Advertisement

ಸಾಧಕರಿಂದ ಸ್ಫೂರ್ತಿ ಪಡೆಯಿರಿ: ಸಿಇಒ

03:16 PM Apr 06, 2017 | Team Udayavani |

ಕಲಬುರಗಿ: ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಸಾಧಕರಿಂದ ಸ್ಫೂರ್ತಿ ಪಡೆಯಬೇಕು. ಅವರು ಸಾಧನೆ ಮಾಡಿದ ಕ್ಷೇತ್ರ ಮತ್ತು ವೃತ್ತಿ ಮಹತ್ವದ್ದಲ್ಲ. ಪ್ರತಿಭೆ ಮಹತ್ವದ್ದಾಗಿದೆ ಎಂದು ಪ್ರಭಾರಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು. 

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿ ಹರಿಕಾರ, ದೀನ ದಲಿತೋದ್ಧಾರಕ ಹಾಗೂ ಮಾಜಿ ಉಪ ಪ್ರಧಾನಿ ಡಾ| ಬಾಬು ಜಗಜೀವನರಾಂ ಅವರ 110ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಎಲ್ಲರೂ ಒಳ್ಳೆಯ ಉದ್ದೇಶ ಹಾಗೂ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಸಮಾಜದಲ್ಲಿ ಸಾಮಾಜಿಕ ನ್ಯಾಯ-ನೀತಿ ದೊರಕಿಸಲು ಎಲ್ಲರೂ ಶ್ರಮಿಸಬೇಕು. ಡಾ| ಬಾಬು ಜಗಜೀವನರಾಂ ಶಿಕ್ಷಣ ಪಡೆದಿದ್ದರಿಂದ ಉನ್ನತ ಹುದ್ದೆ ಅಲಂಕರಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.

ಶಾಸಕ ದತ್ತಾತ್ರೇಯ ಪಾಟೀಲ ಸಿ. ರೇವೂರ್‌ ಮಾತನಾಡಿ, ಬಹುದಿನದ ಕನಸಾಗಿದ್ದ ಬಾಬು  ಜಗಜೀವನರಾಂ ಅವರ ಪುತ್ಥಳಿ ಅನಾವರಣ ಕಾರ್ಯ ಇನ್ನೂ ಕೆಲವೇ ದಿನಗಳಲ್ಲಿ ನೆರವೇರಲಿದೆ. ಪುತ್ಥಳಿ ನಿರ್ಮಾಣಕ್ಕೆ 15 ಲಕ್ಷ ರೂ. ಹಾಗೂ ಪುತ್ಥಳಿ ಆವರಣ ಸುಂದರೀಕರಣಗೊಳಿಸಲು 15 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು. 

ಶಾಸಕ ಡಾ| ಖಮರುಲ್‌ ಇಸ್ಲಾಂ, ಪಾಲಿಕೆ ಮಹಾಪೌರ ಸೆ„ಯದ್‌ ಅಹ್ಮದ್‌, ಜಿ.ಪಂ. ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಡಾ| ಬಾಬು ಜಗಜೀವನರಾಂ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪರಮೇಶ್ವರ ಆರ್‌. ಖಾನಾಪುರ, ದಲಿತ ಮುಖಂಡರಾದ ಶ್ಯಾಮ ನಾಟೀಕಾರ, ಭೀಮಣ್ಣ ಬಿಲ್ಲವ, ರಾಜು ವಾಡೇಕಾರ, ಗುರುಶಾಂತ ಪಟ್ಟೇದಾರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. ಸರ್ಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ  ಇಂದುಮತಿ ದಿವಾಕರ್‌ ಉಪನ್ಯಾಸ ನೀಡಿದರು. 

Advertisement

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್‌. ರಾಜಪ್ಪ ಸ್ವಾಗತಿಸಿದರು. ಇದಕ್ಕೂ ಮುನ್ನ ಕಲಬುರಗಿಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಡಾ| ಎಸ್‌.ಎಂ.ಪಂಡಿತ ರಂಗಮಂದಿರದವರೆಗೆ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಶಾಸಕ ದತ್ತಾತ್ರೇಯ ಪಾಟೀಲ ಸಿ. ರೇವೂರ ಚಾಲನೆ ನೀಡಿದರು. ಎಸ್‌ಪಿ ಎನ್‌. ಶಶಿಕುಮಾರ, ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಧಿಕಾರಿ ಜಯಪ್ರಕಾಶ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next