ಹೊಸದಿಲ್ಲಿ: ರಕ್ಷಣ ಪಡೆಗಳ ಮುಖ್ಯಸ್ಥರಾಗಿದ್ದ ಜ| ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿ ಒಟ್ಟು 14 ಅಧಿಕಾರಿಗಳನ್ನು ಹೊತ್ತೂಯ್ಯುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನೂರ್ ಬಳಿಕ 2021 ಡಿ.8ರಂದು ಪತನವಾಗಿದ್ದಕ್ಕೆ ದಟ್ಟ ಮೋಡ ಮತ್ತು ಪೈಲಟ್‌ನ ದೋಷ ಕಾರಣ. ಹೀಗೆಂದು ಸೇನೆಯ ಮೂರು ವಿಭಾಗಗಳ ಅಧಿಕಾರಿ ಗಳ ತಂಡ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರ ಜತೆ ಏರ್‌ಚೀಫ್ ಮಾರ್ಷಲ್ ಮಾನ ವೇಂದ್ರ ಸಿಂಗ್ ನೇತೃತ್ವದ ಸಮಿತಿ ಬುಧವಾರ ಭೇಟಿಯಾಗಿದೆ. ಏರ್‌ಚೀಫ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆಯ ಕಾರಣ ಪತ್ತೆ ಹಚ್ಚಲು ಸಮಿತಿ ರಚಿಸಲಾಗಿತ್ತು.
ಜ| ರಾವತ್ ಸಂಚರಿಸುತ್ತಿದ್ದ ಕಾಪ್ಟರ್‌ನಲ್ಲಿ ದೋಷವಿರಲಿಲ್ಲ. ಅದು ಕಂಟ್ರೋಲ್ಡ್ ಫ್ಲೈಟ್ ಇನ್‌ಟು ಟೆರೈನ್ ಅನಂತರ ಪತನ ಗೊಂಡಿದೆ. ನಿಯಂತ್ರಣದಲ್ಲಿರುವ ಕಾಪ್ಟರ್‌ಗೆ ತೊಂದರೆ ಉಂಟಾದರೆ ಅದನ್ನು ಸಿಎಫ್ಐಟಿ ಎನ್ನಲಾಗುತ್ತದೆ. ತುರ್ತಾಗಿ ಕಾಪ್ಟರ್ ಇಳಿಸಬೇಕಾಗುತ್ತದೆ ಎಂಬ ಬಗ್ಗೆ ಪೈಲಟ್ ಕೊನೆಯವರೆ ಗೂ ಮಾಹಿತಿ ಕೊಟ್ಟಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲ ಗಳು ತಿಳಿಸಿವೆ.
ಇದನ್ನೂ ಓದಿ:ಕರ್ನಾಟಕದಲ್ಲಿ ವಿದ್ಯುತ್ ವಾಹನ ನೋಂದಣಿ ಪ್ರಮಾಣ ಶೇ.9
ಕಾಪ್ಟರ್ ರೈಲ್ವೇ ಹಳಿಯ ಆಧಾರದಲ್ಲಿಯೇ ಸಂಚರಿಸುತ್ತಿತ್ತು. ಈ ವೇಳೆ ಅದು ದಟ್ಟವಾದ ಮೋಡವನ್ನು ಹೊಕ್ಕಿದೆ. ಕಾಪ್ಟರ್ ಕಡಿಮೆ ಎತ್ತರದಲ್ಲಿ ಸಂಚರಿಸು ತ್ತಿತ್ತಾದರೂ ಆ ಮೋಡವನ್ನು ದಾಟುವ ಸಾಮರ್ಥ್ಯವಿದೆ ಎಂದು ಪೈಲಟ್ ಮುಂದು ವರಿದಿದ್ದಾರೆ. ಆಗ ಕಾಪ್ಟರ್ ಬಂಡೆಗೆ ಢಿಕ್ಕಿ ಹೊಡೆಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.