Advertisement
ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ರವಿವಾರ 1.20 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2 ಮಹಾತ್ಮ ಗಾಂಧಿ ಜಯಂತಿ ದಿನದಂದು ಬಾಣಂತಿಯರಿಗೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕೊಡುವುದಕ್ಕಾಗಿ ಮಾತೃಪೂರ್ಣ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು. ಆಹಾರ ಪಡಿತರರು ರಾಜ್ಯದ ಯಾವದೇ ನ್ಯಾಯಬೆಲೆ ಅಂಗಡಿಯಿಂದ ಆಹಾರ ಧಾನ್ಯ ಪಡೆದುಕೊಳ್ಳುವುದಕ್ಕಾಗಿ ಸರಕಾರ ಹೊಸ ಕಾನೂನು ಜಾರಿಗೊಳಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಚಂದನಕೇರಾ ಅತಿ ಹಿಂದುಳಿದ ಪ್ರದೇಶ ಆಗಿರುವುದರಿಂದ ಅನೇಕ ಸವಲತ್ತುಗಳನ್ನು ಮಂಜೂರಿಗೊಳಿಸದ್ದೇನೆ. ಸೀರೆಗಳನ್ನು ಆಶ್ರಯವಾಗಿ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಅಲೆಮಾರಿ ಜನಾಂಗದವರಿಗೆ 40 ಮನೆಗಳನ್ನು ನೀಡಲಾಗಿದೆ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿರಿ. ಶೇ. 50ರಷ್ಟು ಮಹಿಳೆಯರಿಗೆ ಮೀಸಲಾತಿ ಇರುವುದರಿಂದ
ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದರು.
Related Articles
Advertisement
ಗ್ರಾಮದ ಹಿರಿಯ ಮುಖಂಡ ಕುಪೇಂದ್ರರಾವ್ ಫತ್ತೆಪುರ ಮಾತನಾಡಿ, ಚಂದನಕೇರಾ ಗ್ರಾಮಕ್ಕೆ ಕಳೆದ 4ವರ್ಷಗಳಲ್ಲಿಅನೇಕ ಅಭಿವೃದ್ಧಿ ಕೆಲಸಗಳನ್ನು ಶಾಸಕರು ಮಾಡಿದ್ದಾರೆ ಎಂದರು. ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ 4ಎಕರೆ ಜಮೀನು ನೀಡಿದ ರಾಮರಾವ ಪಾಟೀಲ ಮಾತನಾಡಿ, ಆಸ್ಪತ್ರೆಗೆ ಸಿಬ್ಬಂದಿ ಮತ್ತು ಕಾಂಪೌಂಡ್ ಬೇಕಾಗಿದೆ ಎಂದರು. ಪೂಜ್ಯ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ತಾಪಂ ಅಧ್ಯಕ್ಷೆ ರೇಣುಕಾಚವ್ಹಾಣ ಟಿಎಚ್‌ಒ ಡಾ| ಜಗದೀಶಚಂದ್ರ
ಬುಳ್ಳ, ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ, ಎಇಇ ವೀರಣ್ಣ ಕುಣಕೇರಿ, ಎಇಇ ಅಶೋಕ ತಳವಾಡೆ, ಡಾ| ದೀಪಕ ಪಾಟೀಲ, ತಾಪಂ ಸದಸ್ಯರಾದ ರಾಮರಾವ ರಾಠೊಡ, ಪ್ರೇಮಸಿಂಗ್ ಜಾಧವ್, ಜಿಪಂ ಸದಸ್ಯ ನಿಂಬೆಣ್ಣಪ್ಪ, ಸಿದ್ದು ಮಾನಕರ, ಶರಣಗೌಡ ಪಾಟೀಲ, ಭವಾನಿ ಪತ್ತೆಪುರ, ಗ್ರಾಪಂ ಅಧ್ಯಕ್ಷೆ ಅನುಸೂಯ ರಾಠೊಡ, ಉಪಾಧ್ಯಕ್ಷ ರೇವಣಸಿದ್ದಪ್ಪ, ಗ್ರೇಡ್ 2 ತಹಸೀಲ್ದಾರ ಮಾಣಿಕರಾವ್ ಇದ್ದರು. ಡಿಎಚ್‌ಒ ಡಾ| ಶಿವರಾಜ ಸಜ್ಜನಶೆಟ್ಟಿ ಸ್ವಾಗತಿಸಿದರು. ದತ್ತು ಪಾಟೀಲ ನಿರೂಪಿಸಿದರು. ಕಾಳೇಶ್ವರ ರಾಮಗೊಂಡ ವಂದಿಸಿದರು.