Advertisement

ಭಾರತದ ಕೋವಿಡ್ ಸಂಕಷ್ಟಕ್ಕೆ ಜರ್ಮನಿ ನೆರವು : ಬರಲಿದೆ ಬೃಹತ್ ಗಾತ್ರದ ಆಮ್ಲಜನಕ ಘಟಕ..!

06:45 PM May 04, 2021 | Team Udayavani |

ಜರ್ಮನಿ :  ಭಾರತದಲ್ಲಿನ ಆಕ್ಸಿಜನ್  ಕೊರತೆಯನ್ನು ಪರಿಹರಿಸುವ ಪ್ರಯತ್ನದಲ್ಲಿ ಜರ್ಮನಿ ಈಗ “ಬೃಹತ್ ಆಕ್ಸಿಜನ್ ಉತ್ಪಾದಿಸುವ ಘಟಕವನ್ನು ಕಳುಹಿಸುತ್ತಿದೆ, ಇದನ್ನು ತನ್ನ 12 ಸಶಸ್ತ್ರ ಪಡೆಗಳ ಅರೆವೈದ್ಯರು ನಿರ್ವಹಿಸಲಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Advertisement

ಅರೆವೈದ್ಯರ ತಂಡವು ಶನಿವಾರ(ಮೆ. 1) ನವದೆಹಲಿಗೆ ಆಗಮಿಸಿರುದಾಗಿವರದಿ ತಿಳಿಸಿದೆ.

ಓದಿ : ಆಕ್ಸಿಜನ್‌ ಪೂರೈಕೆ ವಿಳಂಬವಾದರೆ ಕೊರತೆ ತಪ್ಪಿದ್ದಲ್ಲ

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಭಾರತದ ಜರ್ಮನ್ ರಾಯಭಾರಿ ವಾಲ್ಟರ್ ಜೆ. ಲಿಂಡ್ನರ್,  ಜರ್ಮನಿಯಿಂದ ಭಾರತಕ್ಕೆ ತಲುಪುವ ಬೃಹತ್ ಆಮ್ಲಜನಕ ಉತ್ಪಾದಿಸುವ ಘಟಕವಾಗಿದ್ದು, ಇದು ದಿನಕ್ಕೆ 4,00,000 ಲೀಟರ್ ಆಮ್ಲಜನಕವನ್ನು ಉತ್ಪಾದಿಸುತ್ತದೆ ಮತ್ತು ಇದರಿಂದಾಗಿ ಸಾವಿರಾರು ಸೋಂಕಿತರಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

12 ಜರ್ಮನ್ ಅರೆವೈದ್ಯರ ತಂಡವು ಜರ್ಮನ್ ನಿಂದ ಈ ವಾರದ ಅಂತ್ಯದ ವೇಳೆಗೆ ಭಾರತಕ್ಕೆ ತಲುಪುವ ಆಕ್ಸಿಜನ್ ಘಟಕವನ್ನು ಸ್ಥಾಪಿಸಲು ಸಹಾಯ ಮಾಡಲಿದ್ದಾರೆ. ಮತ್ತು ಘಟಕವನ್ನು ನಿರ್ವಹಿಸಲು ಅವರು ಭಾರತೀಯ ತಜ್ಞರಿಗೆ ತರಬೇತಿ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.

Advertisement

ಜರ್ಮನಿಯ ವಾಯುಪಡೆಗೆ ಸೇರಿದ ಎರಡು ಏರ್‌ ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಎ 400 ಎಂ ಸಾರಿಗೆ ವಿಮಾನಗಳಲ್ಲಿ ಆಕ್ಸಿಜನ್ ಘಟಕ ಭಾರತವನ್ನು ತಲುಪಲಿದೆ.

ಈ ವಾರದ ಅಂತ್ಯದ ವೇಳೆಗೆ ಎರಡು ವಿಮಾನಗಳು ಜರ್ಮನಿಯಿಂದ  ದೆಹಲಿಗೆ ತಲುಪಲಿದ್ದು, ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವೆಲಪ್ ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ನಡೆಸುತ್ತಿರುವ ದೆಹಲಿ ಕಂಟೋನ್ಮೆಂಟ್‌ ನ ಸರ್ದಾರ್ ವಲ್ಲಭಭಾಯ್ ಪಟೇಲ್ ಕೋವಿಡ್ ಆಸ್ಪತ್ರೆಯಲ್ಲಿ ಬೃಹತ್ ಆಕ್ಸಿಜನ್ ಘಟಕವನ್ನು ಸ್ಥಾಪನೆ ಮಾಡಲಾಗುತ್ತದೆ.

ಈ ಆಕ್ಸಿಜನ್ ಘಟಕವು ಭಾರತದಲ್ಲಿ ಅಗತ್ಯ ಇರುವ ತನಕ ಉಳಿಯಲಿದ್ದು,  ಅಗತ್ಯವಿರುವ ತನಕ ಭಾರತದಲ್ಲಿ ಆಕ್ಸಿಜನ್ ಉತ್ಪಾದನೆಗೆ ಬಳಸಿಕೊಳ್ಳಲು ಜರ್ಮನಿ ಸರ್ಕಾರ ಅನುಮೋದಿಸಿರುವುದಾಗಿ ವರದಿ ತಿಳಿಸಿದೆ.

ಓದಿ : ಅಮೆರಿಕಾದ ಕೋವಿಡ್ ನೆರವು ಬುಧವಾರದವರೆಗೆ ವಿಳಂಬ

Advertisement

Udayavani is now on Telegram. Click here to join our channel and stay updated with the latest news.

Next