Advertisement

ಗೋಡೆಗಳಿಲ್ಲದ ತರಗತಿಗೆ ಸಿದ್ಧರಾಗಬೇಕು

04:53 PM Jul 31, 2018 | Team Udayavani |

ತುಮಕೂರು: ಇಂದಿನ ಅಧ್ಯಾಪಕರು ತಂತ್ರಜ್ಞಾನದ ಯುಗಕ್ಕೆ ತೆರೆದುಕೊಳ್ಳಬೇಕು. ಗೋಡೆಗಳಿಲ್ಲದ ತರಗತಿಗಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು ಎಂದು ನ್ಯಾಕ್‌ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್‌.ಎ. ರಂಗನಾಥ ತಿಳಿಸಿದರು.

Advertisement

ತುಮಕೂರು ವಿಶ್ವವಿದ್ಯಾಲಯದ ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಮತ್ತು ಉನ್ನತ ಶಿಕ್ಷಣದ ಪ್ರಗತಿ – ನಾವು ಭವಿಷ್ಯಕ್ಕೆ ಸಿದ್ಧರಾಗಿದ್ದೇವೆಯೇ ಎಂಬ ವಿಷಯ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ಉನ್ನತ ಶಿಕ್ಷಣಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಿಶ್ವವಿದ್ಯಾಲಯಗಳು ನಿರುದ್ಯೋಗಿಗಳನ್ನು ಸೃಷ್ಟಿಸುವ ಸಂಸ್ಥೆಗಳಾಗಬಾರದು ಎಂದು ಹೇಳಿದರು.

ಶಿಕ್ಷಣದಲ್ಲಿ ಸಮಗ್ರತೆ ಅಗತ್ಯ: ಏಕ ಶಿಸ್ತೀಯ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಉನ್ನತ ಶಿಕ್ಷಣದಲ್ಲಿ ಸಮಗ್ರತೆಯ ದೃಷ್ಟಿಕೋನ ಬೆಳೆಯಬೇಕು. ಸಂಶೋಧನೆ, ಉದ್ಯೋಗಾರ್ಹತೆ, ಬೋಧನೆಯ ಗುಣಮಟ್ಟ, ಮೂಲಸೌಕರ್ಯ, ಅಂತಾರಾಷ್ಟ್ರೀಕರಣ, ಜ್ಞಾನ ವಿಸ್ತಾರ ಹಾಗೂ ಹೊಸತನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುತ್ತವೆ. ಜಾಗತಿಕ ಮಟ್ಟದಲ್ಲಿ ಭಾರತದ ವಿಶ್ವವಿದ್ಯಾಲಯಗಳು ಕಾಣಿಸಿಕೊಳ್ಳಬೇಕೆಂದರೆ ಈ ಕ್ಷೇತ್ರದಲ್ಲಿ ಔನ್ನತ್ಯ ಸಾಧಿಸುವುದು ಅನಿವಾರ್ಯ ಎಂದು ನುಡಿದರು.

 ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ವೀರೇಶಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ, ತೀರಾ ಸರಳವಾದ ಪಠ್ಯಕ್ರಮವನ್ನು ರೂಪಿಸುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಸಮಗ್ರಜ್ಞಾನ ಲಭಿಸಬೇ ಕೆಂದರೆ ಕಠಿಣ ಹಾಗೂ ವಿಸ್ತಾರವಾದ ಪಠ್ಯಕ್ರಮ ಇಡುವುದೇ ಹೆಚ್ಚು ಸೂಕ್ತ. ಅಕ್ಷರಸ್ಥರೇ ರಾಕ್ಷಸರಾಗುತ್ತಿರುವ ಇಂದಿನ ಕಾಲದಲ್ಲಿ ವ್ಯಕ್ತಿಗಳನ್ನು ಮನುಷ್ಯರ ನ್ನಾಗಿ ಬೆಳೆಸುವ ಸವಾಲು ದೊಡ್ಡದು ಎಂದರು.

Advertisement

ವಿವಿ ಅಭವೃದ್ಧಿಗೆ ಶ್ರಮಿಸಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿ.ವಿ. ಕುಲಪತಿ ಪ್ರೊ.ವೈ.ಎಸ್‌. ಸಿದ್ದೇಗೌಡ ವಿವಿಯ ಆಡಳಿತದಲ್ಲಿ ಒಬ್ಬಜವಾನನಿಂದ ಕುಲಪತಿಯವರೆಗೆ ಎಲ್ಲರಿಗೂ ಅವರದೇ ಆದ ಜವಾಬ್ದಾರಿಗಳು ಇರುತ್ತವೆ. ಎಲ್ಲರೂ ಸರಿ ಮಾರ್ಗದಲ್ಲಿ ಆಲೋಚಿಸಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಾಗ ಮಾತ್ರ ವಿವಿಯನ್ನು ಉನ್ನತ ಮಟ್ಟಕ್ಕೆಕೊಂಡೊಯ್ಯುವುದು ಸಾಧ್ಯ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಬಿ.ಎಸ್‌. ಗುಂಜಾಳ್‌, ಕಾರ್ಯಕ್ರಮದ ಸಂಯೋಜಕ ಪ್ರೊ.ಎಂ.ಕೊಟ್ರೇಶ್‌, ಡಾ. ಗೀತಾ ವಸಂತ ಮೊದಲಾದವರು ಇದ್ದರು.  ವಿದ್ಯಾರ್ಥಿಗಳಿಗೆ ಅಗತ್ಯ ಆಧುನಿಕ ಕೌಶಲ್ಯ ಬೆಳೆಸಿ ಹೊಸ ಯುಗದ ಅವಶ್ಯಕತೆಗೆ ಅನುಗುಣವಾದ ಜ್ಞಾನ, ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದಕ್ಕೆ ಅಧ್ಯಾಪ ಕರು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್‌.ಎ. ರಂಗನಾಥ ಹೇಳಿದರು. ಕಾಲೇಜುಗಳಲ್ಲಿ ಸಂಶೋಧನ ಸಂಸ್ಕೃತಿ ಕುಸಿಯುತ್ತಿದೆ. ಪದವಿ ಹಂತದಲ್ಲಿ ವಾಣಿಜ್ಯ ಕೋರ್ಸುಗಳಿಗೆ ಮಾತ್ರ ಬೇಡಿಕೆ ಹೆಚ್ಚುತ್ತಿದೆ. ಮೂಲ ವಿಜ್ಞಾನ ಹಾಗೂ ಮಾನವಿಕ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿರುವುದು ಆತಂಕಕಾರಿ ವಿಷಯ ಎಂದರು. 

ಸಂಸ್ಕೃತಿಯ ಅರಿವು ಮೂಡಿಸಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ವೀರೇಶಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ, ಕಲಿಯಲು ಆಸಕ್ತಿ ಉಳ್ಳವರು ಮಾತ್ರ ಕಲಿಸಲು ಯೋಗ್ಯರು ಎಂದ ಅವರು ಮಾನವ ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯಗಳು ಸಹ ಅಷ್ಟೇ ಮುಖ್ಯ.ಮಕ್ಕಳಿಗೆ ಭಾರತೀಯ ಸಂಸ್ಕೃತಿ ಹಾಗೂ ರಾಷ್ಟ್ರೀಯತೆ ಬಗ್ಗೆ ಜಾಗೃತಿ ಮೂಡಿಸುವಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next