Advertisement

101 ವರ್ಷದ ವ್ಯಕ್ತಿಯೊಬ್ಬನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಜರ್ಮನಿ ಕೋರ್ಟ್

10:22 AM Jun 29, 2022 | Team Udayavani |

ಬರ್ಲಿನ್‌: ಯೆಹೂದಿಗಳ ನಾಶಕ್ಕೆ ಪಣ ತೊಟ್ಟಿದ್ದ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನ ರಕ್ತದಾಹಕ್ಕೆ ಮರುಳಾಗಿ, ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ 3 ಸಾವಿರಕ್ಕೂ ಹೆಚ್ಚು ಯೆಹೂದಿಗಳ ಮಾರಣಹೋಮಕ್ಕೆ ಕಾರಣವಾಗಿದ್ದ 101 ವರ್ಷದ ವ್ಯಕ್ತಿಯೊಬ್ಬನಿಗೆ ಜರ್ಮನಿಯ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Advertisement

ವ್ಯಕ್ತಿಯ ವಿವರಗಳನ್ನು ಬಹಿರಂಗಗೊಳಿಸಲಾಗಿಲ್ಲ. ಈ ವ್ಯಕ್ತಿ, 1942ರಿಂದ 1945ರ ಅವಧಿಯಲ್ಲಿ ಉತ್ತರ ಬರ್ಲಿನ್‌ನಲ್ಲಿದ್ದ ಸ್ಯಾಚ್‌ಸೆನ್‌ಹುಸೇನ್‌ ಬಂಧನ ಗೃಹಗಳಲ್ಲಿ ಬಂಧಿಯಾಗಿದ್ದ 3,518 ವ್ಯಕ್ತಿಗಳನ್ನು ಕೊಂದಿದ್ದ ಎಂಬ ಆರೋಪ ಆತನ ಮೇಲಿತ್ತು. ಆದರೆ, ಆತ ತಾನು 1942-43ರಲ್ಲಿ ಈಶಾನ್ಯ ಜರ್ಮನಿಯ ಪೇಸ್‌ಪಾಕ್‌ ನಗರದ ಹೊರವಲಯದ ಹೊಲಗಳಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದುದಾಗಿ ಹೇಳಿದ್ದ.

ಇದನ್ನೂ ಓದಿ:ತೀಸ್ತಾ ಸೆಟಲ್ವಾಡ್‌ ಪದ್ಮಶ್ರೀ ಹಿಂಪಡೆಯಬೇಕು: ನರೋತ್ತಮ್‌ ಮಿಶ್ರಾ

ಆದರೆ, ತನಿಖೆಯಲ್ಲಿ ಈತ ಸ್ಯಾಚ್‌ಸೆನ್‌ಹ್ಯುಸೆನ್‌ ಬಂಧನ ಗೃಹದ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಬಗ್ಗೆ ದಾಖಲೆಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ನೆಯುರುಪ್ಪಿನ್‌ ಪ್ರಾಂತೀಯ ನ್ಯಾಯಲಯದ ಈತನಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next