ಪುಣ್ಯ ಪಾಪವನ್ನು ಎಲ್ಲ ಮತಗಳವರೂ ಒಪ್ಪಿದ್ದಾರೆ. ಎಲ್ಲ ಮತಪ್ರವರ್ತಕರೂ ಹೇಳಿದ್ದರಿಂದ ಪುಣ್ಯಪಾಪ ಸಿದ್ಧವಾಯಿತು ಎಂದು ಅವರವರ ಅನುಯಾಯಿಗಳು ಹೇಳುತ್ತಾರೆ. ಇದು ಸರಿ, ಇದನ್ನು ಹೇಳಿದ ಪ್ರವರ್ತಕರಿಗೆ ಈ ವಿಚಾರ ಎಲ್ಲಿಂದ ಸಿದ್ಧವಾಯಿತು? ವೇದದಿಂದಲೇ ಸಿದ್ಧವಾದದ್ದು. ಇಲ್ಲಿಯೂ ವೇದಪ್ರಮಾಣವೇ ಆಗುತ್ತದೆ. ಸರಕಾರವೇ ಇಲ್ಲದ ಕಾಲದಲ್ಲಿಯೂ ದೇವಸ್ಥಾನಗಳಿದ್ದವು. ಈಗ ಈ ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಸೇರಿರುವುದು ಹೇಗೆ? ಅಂದರೆ ಯಾವುದೋ ಒಂದು ಕಾಲದಲ್ಲಿ ಯಾವುದೋ ಒಂದು ಸರಕಾರವೇ ವಶಪಡಿಸಿಕೊಂಡದ್ದು ಎಂಬುದು ಸಿದ್ಧವಾಗುತ್ತಯಲ್ಲವೆ? ಮೂಲದಲ್ಲಿ ಹೇಗಿತ್ತು ಎನ್ನುವುದು ಮುಖ್ಯ. ಕೆಲವರು ಪುಣ್ಯ ಪಾಪವನ್ನು ಒಪ್ಪುವುದಿಲ್ಲ. ಕಳ್ಳತನ ಮಾಡಬಾರದು ಎಂದರೆ ಕೆಲವರು ಒಪ್ಪಬಹುದು. ಒಪ್ಪದೆ ಇದ್ದರೆ ಏನು ಮಾಡೂದು? ಪೊಲೀಸರು ಮಾತ್ರ ಪೊಲೀಸ್ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ. ವೇದದಿಂದ ಮಾತ್ರ ಪುಣ್ಯಪಾಪ ಸಿದ್ಧವಾಗುತ್ತದೆ ಎನ್ನುವುದಾದರೆ ಪುಣ್ಯಪಾಪ ಎಂದರೇನು? ಇದನ್ನೇಕೆ ಒಪ್ಪಬೇಕು? ಪುಣ್ಯ ಬೇಡವೆನ್ನುತ್ತಾನೆ. ಪುಣ್ಯಪಾಪ ಇಲ್ಲವೆಂದರೆ ಜಗತ್ತು ನಡೆಯೋದಿಲ್ಲ ಎಂದು ಹೇಳಿದರೆ ಪುಣ್ಯ ಮಾತ್ರ ಬೇಡವೆನ್ನುತ್ತಾನೆ. ಪಾಪದಿಂದ ಜಗತ್ತು ನಡೆಯಬಹುದು. ಚಾರ್ವಾಕ (ನಾಸ್ತಿಕ) ಮತವನ್ನು ಬಿಟ್ಟು ಉಳಿದೆಲ್ಲ ಮತಗಳೂ ಪುಣ್ಯಪಾಪವನ್ನು ಒಪ್ಪಿವೆ. ಇದಕ್ಕೆ ಮೂಲಪ್ರಾಮಾಣ್ಯ ಚಿಂತನೀಯ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811