ತಿಪಟೂರು: ತಾಲೂಕಿನಲ್ಲಿ ಬರಗಾಲ ವಿದ್ದು, ಜಾನುವಾರುಗಳಿಗೆ ಮೇವು ಇಲ್ಲದ ಕಾರಣ ಮೇವು ಬ್ಯಾಂಕ್ ತೆರಿದಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಬಿ. ಆರತಿ ತಿಳಿಸಿದರು.
ತಾಲೂಕಿನ ಹೊನ್ನವಳ್ಳಿ ಹೋಬಳಿಯ ಬಾಗುವಾಳದ ಶ್ರೀಮುನಿಯಪ್ಪ ಆಲದ ಮರದ ಬಳಿ ಮೇವು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ರೈತರಿಗೆ ಮತ್ತು ಜಾನುವಾರುಗಳಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಪ್ರತಿ ಹೋಬಳಿಯ ಎರಡು, ಮೂರು ಕಡೆಗಳಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆಯಲಾಗುವುದು.
ಪ್ರತಿದಿನವೂ ಗೋ ಶಾಲೆಗೆ ಬಂದು ಹೋಗುವುದನ್ನು ತಪ್ಪಿಸುವ ಸಲುವಾಗಿ ಒಂದೇ ಬಾರಿ 15 ದಿನಗಳಿಗಾಗುವಷ್ಟು ಮೇವನ್ನು ನೀಡಲಾಗುವುದು ಎಂದು ಹೇಳಿದರು.
ಅರ್ಹ ರೈತರಿಗೆ ನ್ಯಾಯಯುತವಾಗಿ ತಲುಪಬೇಕಾದ ಮೇವು ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆ ವಹಿಸ ಲಾಗುವುದು. ರೈತರು ತಮ್ಮಲ್ಲಿರುವ ರಾಸುಗಳ ಮಾಹಿತಿ ಹಾಗೂ ಸಂಬಂಧಿ ಸಿದ ದಾಖಲೆಗಳನ್ನು ನೀಡಿ, ಮೇವು ಕಾರ್ಡ್‌ಗಳನ್ನು ಆಯಾ ವ್ಯಾಪ್ತಿಯ ಪಶು ಇಲಾಖೆಯಿಂದ ಪಡೆದು ಕೊಳ್ಳಬೇಕು. ರೈತರು ಪ್ರತಿ ಕಿ.ಲೋ ಮೇವಿಗೆ 2 ರೂ. ಮಾತ್ರ ಭರಿಸಬೇಕಿದ್ದು, ಮೇವು ವಿತರಣೆ ಗಾಗಿ ಎಲ್ಲಾ ರೀತಿಯ ವ್ಯವಸ್ಥೆ ಮಾಡ ಲಾಗಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.