Advertisement

ನಗರದಲ್ಲೊಂದು ಅಪ್ಪಟ ಬೈಹುಲ್ಲಿನ ಮಾಡು !

11:55 PM Jun 11, 2020 | Sriram |

ಉಡುಪಿ: ಸುಮಾರು ನಾಲ್ಕೈದು ದಶಕಗಳ ಹಿಂದೆ ಹಳ್ಳಿಗಳಲ್ಲಿ ಬೈಹುಲ್ಲಿನ ಮಾಡು ಸಹಜವಾಗಿತ್ತು. ಇದು ಬಡತನದ ಸಂಕೇತವೂ ಆಗಿ ಬಡತನ ನಿವಾರಣೆ ಕ್ರಮಗಳಲ್ಲಿ ಇದರ ಬದಲು ಹೆಂಚಿನ ಮನೆಗಳುಬರತೊಡಗಿದವು. ಈಗ ಹೆಂಚಿನ ಮನೆಯೂ ಹೋಗಿ ಎಲ್ಲೆಡೆ ಕಾಂಕ್ರೀಟ್‌ ಮನೆಗಳು ಕಂಡುಬರುತ್ತಿವೆ. ಇದು ಸಿರಿವಂತಿಕೆ, ಅಂತಸ್ತಿನ ಸಂಕೇತ ವಾಗಿದೆ. ಆದರೆ ಇದೇ ವೇಳೆ ಸ್ಟಾರ್‌ ಹೊಟೇಲ್‌, ರೆಸಾರ್ಟ್‌ಗಳಲ್ಲಿ “ಹಟ್‌’ ಹೆಸರಿನ ಬೈಹುಲ್ಲಿನ ಗುಡಿಸಲು ಪ್ರತಿಷ್ಠೆಯ ಸಂಕೇತವಾದವು.

Advertisement

ಈ ಎರಡೂ ವೈರುಧ್ಯಗಳ ನಡುವೆ ನಗರ- ಗ್ರಾಮಾಂತರವೆಂಬ ಭೇದವಿಲ್ಲದೆ ಬೈಹುಲ್ಲು ಹಾಕಿದ ಛಾವಣಿ ಕಂಡು ಬರುತ್ತಿಲ್ಲ. ಸುಮಾರು 30 ವರ್ಷಗಳ ಹಿಂದೆ ಶ್ರೀಕೃಷ್ಣಮಠದಲ್ಲಿ ಸರೋವರಕ್ಕೆ ಇಳಿಯುವ ಹಾಸುಗಲ್ಲುಗಳ ಮೇಲ್ಭಾಗ ಬೈಹುಲ್ಲಿನ ಛಾವಣಿಯನ್ನು ಮಳೆಗಾಲದಲ್ಲಿ ನಿರ್ಮಿಸುತ್ತಿದ್ದರು. ಈಗ ಮತ್ತೆ ಅದನ್ನು ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಮಿಸಿದ್ದಾರೆ.

ಬೈಹುಲ್ಲಿನ ಛಾವಣಿ ನಿರ್ಮಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮೂರ್‍ನಾಲ್ಕು ದಶಕಗಳಿಂದ ಈ ಕಸುಬೇ ನಿಂತು ಹೋದ ಕಾರಣ ಈ ಕೆಲಸ ಬಹಳ ಕಡಿಮೆ ಜನರಿಗೆ ಮಾತ್ರ ಗೊತ್ತಿದೆ. ಭತ್ತದ ಕೃಷಿಯಲ್ಲಿ ಫ‌ಸಲನ್ನು ಹಿಂದೆ ಕೈಯಲ್ಲಿ ಕೊಯ್ಯುತ್ತಿದ್ದರು. ಈಗ ಯಂತ್ರಗಳೇ ತುಂಡರಿಸುತ್ತಿ¤ವೆ. ಛಾವಣಿ ಮಾಡುವುದಾದರೆ ಕೈಯಲ್ಲಿ ಕೊಯ್ದ ಹುಲ್ಲು ಬೇಕು. ಛಾವಣಿ ಕೆಳ ಭಾಗಕ್ಕೆ ತೆಂಗಿನ ಗರಿಗಳಿಂದ ತಯಾರಿಸುವ ಮಡಲು ಬೇಕು. ಮಡಲು ನೇಯುವವರು ಯಾರೂ ಇಲ್ಲ. ಹೀಗೆ ಕೆಲಸದವರನ್ನು ಕುಂಜಾರಿನಿಂದಲೂ ಮಡಲನ್ನು ಅಲೆವೂರಿನಿಂದಲೂ ಹುಲ್ಲನ್ನು ಇನ್ನೆಲ್ಲಿಂದಲೋ ತರಿಸಿ ಹರಸಾಹಸಪಟ್ಟು ಬೈಹುಲ್ಲಿನ ಛಾವಣಿ ನಿರ್ಮಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next