ಮೈಸೂರು: ಲಾಕ್‌ಡೌನ್ ಬಿಡುವಿನ ವೇಳೆಯನ್ನುವಿದ್ಯಾರ್ಥಿಗಳು ಜ್ಞಾನರ್ಜನೆ ವೃದ್ಧಿ ಹಾಗೂ ಉತ್ತಮಭವಿಷ್ಯ ರೂಪಿಸಿಲು ವಿನಿಯೋಗಿಸಬೇಕು ಎಂದುರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಕ್ಷಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆಯೋಜಿಸಿರುವಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ 50ದಿನಗಳ ಆನ್‌ಲೈನ್ ತರಬೇತಿ ಶಿಬಿರದ ಉದ್ಘಾಟನಾಕಾರ್ಯಕ್ರಮದಲ್ಲಿ ವರ್ಚುವಲ್ ವೇದಿಕೆಯಲ್ಲಿಭಾಗವಹಿಸಿ ಚಾಲನೆ ನೀಡಿದರು.
ಕೋವಿಡ್ ಸಮಯದಲ್ಲೂ ವಿದ್ಯಾರ್ಥಿಗಳಿಗೆಅನುಕೂಲವಾಗುವಂತೆ ಆನ್‌ಲೈನ್ ತರಬೇತಿ ಶಿಬಿರಆಯೋಜಿಸಿರುವುದು ಶ್ಲಾಘನೀಯ. ಬದಲಾದಕಾಲಘಟ್ಟದಲ್ಲಿ ಎಲ್ಲರ ಜೀವನದಲ್ಲಿ ಬಹಳಷ್ಟುಬದಲಾವಣೆ ತಂದಿದೆ. ಈ ಸಾಂಕ್ರಾಮಿಕ ಉಂಟುಮಾಡಿರುವ ಸಮಯದಿಂದ ಖನ್ನತೆಗೆಒಳಗಾಗಬೇಕಿಲ್ಲ.
ಸಕಾರಾತ್ಮಕ ಭಾವನೆಯಿಂದಇರಬೇಕು. ಇಂಥ ಸಮಯದಲ್ಲಿ ವಿದ್ಯಾರ್ಥಿಗಳುಈ ತರಹದ ಶಿಬಿರಗಳನ್ನು ಸದುಪಯೋಗಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ,ಕೋವಿಡ್‌ನಿಂದ ದೊರೆತಿರುವ ಸಮಯವನ್ನುವ್ಯರ್ಥ ಮಾಡದೇ, ವಿದ್ಯಾರ್ಥಿಗಳು ಮತ್ತು ಪರೀಕ್ಷಾರ್ಥಿಗಳು ಜ್ಞಾನರ್ಜನೆಗೆ ಈ ಸಮಯವನ್ನು ವ್ಯಯಿಸಬೇಕು.
ಲಾಕ್‌ಡೌನ್ ವೇಳೆ ವಿದ್ಯಾರ್ಥಿಗಳಿಗೆಅನುಕೂಲವಾಗಲೆಂದು ಕೆಎಎಸ್, ಬ್ಯಾಂಕಿಂಗ್‌ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್‌ಮೂಲಕ ತರಬೇತಿ ಆರಂಭಿಸಿದೆವು. ಇದಕ್ಕೆ ಕೆಎಸ್‌ಒಯು ಕನೆಕ್ಟ್ ಎಂಬ ಆ್ಯಪ್ ಅನ್ನು ವೇದಿಕೆಯನ್ನಾಗಿನಿರ್ಮಿಸಿದ್ದೇವೆ. ವಿವಿಯ ಎಲ್ಲಾ ಪ್ರಾಧ್ಯಾಪಕರಿಗೆಲ್ಯಾಪ್‌ಟಾಪ್ ವಿತರಿಸಲಾಗಿದೆ. ಈ ಮೂಲಕವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್‌ಲೈನ್‌ಪಾಠ ಮಾಡಲು ಸೂಚಿಸಲಾಗಿದೆ ಎಂದರು.
ಮುಕ್ತ ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣಮಾತನಾಡಿ, ಆನ್‌ಲೈನ್ ಶಿಬಿರಕ್ಕೆ ರಾಜ್ಯದ ವಿವಿಧಜಿಲ್ಲೆಗಳಿಂದ 400ಕ್ಕೂ ಹೆಚ್ಚು ಪರೀûಾ ಆಕಾಂಕ್ಷಿಗಳುನೋಂದಾಯಿಸಿಕೊಂಡಿದ್ದಾರೆ ಎಂದರು.ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಡಾ.ಎ.ಖಾದರ್ ಪಾಷಾ ಅವರು ಪರೀಕ್ಷಾರ್ಥಿಗಳಿಗೆಪರೀಕ್ಷೆ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋನಾಧಿಕಾರಿಜೈನಹಳ್ಳಿ ಸತ್ಯನಾರಾಯಣ ಗೌಡ ಅವರು ಶಿಬಿರದಮಾಹಿತಿ ನೀಡಿದರು.