Advertisement

ಶೀಘ್ರವೇ ಸ್ಪ್ಯಾಮ್‌ ಕರೆಗಳಿಂದ ಮುಕ್ತಿ?: ಹೊಸ ದೂರಸಂಪರ್ಕ ವಿಧೇಯಕದಲ್ಲಿ ಕ್ರಮಗಳ ಸೇರ್ಪಡೆ

12:15 PM Sep 25, 2022 | Shwetha M |

ನವದೆಹಲಿ: ಅನಾಮಧೇಯ ಸಂಖ್ಯೆಗಳಿಂದ ಕರೆ ಮಾಡಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇಂತಹ ಸ್ಪ್ಯಾಮ್‌ ಕರೆ ಮತ್ತು ಸಂದೇಶಗಳಿಗೆ ಕಡಿವಾಣ ಹಾಕುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಹೊಸ ಟೆಲಿಕಾಂ ಮಸೂದೆಯಲ್ಲಿ ಅದಕ್ಕೆಂದು ಹಲವು ಕ್ರಮಗಳನ್ನು ಸೇರಿಸಿಕೊಂಡಿರುವುದಾಗಿ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

Advertisement

“ಪ್ರತಿಯೊಬ್ಬ ಗ್ರಾಹಕನಿಗೆ ತನಗೆ ಯಾರಿಂದ ಕರೆ ಬರುತ್ತಿದೆ ಎನ್ನುವುದನ್ನು ತಿಳಿಯುವ ಹಕ್ಕಿದೆ. ಈವರೆಗೆ ಅದು ಕಾಯ್ದೆಯಲ್ಲಿ ಇರಲಿಲ್ಲ. ಇದೀಗ ಅದನ್ನು ಕಾಯ್ದೆ ಮಾಡಲಾಗುತ್ತಿದೆ. ಅದರಿಂದಾಗಿ ಸ್ಪ್ಯಾಮ್‌ ಕರೆಗಳಿಗೆ ಕಡಿವಾಣ ಬಿದ್ದಂತಾಗುತ್ತದೆ. ಮಾಮೂಲಿ ಕರೆ ಮಾತ್ರವಲ್ಲದೆ, ಜೂಮ್‌, ವಾಟ್ಸ್‌ಆ್ಯಪ್‌ಗಳಂತಹ ಆ್ಯಪ್‌ಗಳಲ್ಲಿ ಕರೆ ಮಾಡಿದರೂ, ಅವರ ಮಾಹಿತಿಯನ್ನು ಕರೆ ಸ್ವೀಕರಿಸುವವರಿಗೆ ನೀಡುವಂತೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.

ಈ ಮಸೂದೆಯಲ್ಲಿ ಗ್ರಾಹಕರ ರಕ್ಷಣೆ ವಿಚಾರದಲ್ಲಿ ಹೆಚ್ಚು ಗಮನ ಕೊಡಲಾಗಿದೆ. ಈಗಿರುವ ಎಲ್ಲ ನಿಯಮಗಳ ಜೊತೆ ಹಲವು ಸೇರ್ಪಡೆಗಳೂ ಆಗಲಿವೆ ಎಂದೂ ಸಚಿವರು ಮಾಹಿತಿ ಕೊಟ್ಟಿದ್ದಾರೆ.

ಸದ್ಯ ಈ ಮಸೂದೆಗೆ ಸಾರ್ವಜನಿಕರಿಂದ ಸಲಹೆ ಕೋರಲಾಗಿದ್ದು, ಸಲಹೆಗಳನ್ನಾಧರಿಸಿ ಅಂತಿಮ ಕರಡು ಸಿದ್ಧಪಡಿಸಲಾಗುವುದು. ಇದು ಕಾಯ್ದೆ ರೂಪ ಪಡೆಯಲು ಕನಿಷ್ಠ 6 ತಿಂಗಳ ಕಾಲಾವಕಾಶ ಬೇಕು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next