Advertisement

Kerala ಶಾಲಾ ಪಠ್ಯದಲ್ಲಿ ಲಿಂಗ ಸಮಾನತೆಯ ಪಾಠ

12:04 AM Jun 06, 2024 | Team Udayavani |

ತಿರುವನಂತಪುರ: ಅಪ್ಪ ಎಂದರೆ ಹೊರಗೆ ದುಡಿಯುವ ಮನುಷ್ಯ, ಅಮ್ಮ ಎಂದರೆ ಅಡುಗೆ ಮನೆಗೆ ಸೀಮಿ ತವಾದವಳು ಎನ್ನುವಂಥ ಮನೋ ಭಾವವನ್ನು ತೊಡೆದುಹಾಕಿ, ಮಕ್ಕಳ ಮನಸ್ಸಿನಲ್ಲಿ ಲಿಂಗ ಸಮಾನತೆಯ ಪರಿ ಕಲ್ಪನೆ ಮೂಡಿಸುವ ವಿಶಿಷ್ಟ ಪ್ರಯತ್ನ ವನ್ನು ಕೇರಳ ಸರಕಾರ ಮಾಡಿದೆ. ಇದಕ್ಕಾಗಿ ಅಡುಗೆ ಮನೆಯೊಂದರ ವಿಶಿಷ್ಟ ಚಿತ್ರಣವನ್ನು ಮಕ್ಕಳ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಿದೆ.

Advertisement

ಅಡುಗೆ ಮನೆಯೊಂದರಲ್ಲಿ ತಂದೆ ನೆಲದ ಮೇಲೆ ಕುಳಿತು ಕಾಯಿ ತುರಿಯುತ್ತಿರುವಂತೆ, ತಾಯಿ ಅಡುಗೆ ಮಾಡುತ್ತಿರುವಂತೆ, ಮಗಳೊಬ್ಬಳು ಪಾತ್ರೆಗಳನ್ನು ಎತ್ತಿಡುವ ಹಾಗೂ ಮಗನೂ ಕೆಲಸಗಳಿಗೆ ಸಹಾಯ ಮಾಡುತ್ತಿರುವಂತೆ ಚಿತ್ರ ಬಿಡಿಸಲಾಗಿದೆ. ಕೇರಳದ 3ನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಈ ಲಿಂಗ ಸಮಾನತೆ ಸಾರುವ ಚಿತ್ರ ಈಗ ಜಾಲತಾಣದಲ್ಲೂ ವೈರಲ್‌ ಆಗುತ್ತಿದೆ. ಖುದ್ದು ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ ಕುಟ್ಟಿ ಜಾಲತಾಣದಲ್ಲಿ ಈ ಚಿತ್ರ ಹಂಚಿಕೊಂಡಿದ್ದಾರೆ.

ನೆಟ್ಟಿಗರು, ಶಿಕ್ಷಕರೂ ಕೂಡ ಈ ಬದಲಾ ವಣೆ  ಸ್ವಾಗತಿಸಿದ್ದು, ಮನೆ ಕೆಲಸದ ಹೊರೆ ತಾಯಿಗೆ ಮಾತ್ರ ಸೀಮಿತವಲ್ಲ, ಇದು ಎಲ್ಲರ ಜವಾಬ್ದಾರಿ ಎಂಬ ಸಂದೇಶ ಉತ್ತಮ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next