Advertisement

Germany visas; ಭಾರತೀಯ ಉದ್ಯೋಗಿಗಳಿಗೆ 20,000 ದಿಂದ 90,000ಕ್ಕೆ ಏರಿಕೆ: ಪ್ರಧಾನಿ ಮೋದಿ

07:57 PM Oct 25, 2024 | Team Udayavani |

ಹೊಸದಿಲ್ಲಿ: ಹೂಡಿಕೆಗೆ ಭಾರತಕ್ಕಿಂತ ಉತ್ತಮವಾದ ಸ್ಥಳವಿಲ್ಲ ಮತ್ತು ದೇಶದ ಬೆಳವಣಿಗೆಯ ಕತೆಗೆ ಸೇರಲು ಇದು ಸರಿಯಾದ ಸಮಯ ಎಂದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಹೂಡಿಕೆ ಮಾಡಲು ಜರ್ಮನಿಯ ಉದ್ಯಮಗಳನ್ನು ಶುಕ್ರವಾರ ಆಹ್ವಾನಿಸಿದ್ದಾರೆ.

Advertisement

ಇಲ್ಲಿ 18 ನೇ ಏಷ್ಯಾ-ಪೆಸಿಫಿಕ್ ಕಾನ್ಫರೆನ್ಸ್ ಆಫ್ ಜರ್ಮನ್ ಬಿಸಿನೆಸ್ 2024 ಅನ್ನು ಉದ್ದೇಶಿಸಿ ಮಾತನಾಡಿ, ವಿದೇಶಿ ಹೂಡಿಕೆದಾರರು ಭಾರತದ ಬೆಳವಣಿಗೆಯ ಕತೆಯಲ್ಲಿ ಭಾಗವಹಿಸಲು, ‘ಮೇಕ್ ಇನ್ ಇಂಡಿಯಾ’ ಉಪಕ್ರಮ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ಗೆ ಸೇರಲು ಸರಿಯಾದ ಸಮಯ ಇದಾಗಿದೆ ಎಂದು ಒತ್ತಿ ಹೇಳಿದರು.

ನುರಿತ ಭಾರತೀಯ ಉದ್ಯೋಗಿಗಳಿಗೆ ವೀಸಾಗಳನ್ನು 20,000 ರಿಂದ 90,000 ಕ್ಕೆ ಹೆಚ್ಚಿಸಲು ಜರ್ಮನಿ ನಿರ್ಧರಿಸಿರುವುದರಿಂದ ಭಾರತದ ಕೌಶಲ್ಯಪೂರ್ಣ ಮಾನವಶಕ್ತಿಯಲ್ಲಿ ಯುರೋಪಿಯನ್ ರಾಷ್ಟ್ರವು ವ್ಯಕ್ತಪಡಿಸಿರುವ ವಿಶ್ವಾಸ ಅದ್ಭುತವಾಗಿದೆ ಎಂದರು.

“ಭಾರತವು ಜಾಗತಿಕ ವ್ಯಾಪಾರ ಮತ್ತು ಉತ್ಪಾದನಾ ಕೇಂದ್ರವಾಗುತ್ತಿದೆ. ಭಾರತವು ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ, ಬೇಡಿಕೆ ಮತ್ತು ಮಾಹಿತಿಯ ಬಲವಾದ ಸ್ತಂಭಗಳ ಮೇಲೆ ನಿಂತಿದೆ. ರಸ್ತೆಗಳು ಮತ್ತು ಬಂದರುಗಳಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶವು ಪ್ರಪಂಚದ ಭವಿಷ್ಯಕ್ಕಾಗಿ ಬಹಳ ಮುಖ್ಯವಾಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next