Advertisement
ಇಲ್ಲಿನ ತಮ್ಮ ಗೃಹಕಚೇರಿ ದಾಸೋಹ ನಿಲಯದಲ್ಲಿ ಸೋಮವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಅನೇಕರುಪಿಡಬ್ಲೂಡಿ ರಸ್ತೆ ಅತಿಕ್ರಮಿಸಿ ಕಟ್ಟಡ ಕಟ್ಟಿಕೊಂಡಿದ್ದಾರೆ.ಇದರಿಂದ ರಸ್ತೆಗಳ ಅಭಿವೃದ್ಧಿಗೆ ತೊಡಕಾಗುತ್ತಲಿದೆ. ಇಂಥವರಿಗೆ ನೋಟಿಸ್ ಕೊಡಬೇಕು. ಇನ್ನು ಮುಂದೆ ಪುರಸಭೆ, ಪಟ್ಟಣ ಪಂಚಾಯತ್, ಹೆಸ್ಕಾಂನವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.
Related Articles
Advertisement
ವಿಮೆ ಜಾಗೃತಿ ಮೂಡಿಸಿ: ಮಳೆಯಿಂದಾಗಿ ಸೂರ್ಯಕಾಂತಿ, ಈರುಳ್ಳಿ ಬೆಳೆಗೆ ಸಮಸ್ಯೆ ಆಗಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಈರುಳ್ಳಿ ಸೇರ್ಪಡೆ ಬಗ್ಗೆ ರೈತರಿಗೆ ತಿಳಿ ಹೇಳಿ ವಿಮೆ ಮಾಡಿಸುವಂತೆ ಮನವೊಲಿಸಬೇಕು. ತೋಟಗಾರಿಕೆ ಬೆಳೆಗಾರರ ಮಾಹಿತಿ, ಮೊಬೈಲ್ ನಂಬರ್
ಸಂಗ್ರಹಿಸಿ ಇಟ್ಟುಕೊಂಡು ಕಾಲಕಾಲಕ್ಕೆ ಮಾಹಿತಿ ಕೊಡುತ್ತಿರಬೇಕು ಎಂದು ಶಾಸಕರು ಹೇಳಿದಾಗ ಮಾತನಾಡಿದ ತೋಟಗಾರಿಕೆ ಅಧಿಕಾರಿ ಢವಳಗಿ, ರೂಢಗಿ ಭಾಗದಲ್ಲಿ ಹೆಚ್ಚು ಈರುಳ್ಳಿಗೆ ಹಾನಿಯಾಗಿದೆ. ದ್ರಾಕ್ಷಿ ಬೆಳೆಯೂ ಸಮಸ್ಯೆಗೀಡಾಗಿದೆ. 63 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆದಿದ್ದು 23 ರೈತರು ಇದಕ್ಕಾಗಿ ವಿಮೆ ಕಟ್ಟಿದ್ದಾರೆ ಎಂದರು.
ಇದೇ ವೇಳೆ ಶಾಸಕರು ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಮಳೆಹಾನಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿ ಕಡ್ಡಾಯವಾಗಿಪಾಲಿಸುವಂತೆ ತಿಳಿ ಹೇಳಿದರು. ತಾಪಂ ಇಒ ಶಶಿಕಾಂತ ಶಿವಪುರೆ ಸೇರಿದಂತೆ ಹಲವು ಅಧಿಕಾರಿಗಳು, ಪ್ರತಿನಿಧಿ ಗಳು ಪಾಲ್ಗೊಂಡಿದ್ದರು.
ಮುದ್ದೇಬಿಹಾಳದ ಅಂಬೇಡ್ಕರ್ ಸರ್ಕಲ್‌ನಿಂದ ಬಿದರಕುಂದಿ ಕ್ರಾಸ್‌ವರೆಗೆ ವಿಜಯಪುರ ರಸ್ತೆಯನ್ನು 44 ಮೀ. ಅಗಲದ ಡಬಲ್ ರೋಡ್ ಮಾಡಲಾಗುತ್ತದೆ. ರಸ್ತೆಯ ಎರಡೂ ಬದಿಯ ಅತಿಕ್ರಮಣದಾರರಿಗೆ ನೋಟಿಸ್ ಕೊಟ್ಟು ತೆರವುಗೊಳಿಸಬೇಕು. ವಿದ್ಯುತ್ ಕಂಬ ಇರಬಾರದು. ಮಂಗಳವಾರದಿಂದಲೇ ಸರ್ವೇ ಪ್ರಾರಂಭಿಸಬೇಕು. –ಎ.ಎಸ್. ಪಾಟೀಲ ನಡಹಳ್ಳಿ, ಶಾಸಕರು
ಹೊಸ ಡಿಸಿ ಸಿಕ್ಕಾಪಟ್ಟೆ ಸ್ಟ್ರಿಕ್ಟು : ಹೊಸ ಡಿಸಿ ಸುನೀಲಕುಮಾರ ಅಭಿವೃದ್ಧಿ ವಿಷಯದಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕುr. ನನ್ನದೂ ಸೇರಿ ಯಾರ ಮಾತನ್ನೂ ಕೇಳೊಲ್ಲ. ಅತಿಕ್ರಮಣ ನಿರ್ದಾಕ್ಷಿಣ್ಯವಾಗಿ ಒಡೆದು ಹಾಕ್ತಾರೆ. ಅಭಿವೃದ್ಧಿ ವಿಷಯದಲ್ಲಿ ಅಡ್ಡ ಬರಬೇಡಿ ಎಂದು ಮೊನ್ನೆಯೇ ನನಗೆ ಹೇಳಿದ್ದಾರೆ. ಅತಿಕ್ರಮಣ ವಿಷಯದಲ್ಲಿ ನಾನು ಅಡ್ಡಬರೊಲ್ಲ. ನಿಯಮ ಪಾಲಿಸಿದವರಿಗೆ ಅಧಿಕಾರಿಗಳು ಸಹಕರಿಸಬೇಕು. ನಿಯಮಪಾಲಿಸದವರಿಗೆ ನಿಯಮಗಳ ಬಗ್ಗೆ ತಿಳಿ ಹೇಳಬೇಕು. ಪಟ್ಟಣದಲ್ಲಿರುವ ಎಲ್ಲಲೇಔಟ್‌ಗಳ ಮಾಹಿತಿ ಕೊಡುವಂತೆ ಟೌನ್‌ಪ್ಲಾನಿಂಗ್‌ನವರಿಗೆ ಸೂಚಿಸಿದ್ದೇನೆ ಎಂದು ಶಾಸಕರು ಹೇಳಿದರು.