Advertisement

ಶ್ರೀರಂಗಪಟ್ಟಣದಲ್ಲೊಂದು ಜನಸ್ನೇಹಿ ಪೊಲೀಸ್‌ ಠಾಣೆ

05:55 PM Jan 07, 2018 | Team Udayavani |

ಶ್ರೀರಂಗಪಟ್ಟಣ: ಸಾಮಾನ್ಯವಾಗಿ ಪೊಲೀಸ್‌ ಠಾಣೆ ಎಂದರೆ ಬೆಚ್ಚಿ ಬೀಳುವ ಈ ಕಾಲದಲ್ಲಿ ಠಾಣೆಗೆ ಬಂದವರನ್ನು ಅಕ್ಕರೆಯಿಂದ ಮಾತನಾಡಿಸಿ, ಸ್ನೇಹಪೂರ್ವಕವಾಗಿ ವರ್ತಿಸಿ ಮಾಹಿತಿ ಪಡೆಯುವ ಸಿಬ್ಬಂದಿ ಹೊಂದಿರುವ ಜನಸ್ನೇಹಿ ಪೊಲೀಸ್‌ ಠಾಣೆ ಇಲ್ಲೊಂದಿದೆ. ಅದುವೇ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆ.

Advertisement

ದೂರುದಾರರಿಗೆ ಸಾಂತ್ವನ: ಕ್ಷುಲ್ಲಕ ಕಾರಣಕ್ಕೆ ಜಗಳ, ಗಲಾಟೆ ಮಾಡಿಕೊಂಡು, ಜಮೀನು ಒತ್ತುವರಿ ಸೇರಿದಂತೆ ಇತರೆ ಸಮಸ್ಯೆಗಳ ದೂರುಗಳನ್ನು ಹೊತ್ತು ಪೊಲೀಸ್‌ ಠಾಣೆಗೆ ಬರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ಸಮಯದಲ್ಲಿ ಠಾಣೆಗೆ ಬಂದ ವ್ಯಕ್ತಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಸಂದರ್ಶಕರೊಬ್ಬರು ಅವರನ್ನು ಆತ್ಮೀಯವಾಗಿ
ಸ್ವಾಗತಿಸಿ ಸಮಾಧಾನ ಹೇಳುವುದು ಈ ಠಾಣೆಯ ಮಾರ್ಗದರ್ಶಿ ಹಾಗೂ ವರಾಹಿತಿ ನೀಡುವ ಸಂದರ್ಶಕ ಸಿಬ್ಬಂದಿಯ ಕೆಲಸವಾಗಿದೆ. 

ಸೌಹಾರ್ದತೆ ಮೂಡಿಸುವ ಕೆಲಸ: ಮರುದಿನ ದಿನ ದೂರುದಾರ ಹಾಗೂ ಆರೋಪಿ ಇಬ್ಬರನ್ನೂ ಠಾಣೆಗೆ ಕರೆಸಿ ಸತ್ಯಾಂಶಗಳನ್ನು ಠಾಣೆಯ ಸಿಬ್ಬಂದಿಗಳೇ ತಿಳಿಸಿ, ಒಬ್ಬರಿಗೊಬ್ಬರು ದ್ವೇಷ-ಅಸೂಯೆ ಬಿಟ್ಟು ಪರಸ್ಪರ ಸೌಹಾರ್ದತೆ ಬೆಳೆಸಿಕೊಳ್ಳಲು ಸಮಾಲೋಚನೆ ನಡೆಸುವ ಠಾಣೆಯ ಸಿಬ್ಬಂದಿ ಈ ಭಾಗದ ಜನರಿಗೆ ಜನಸ್ನೇಹಿಯಾಗಿದೆ.

