ಇಂಡಿ: ಸರಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಅಧಿಕಾರಿಗಳು ನಿವೃತ್ತಿ ಹೊಂದಲೇಬೇಕು ಎಂದು ನಿವೃತ್ತಿ ಹೊಂದಿದ ಶಿಶು ಅಭಿವೃದ್ಧಿ ಅಧಿಕಾರಿ ಗೋವರ್ಧನ ಚೆಲುವಾದಿ ಹೇಳಿದರು.
ಪಟ್ಟಣದ ಸರಕಾರಿ ನೌಕರರ ಸಭಾಭವನದಲ್ಲಿ ಶಿಶು ಅಭಿವೃದ್ಧಿ ಇಲಾಖೆಯಲ್ಲಿ ನಿವೃತ್ತರಾದ ಹಿನ್ನೆಲೆಯಲ್ಲಿ ಅವರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅನುಭವೇ ಪಾಠ ಶಾಲೆಯಾಗಿರುವುದರಿಂದ ಜೀವನದ ಕೊನೆ ಗಳಿಗೆಯಲ್ಲಿಯೂ ಸಮಾಜದ ಬಡವರ, ದೀನದಲಿತರ ಸೇವೆ ಮಾಡುವುದಾಗಿ ಹೇಳಿದರು. ಸರಕಾರಿ ಸೇವೆ ಸಿಗುವುದು ದುರ್ಲಭ. ಸರಕಾರಿ ಸೇವೆ ದೇವರ ಕೆಲಸ ಎಂದು ಜೀವನದಲ್ಲಿ ಯಾರು ಅಳವಡಿಸಿಕೊಳ್ಳುತ್ತಾರೆ ಅವರಿಗೆ ಯಾವುದೇ ತೊಂದರೆ ಬರುವುದಿಲ್ಲ. ಸರಕಾರ ಕುಟುಂಬ ನಿರ್ವಹಣೆಗಾಗಿ ನಮಗೆ ವೇತನ ನೀಡುತ್ತದೆ. ಅನ್ನ ನೀಡುವ ಇಲಾಖೆಗೆ ದ್ರೋಹ ಮಾಡಬಾರದು. ಅಧಿಕಾರ ಶಾಶ್ವತ ಅಲ್ಲ ಇರುವಷ್ಟು ದಿನಗಳಲ್ಲಿ ಎಲ್ಲ ಜನರ ಪ್ರೀತಿ, ವಿಶ್ವಾಸ ಗಳಿಸಬೇಕು ಎಂದರು.
ಕ.ರಾ. ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೋರ, ನಾಗಣ್ಣ ಗಣಜಲಖೇಡ, ವಿ. ದೊರೆಸ್ವಾಮಿ, ಶಿಕ್ಷಣ ಇಲಾಖೆಯ ವಿಜು ಆಲಗೂರ, ಅಂಬರೇಶ ತಾಂಡೂರ, ಸತ್ಯದಾಸ ಪೇರುಮಾಳ, ವೆಂಕಟ ಶಿವಪ್ಪ, ಗೋಪಾಲ ಅಥರ್ಗಾ, ಎ.ಎಂ. ಜಮಾದಾರ, ಆರ್. ಎಸ್.ಬಿರಾದಾರ, ಭೀಮಾಶಂಕರ ಮೂರಮನ್, ಮಲ್ಲು ಮಡ್ಡಿಮನಿ, ಮುತ್ತಪ್ಪ ಪುತೆ, ನಾಗೇಶ ಶಿವಶರಣ, ಸೋಮು ಮ್ಯಾಕೇರಿ, ಗಂಗು ತೆನ್ನಳ್ಳಿ, ಗಣಪತಿ ಬಾಣಿಕೋಲ, ತುಕಾರಾಮ ಗುನ್ನಾಪುರ, ನಾಗು ತಳಕೇರಿ, ಪರಶುರಾಮ ವಾಘಮೋರೆ, ರಾಜು ಪಡಗಾನೂರ, ವಿಠuಲ ಮೇಲಿನಕೇರಿ, ಪರಶುರಾಮ ಶಿವಶರಣ, ಕೃಷ್ಣಾ ಸಿಂದಗಿ, ಇಲಾಖೆಯ ಮೇಲ್ವಿಚಾರಕಿಯರು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಪುತಳಾಬಾಯಿ ಭಜಂತ್ರಿ ನಿರೂಪಿಸಿದರು. ಸವಿತಾ ವಂದಿಸಿದರು.