Advertisement
ಇದು ರಾಷ್ಟ್ರ ಕಂಡ ಮಹಾನ್ ನಾಯಕ ಜಾರ್ಜ್ ಫೆರ್ನಾಂಡಿಸ್ ಹೇಳಿದ್ದ ಮಾತುಗಳು. ದೇಶದ ರಕ್ಷಣಾ ಸಚಿವ ಸ್ಥಾನ ದಂಥ ಮಹತ್ವದ ಹುದ್ದೆಯನ್ನು ಏರಿದ್ದರೂ, ಅವರು ನಿರ್ವಹಿಸಿದ ಜೀವನ ಮಾತ್ರ ಸರಳ ಮತ್ತು ಸುಂದರ ಎಂದರೆ ತಪ್ಪಾಗಲಾರದು. ಮಂಗಳೂರಿನ ಸಾಮಾನ್ಯ ಕೌಟುಂಬಿಕ ಹಿನ್ನೆಲೆಯಲ್ಲಿ ಜನಿಸಿದ ಅವರು, ಮುಂಬೈ ನಲ್ಲಿ ಅಲ್ಲಿನ ವ್ಯವಸ್ಥೆಯನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತದ್ದು ಮತ್ತು ಸಾವಿರಾರು ಮಂದಿ ಕಾರ್ಮಿಕರಿಗೆ ಸರಿಯಾದ ರೀತಿಯ ಭದ್ರತೆ, ನೆಮ್ಮದಿಯ ಬದುಕು ನೀಡಲು ಅವರು ನಡೆಸಿದ ಹೋರಾಟ ಅವಿಸ್ಮರಣೀಯ.
Related Articles
Advertisement
ಚರ್ಚ್‌ನಲ್ಲಿರುವ ರೆಕ್ಟರ್‌ಗಳು ಸೆಮಿನರಿಯಲ್ಲಿರುವವರಿಗಿಂತ ಉತ್ತಮ ರೀತಿಯ ಆಹಾರ ಸೇವಿಸುತ್ತಿದ್ದರು. ಜತೆಗೆ ಅವರು ಉನ್ನತ ವ್ಯವಸ್ಥೆಗಳನ್ನು ತಮಗಾಗಿ ರೂಪಿಸಿಕೊಂಡಿದ್ದರು. ಇಂಥ ಭೇದ ಭಾವದ ವಾತಾವರಣದಿಂದ ಬೇಸತ್ತು ಜಾರ್ಜ್ ಅಲ್ಲಿಂದ ಹೊರಟರು.
ಬೆಂಗಳೂರಿನಲ್ಲಿ ಕಲಿಯುವಾಗ ಉಂಟಾದ ಅನುಭವವೇ ಅವರನ್ನು ಮುಂಬೈಗೆ ಕರೆ ತಂದಿತು. ಅಲ್ಲಿ ಹೊಟೇಲ್, ರೆಸ್ಟಾರೆಂಟ್, ಸಾರಿಗೆ ಕ್ಷೇತ್ರದಲ್ಲಿನ ಕಾರ್ಮಿಕರನ್ನು ಒಗ್ಗೂಡಿಸಿ ಅವರಿಗಾಗಿ ಹೋರಾಟ ನಡೆಸಲು ಮುಂದಾಗಿ ಯಶಸ್ವಿಯೂ ಆದರು.
