Advertisement

ವಿಶ್ವಕಪ್‌ ಹಾಕಿ: ಜರ್ಮನಿ-ಬೆಲ್ಜಿಯಂ ಫೈನಲ್‌

11:06 PM Jan 27, 2023 | Team Udayavani |

ಭುವನೇಶ್ವರ: ಹಾಲಿ ಚಾಂಪಿಯನ್‌ ಬೆಲ್ಜಿಯಂ ಮತ್ತು ಜರ್ಮನಿ ವಿಶ್ವಕಪ್‌ ಹಾಕಿ ಫೈನಲ್‌ನಲ್ಲಿ ಸೆಣಸಲಿವೆ. ಶುಕ್ರವಾರದ ಮೊದಲ ಸೆಮಿಫೈನಲ್‌ನಲ್ಲಿ ಜರ್ಮನಿ 4-3ರಿಂದ ಆಸ್ಟ್ರೇಲಿಯವನ್ನು ಮಣಿಸಿತು. ದ್ವಿತೀಯಾರ್ಧ ದಲ್ಲಿ ಸ್ಟಾರ್‌ ಡ್ರ್ಯಾಗ್‌ ಫ್ಲಿಕರ್‌ ಗೊಂಝಾಲೊ ಪೀಲಟ್‌ ಸಾಧಿಸಿದ ಹ್ಯಾಟ್ರಿಕ್‌ ಜರ್ಮನಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು.

Advertisement

ನೆದರ್ಲೆಂಡ್ಸ್‌-ಬೆಲ್ಜಿಯಂ ನಡುವಿನ ಇನ್ನೊಂದು ಸೆಮಿಫೈನಲ್‌ ಫ‌ಲಿತಾಂಶ ಶೂಟೌಟ್‌ನಲ್ಲಿ ಇತ್ಯರ್ಥ ವಾಯಿತು. ನಿಗದಿತ ಅವಧಿಯಲ್ಲಿ ಪಂದ್ಯ 2-2 ಸಮಬಲದಲ್ಲಿ ಮುಗಿಯಿತು. ಬಳಿಕ ಶೂಟೌಟ್‌ನಲ್ಲಿ ಬೆಲ್ಜಿಯಂ 3-2 ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next