Advertisement
ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿರುವ 1.10 ಕೋಟಿ ಪ್ರಜೆಗಳ ಮಾಹಿತಿ ಕಲೆಹಾಕಲು ಅಮೆ ರಿಕ ಸರಕಾರ ಮುಂದಾಗಿದ್ದು, ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಮನವಿಗೆ ಟ್ರಂಪ್ ಆಡಳಿತ ಈಗಾಗಲೇ ಸಹಿ ಹಾಕಿದೆ. ವಲಸೆ ವಿರೋಧಿ ನೀತಿಗೆ ತಡೆ ಇರುವ ಹಿನ್ನೆಲೆ ಯಲ್ಲಿ ಸಿದ್ಧಪಡಿಸಿದ ಪರಿಷ್ಕೃತ ನೀತಿ ಇದಾಗಿದೆ. ವೀಸಾ ಪುನರ್‌ನವೀಕರಣಗೊಳ್ಳದ, ಸೂಕ್ತ ದಾಖಲೆ ಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ ಯಾವುದೇ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದುಕೊಳ್ಳುವ, ಇಲ್ಲವೇ ಗಡೀಪಾರು ಮಾಡುವ ಸಾಧ್ಯತೆಯಿದೆ.
Related Articles
Advertisement
ಸೆಕ್ಯೂರಿಟಿ ಹೆಚ್ಚಳ: ಈ ಆದೇಶಕ್ಕೆ ಪೂರಕವಾಗಿ ಸರಕಾರ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಏಜೆನ್ಸಿಗೆ 5 ಸಾವಿರ ಹೆಚ್ಚುವರಿ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದೆ. ಅಲ್ಲದೆ ವಲಸೆ ಮತ್ತು ಕಸ್ಟಮ್ಸ್ ನೀತಿ ಜಾರಿಯ ಏಜೆನ್ಸಿಗೆ 10 ಸಾವಿರ ಸಿಬಂದಿಯನ್ನು ನೇಮಿಸಲು ಆದೇಶ ಹೊರಡಿಸಿದೆ.
ಎಲ್ಲ ವಲಸಿಗರನ್ನು ಹೊರಗೆ ಹಾಕುವುದು ಕಷ್ಟಇದು ಅಸಾಧ್ಯದ ಕೆಲಸ ಎಂದು ಅಮೆರಿಕದ ಮಾಧ್ಯಮಗಳೇ ಹೇಳಿವೆ. ಅಮೆರಿಕದಲ್ಲಿ ಒಟ್ಟಾರೆ 1.1 ಕೋಟಿ ಅಕ್ರಮ ವಲಸಿಗ ರಿದ್ದು, ಇವರೆಲ್ಲರನ್ನೂ ಒಮ್ಮೆಗೆ ಅಮೆರಿಕದಿಂದ ಹೊರಗೆ ಹಾಕಬೇಕಾದರೆ ಸರಿಸುಮಾರು 400 ಬಿಲಿಯನ್ ಡಾಲರ್‌ನಿಂದ 600 ಬಿಲಿಯನ್ ಡಾಲರ್ ಹಣ ಬೇಕಾಗುತ್ತದೆ. ಇದನ್ನು ಬಿಡಿ ಬಿಡಿಯಾಗಿ ಹೇಳಬೇಕಾದರೆ, ಪ್ರತಿಯೊಬ್ಬ ವ್ಯಕ್ತಿಯನ್ನು ಗಡೀಪಾರು ಮಾಡಬೇಕಾದರೆ 23,480 ಡಾಲರ್ ಬೇಕಾಗುತ್ತದೆ. ಅಲ್ಲದೆ 1 ಟ್ರಿಲಿಯನ್ ಡಾಲರ್ ವಹಿವಾಟು ಇರಿಸಿಕೊಂಡಿರುವ ಅಮೆರಿಕದ ಉದ್ದಿಮೆಗಳ ಮೇಲೂ ಇದು ಕೆಟ್ಟ ಪರಿಣಾಮ ಬೀರಲಿದ್ದು, ಅವು ಶಾಶ್ವತವಾಗಿ ಮುಚ್ಚುವ ಭೀತಿ ಆವರಿಸಲಿದೆ. ವಿಶೇಷವೆಂದರೆ,
ಶೇ. 76ರಷ್ಟು ಅಮೆರಿಕನ್ನರು ಅಕ್ರಮ ವಲಸಿಗರನ್ನು “ತಮ್ಮಂತೆಯೇ’ ಎಂದು ಭಾವಿಸುವುದಲ್ಲದೆ, ಅವರು ಒಳ್ಳೆಯವರು ಎಂದೇ ಹೇಳುತ್ತಾರೆ. ಅಮೆರಿಕದಲ್ಲಿ ಔಟಾದ್ರೆ ಯುರೋಪಿಗೆ ಬನ್ನಿ !
ಅಮೆರಿಕದ ಪರಿಷ್ಕೃತ ವಲಸೆ ನೀತಿಯಿಂದ ಆತಂಕಕ್ಕೊಳಗಾದ ಭಾರತೀಯ ಪ್ರತಿಭಾವಂತ ಐಟಿ ಉದ್ಯೋಗಿಗಳಿಗೆ ಐರೋಪ್ಯ ಒಕ್ಕೂಟ ಸ್ವಾಗತ ಕೋರಿದೆ. ಭಾರತೀಯ ಉದ್ಯೋಗಿಗಳು ಅತ್ಯಂತ ಪ್ರತಿಭಾಶಾಲಿಗಳು. ನಮ್ಮ ಐಟಿ ಉದ್ಯಮ ಯಶಸ್ಸು ಕಂಡಿಲ್ಲ. ನಮ್ಮಲ್ಲಿ ಭಾರತೀಯ ಉದ್ಯೋಗಿಗಳೂ ಆ ಪ್ರಮಾಣದಲ್ಲಿ ಇಲ್ಲ. ಒಂದು ವೇಳೆ ಟ್ರಂಪ್ ವಲಸೆ ವಿರೋಧಿ ನೀತಿಯಿಂದ ಎಚ್-1ಬಿ ಮತ್ತು ಎಲ್1 ವೀಸಾ ಹೊಂದಿದವರು ಅಪಾಯಕ್ಕೆ ಸಿಲುಕಿದರೆ ಅಂಥವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಹೇಳಿದೆ. ಐಟಿ ಸಹಿತ ಹಲವು ಆರ್ಥಿಕ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ ಆಗಮಿಸಿರುವ ಯೂರೋಪಿಯನ್ ಒಕ್ಕೂಟದ ನಿಯೋಗ ಕೇಂದ್ರ ಸಚಿವರಿಗೆ ಈ ಭರವಸೆ ನೀಡಿದೆ. ಅಂದಹಾಗೆ ಐರೋಪ್ಯ ಒಕ್ಕೂಟದಲ್ಲಿ ಜರ್ಮನಿ, ಇಟಲಿ, ಪೋಲೆಂಡ್, ಫ್ರಾನ್ಸ್, ಸಹಿತ 28 ದೇಶಗಳಿವೆ.