ಯಾದಗಿರಿ: ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಸರ್ಕಾರದ ಸೌಲಭ್ಯ ಪಡೆದು ಮುಂದೆ ಬರಬೇಕು. ಬಡತನ ರೇಖೆಯಿಂದ ಹೊರಬರಲು ಚಿಂತಿಸಬೇಕು ಎಂದು ಕರ್ನಾಟಕ ಪ್ರದೇಶ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಹೇಳಿದರು.
ಇಲ್ಲಿನ ಗಂಜ್ ಪ್ರದೇಶದಲ್ಲಿರುವ ಮೌನೇಶ್ವರ ದೇವಸ್ಥಾನ ಆವರಣದಲ್ಲಿ ಮೆಕ್ಯಾನಿಕ್‌ಗಳು ಮತ್ತು ಮಾಲೀಕರ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಮೆಕ್ಯಾನಿಕ್‌ಗಳು ಮತ್ತು ಮಾಲೀಕರು ಸರ್ಕಾರದಿಂದ ಬರುವಂತಹ ಸೌಲಭ್ಯ ಪಡೆಯದೆ ವಂಚಿತರಾಗಿದ್ದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಜಿಲ್ಲೆಯಾಗಿ ಸುಮಾರು ಹತ್ತು ವರುಷ ಗತಿಸಿದರೂ ಕೂಡ, ಇಡಿ ರಾಜ್ಯದಲ್ಲೇ 42 ಪ್ರತಿಶತ ಬಡತನದಲ್ಲಿ ಇರುವವರ ಮೊದಲನೇ ಜಿಲ್ಲೆ ಇದಾಗಿದೆ. ಇದಕ್ಕೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಕಾರಣ ಕಾರ್ಮಿಕರು, ಮೆಕ್ಯಾನಿಕ್‌ಗಳು, ಮಾಲೀಕರು ಜಾಗೃತರಾಗಿ ಆಸ್ತಿ ಮಾಡುವುದನ್ನು ಬಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ಕೌಳೂರು, ಹನುಮಂತ ಆರ್ಯರ್, ಮೊಹಮದ್ ಶಫಿ, ಬನ್ನಪ್ಪಗೌಡ ಯಲ್ಹೇರಿ, ಮೊಹಮದ್ ಗೌಸ್ ಯಾದಗಿರಿ, ಮಹ್ಮದ್ ಕರೀಮ್, ಸೈಯದ್ ಶಿರಾಜುದ್ದಿನ್, ಮೊಹಮದ್ ನಿಸ್ಸಾರ್, ವೀರಣ್ಣ ಯಳವಾರ, ಜಲಾಲ ಸಾಬ್ ಯಾದಗಿರಿ, ಚಾಂದ್ ಪಾಷಾ ಯಾದಗಿರಿ, ಪ್ರಭು ಹಯ್ನಾಳ, ಎಂ.ಡಿ ಉಮರ್, ಮೊಹಮದ್ ಜಲಾಲುದ್ದೀನ್, ಬಾಬರ್ ಅಲಿಮುದ್ದಿನ್ ಇದ್ದರು.