Advertisement

ದೇಶೀಯ ಜಿಪಿಎಸ್‌ 2018ರಲ್ಲಿ ಸೇವೆಗೆ ಸಿದ್ಧ

01:00 PM May 29, 2017 | Team Udayavani |

ಹೊಸದಿಲ್ಲಿ: ಅರಬ್ಬಿ ಸಮುದ್ರದಲ್ಲಿ ಅಥವಾ ದೇಶದ ಇನ್ನಾವುದೇ ಮೂಲೆಯಲ್ಲಿ ದಾರಿ ತಪ್ಪಿದರೆ ಇನ್ಮುಂದೆ ಆತಂಕ ಪಡಬೇಕಾಗಿಲ್ಲ. ‘ನಾವಿಕ್‌ (‘NavIC’) ದಾರಿಕಾಣದೇ ಕುಳಿತವರ ನೆರವಿಗೆ ಬರಲಿದೆ! ಹೌದು, ಭಾರತದಲ್ಲೇ ಸಿದ್ಧಪಡಿಸಲಾದ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ (ಜಿಪಿಎಸ್‌) 2018ರ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಧಿಪಡಿಸಲಾದ ‘ದ ಇಂಡಿಯನ್‌ ನೇವಿಗೇಷನ್‌ ಸೆಟಲೈಟ್‌ ಸಿಸ್ಟಂ’ (ಐಆರ್‌ಎನ್‌ಎಸ್‌ಎಸ್‌) ಇದಾಗಿದ್ದು, ಇದನ್ನೇ ‘ನಾವಿಕ್‌’ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಸಂಪರ್ಕ ಸಾಧಿಸಿ ಎಲ್ಲಿದ್ದಾರೆಂದು ಪತ್ತೆಹಚ್ಚಲು ಸಾಧ್ಯ.

Advertisement

ಇದರ ನಿರ್ವಹಣೆಗಾಗಿ ಈಗಾಗಲೇ ಭಾರತ ಏಳು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ್ದು, ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಪ್ರಾಥಮಿಕ ಪರೀಕ್ಷೆ ಯಶಸ್ವಿಯೂ ಆಗಿದೆ. ಮುಂದಿನ ವರ್ಷ ಸೇವೆ ಲಭ್ಯವಾಗಲಿದೆ ಎಂದು ಅಹಮದಾಬಾದ್‌ ಮೂಲದ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ತಪನ್‌ ಮಿಶ್ರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next