾಯದುರ್ಗ-ತುಮಕೂರು ಮಾರ್ಗದ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯಿಲ್ಲ. ಹಣದ ಕೊರತೆ ಇಲ್ಲದಿದ್ದರೂ ಕೆಲಸ ಮಂದಗತಿ ಯಲ್ಲಿ ನಡೆಯುತ್ತಿದೆ.
ರೈಲ್ವೆ ಯೋಜನೆಗೆ ಅಗತ್ಯವಾಗಿ ರಾಜ್ಯ ಸರ್ಕಾರ ಹೆಚ್ಚು ಆಸಕ್ತಿ ವಹಿಸಿ ಭೂಸ್ವಾಧೀನ ಮಾಡಿಕೊಡ ಬೇಕು, ಈಗ ಅಲ್ಲಲ್ಲಿ ಭೂ ಸ್ವಾಧೀನ ವಾಗಿದೆ. ಕಾಮಗಾರಿ ಈಗ ಚುರುಕಾಗುತ್ತಿದೆ. ತುರುವೇಕೆರೆ- ಚಿಕ್ಕನಾಯಕನಹಳ್ಳಿ-ಹುಳಿಯಾರು ಮಾರ್ಗವಾಗಿ ಮಂಜೂರಾಗಿದ್ದ ರೈಲ್ವೆ ಯೋಜನೆ ಇನ್ನೂ ಯಾವುದೇ ಹಂತದಲ್ಲೂ ಕಾರ್ಯಾರಂಭ ವಾಗಿಲ್ಲ, ಜಿಲ್ಲೆಯ ಮಟ್ಟಿಗೆ ಅಗತ್ಯವಾಗಿದ್ದ ಯೋಜನೆ ಗಳು ಮಂಜೂ ರಾಗಿವೆ. ಆದರೆ ಅವು ಕಾರ್ಯ ಗತವಾಗದೇ ಇರುವುದು ನಿರಾಶೆ ಮೂಡಿದ್ದು, ಈ ವರ್ಷದ ರೈಲ್ವೆ ಬಜೆಟ್‌ನಲ್ಲಿ ಯಾವ ಯೋಜನೆಗೆ ಯಾವ ರೀತಿ ಹಣ ಮೀಸಲಿಡುವರು, ಯಾವ ಯೋಜನೆ ಶೀಘ್ರ ಕಾರ್ಯಪ್ರವೃತ್ತಿಗೆ ಚಾಲನೆ ದೊರೆಯುವುದು ಕಾದು ನೋಡಬೇಕಾಗಿದೆ.
* ಚಿ.ನಿ. ಪುರುಷೋತ್ತಮ್