ಠಾಣೆ ಸೌಲಭ್ಯಗಳೇನು? ಠಾಣೆಗೆ ಬಂದ ಜನರಿಗೆ ನೆರಳಿನಿಂದ ಕೂಡಿದ ವಿಶ್ರಾಂತಿ ಹಾಗೂ ಸಂದರ್ಶಕರ ಕೊಠಡಿ, ಗಾಳಿ, ಬೆಳಕು ಸಿಗುವ ವಾತಾವರಣ, ಠಾಣೆಗೆ ಬಂದ ಸಂದರ್ಶಕರಿಗೆ ಶುದ್ಧ ಕುಡಿಯುವ ನೀರು, ಕುಳಿತು ವಿಶ್ರಾಂತಿ ಪಡೆಯಲು ಸುಸಜ್ಜಿತ ಆಸನಗಳು, ಫ್ಯಾನ್‌, ಓದಲು ಕಿರು ಗ್ರಂಥಾಲಯ, ಮನರಂಜನೆಗೆ ಟೀವಿ, ಓದಲು ದಿನಪತ್ರಿಕೆಗಳು, ಕಾನೂನು ಕುರಿತ ಮಾಹಿತಿ ಪುಸ್ತಕಗಳು, ಕಾನೂನು ಅರಿವಿನ ತಿಳಿವಳಿಕೆಯ ಸಂದೇಶಗಳು, ಇದಲ್ಲದೇ ವಿಶ್ರಾಂತ ಕೊಠಡಿಯ ಗೋಡೆ ಸುತ್ತಲೂ ಬರಹಗಳಲ್ಲಿ ವಿವಿಧ ಅಗತ್ಯವಾದ ಮಾಹಿತಿ ಪ್ರಕಟಣೆ, ಹೆಲ್ಮೆಟ್‌ ಧರಿಸುವುದು, ವಾಹನ ಚಾಲನೆ ಮಾಡುವಾಗ ಸೀಟ್‌ ಬೆಲ್ಟ್ ಹಾಕುವುದು ಈ ಬಗ್ಗೆ ಮಾಹಿತಿಗಳ ಬಿತ್ತಿ ಚಿತ್ರಗಳು ಸೇರಿದಂತೆ ಸಂದರ್ಶಕರ ಕೊಠಡಿ, ಠಾಣೆ ಮುಂದೆ ಕಿರು ಉದ್ಯಾನವನ ಸದ್ಯದಲ್ಲಿ ಹಸಿರು ಹಾಸಿನ ಹುಲ್ಲು ಬೆಳೆಯುತ್ತಿಗೆ ಸಣ್ಣ ಜಲಧಾರೆಯ ಮಧ್ಯೆ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಸಜ್ಜಾಗುತ್ತಿಗುತ್ತಿದೆ. ಜಿಲ್ಲೆಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆ.

ಠಾಣೆಗೆ ನೆರಳಾದವರು: ಠಾಣೆ ಪಕ್ಕದಲ್ಲಿರುವ ಎಂ.ಕೆ.ಆಗ್ರೋ ಇಂಡಸ್ಟ್ರೀಸ್‌, ಸನ್‌ ಪ್ಯೂರ್‌ ಆಯಲ್‌ ಕಂಪನಿಯ ವ್ಯವಸ್ಥಾಪಕರು ಈ ಠಾಣೆಗೆ ನೆರಳಾಗಿ, ಬಂದ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಮಾಹಿತಿ ಕೇಂದ್ರವನ್ನು
ಇತರೆ ಸಂದೇಶಗಳನ್ನು ಅಳವಡಿಸಿಕೊಟ್ಟಿದ್ದಾರೆ. ಸಂದರ್ಶಕರ ಕೊಠಡಿಯನ್ನೂ ನಿರ್ಮಿಸಿ ಕೊಟ್ಟು ಇಲ್ಲಿನ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಸೌಲಭ್ಯ ಕಲ್ಪಿಸಿಕೊಡುವಲ್ಲಿ ಪೊಲೀಸ್‌ ಇಲಾಖೆಯ ಪಾತ್ರವೂ ಇದೆ.

Advertisement

ಸಿಬ್ಬಂದಿ ಕಾಳಜಿಯಿಂದ ಜನಸ್ನೇಹಿ ಠಾಣೆ ಠಾಣೆಗಳಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು. ಠಾಣೆಗೆ ಬರುವ ದೂರುದಾರರಿಗೆ ಸೂಕ್ತ ಮಾಹಿತಿ ನೀಡಬೇಕು. ಅವರ ಸಮಸ್ಯೆಗೆ ಸ್ಪಂದಿಸಬೇಕು. ಸಹಾಯವಾಣಿಯಂತೆ ದೂರು ಗಳನ್ನು ಪರಿಶೀಲಿಸಿ, ಸಂದರ್ಶಕರಿಗೆ ಈ ಬಗ್ಗೆ ತರಬೇತಿ ನೀಡಲಾಗಿದೆ. ದೂರುದಾರರಿಗೆ ಮಾಹಿತಿ ನೀಡಿ ಠಾಣೆಯಲ್ಲಿ ಪ್ರಕರಣಗಳನ್ನು ಆಯಾ ಸಿಬ್ಬಂದಿಗೆ ಒಪ್ಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ಚಾಲ್ತಿಗೆ ಬಂದಿದೆ. ಠಾಣೆಯಲ್ಲಿ ಮೂಲ ಸೌಲಭ್ಯಗಳಿಗೂ ಒತ್ತು ನೀಡಲಾಗಿದೆ. ಅಲ್ಲಿನ ಸಿಬ್ಬಂದಿಯ ಕಾಳಜಿಯಿಂದ ಉತ್ತಮ ಜನಸ್ನೇಹಿ ಠಾಣೆಯಾಗಿದೆ.
 ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮಂಡ್ಯ

ಕಿ ಗಂಜಾಂ ಮಂಜು
 

Advertisement

Udayavani is now on Telegram. Click here to join our channel and stay updated with the latest news.

Next