Advertisement

ವಿಶ್ವಾಸ ಕಳೆದುಕೊಂಡ ಜರ್ಮನಿ ಚಾನ್ಸಲರ್‌: ಶೀಘ್ರ ಚುನಾವಣೆ

01:08 AM Dec 17, 2024 | Team Udayavani |

ಬರ್ಲಿನ್‌: ಜರ್ಮನಿ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಉಂಟಾಗಿದ್ದು, ಸೋಮವಾರ ಜರ್ಮನಿ ಚಾನ್ಸಲರ್‌ ಒಲಾಫ್ ಶೋಲ್ಜ್ ವಿರುದ್ಧ ಮಂಡನೆಯಾದ ಅವಿಶ್ವಾಸ ನಿರ್ಣಯದಲ್ಲಿ ಶೋಲ್ಜ್ ಸೋಲುಂಡಿದ್ದಾರೆ. 394 ಸಂಸದರು ಶೋಲ್ಜ್ ವಿರುದ್ಧ ಮತ ಚಲಾಯಿಸಿದರೆ, 207 ಮಂದಿ ನಿರ್ಣಯದ ಪರ ಮತ ಹಾಕಿದ್ದಾರೆ. ಆಡಳಿತಾರೂಢ ಪಕ್ಷವು ಇತರೆ ಪಕ್ಷಗಳೊಂದಿಗೆ ಮಾಡಿಕೊಂಡಿದ್ದ ಮೈತ್ರಿ ಕಳೆದ ತಿಂಗಳಷ್ಟೇ ಮುರಿದುಬಿದ್ದಿತ್ತು. ಈ ಬೆನ್ನಲ್ಲೇ ಶೋಲ್ಜ್ ಅಧಿಕಾರ ಕಳೆದುಕೊಂಡಿದ್ದು, 2025ರ ಫೆಬ್ರವರಿಯಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next