1949ರಲ್ಲಿ ಜಾರ್ಜ್ ಫೆರ್ನಾಂಡಿಸ್ ಮುಂಬೈ ಕೆಲಸಕ್ಕಾಗಿ ಬಂದರು. ಪತ್ರಿಕೆಯೊಂದರಲ್ಲಿ ಕರಡು ತಿದ್ದುವ ಕೆಲಸ ಅವರಿಗೆ ಸಿಕ್ಕಿತು. ಮುಂಬೈನ ಚೌಪಟ್ಟಿ ಯಲ್ಲಿ ನಿದ್ರಿಸುತ್ತಿದ್ದಾಗ ಪೊಲೀಸರು ಬಂದು ಎಬ್ಬಿಸಿ ಕಳುಹಿಸಿದ್ದುಂಟು. ಅವರಿಗೆ ಮಂಗಳೂರಿನವರೇ ಆದ ಪ್ಲಾಸಿಡ್ ಡಿ’ ಮೆಲ್ಲೋ ಮತ್ತು ಸಮಾಜವಾದಿ ರಾಮ್ ಮನೋಹರ್ ಲೋಹಿ ಯಾರ ಪರಿಚಯವಾಯಿತು. ಬಾಂಬೆ ಮುನಿಸಿಪಲ್ ಕಾರ್ಪೊರೇಷನ್‌ನ ಸದಸ್ಯರಾಗಿ 1961ರಿಂದ 1968ರ ವರೆಗೆ ಸೇವೆ ಸಲ್ಲಿಸಿದ್ದರು.
ಅವರಿಗೆ ಹೆಸರು ತಂದುಕೊಟ್ಟದ್ದು 1974ರ ರೈಲ್ವೇ ಮುಷ್ಕರ. ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಮತ್ತು ದೇಶದಲ್ಲಿಯೇ ಆ ಕಾಲಕ್ಕೆ ಭಾರಿ ಎಂದು ಜನಪ್ರಿಯತೆ ಪಡೆದಿದ್ದ ಪ್ರತಿಭಟನೆ, ಮುಷ್ಕರ ಅದಾಗಿತ್ತು. ರೈಲ್ವೆಯಲ್ಲಿನ ಕೆಲಸಗಾರರಿಗೆ ಸರಿಯಾದ ರೀತಿಯಲ್ಲಿ ಸಂಬಳ ಪಾವತಿಯಾಗುತ್ತಿಲ್ಲ ಎಂಬ ಕಾರಣಕ್ಕಾಗಿ 1974 ಮೇ 8ರಿಂದ 1974 ಮೇ 27ರ ವರೆಗೆ ಮುಷ್ಕರ ನಡೆಸಲಾಯಿತು. ದೇಶಾದ್ಯಂತ ಅವರ ಪರವಾಗಿ ಪ್ರತಿಭಟನೆಗಳು ನಡೆದವು.
ಈ ಪ್ರತಿಭಟನೆಯೇ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲು ಕಾರಣವಾಯಿತು. ಮುಂದಿನ 1 ವರ್ಷದ ಅವಧಿಯಲ್ಲಿ ಜಾರ್ಜ್ ಭೂಗತರಾಗಿಯೇ ಇಂದಿರಾ ಗಾಂಧಿ ಸರಕಾರದ ವಿರುದ್ಧ ಹೋರಾಟ ನಡೆಸಿದ್ದರು. ಅವರನ್ನು 1976 ಜೂ.10ರಂದು ಕೋಲ್ಕತಾದಲ್ಲಿ ಬಂಧಿಸಲಾಯಿತು. ಕೈಗಳಿಗೆ ಕಟ್ಟಿದ್ದ ಸಂಕೊಲೆಯನ್ನು ಎತ್ತಿಹಿಡಿದ ಕಪ್ಪು ಬಿಳುಪಿನ ಫೋಟೋ ಈಗಲೂ ಇತಿಹಾಸದ ಪುಟಗಳಲ್ಲಿನ ಪ್ರಮುಖದ್ದಾಗಿ ದಾಖಲಾಗಿದೆ. ತುರ್ತು ಪರಿಸ್ಥಿತಿ ಹಿಂಪಡೆದ ಸಂದರ್ಭದಲ್ಲಿಯೇ 1977ರ ಜನವರಿಯಲ್ಲಿ ನಡೆದಿದ್ದ ಚುನಾವಣೆಯಲ್ಲಿ ಜೈಲಿಂದಲೇ ಸ್ಪರ್ಧಿಸಿ, ಮುಜಾಫರ್‌ಪುರದಿಂದ ಗೆದ್ದಿದ್ದರು. ಅನಂತರ ಮೊರಾರ್ಜಿ ದೇಸಾಯಿ ನೇತೃತ್ವದ ಸರಕಾರದಲ್ಲಿ ಸಚಿವರೂ ಆಗಿದ್ದರು.