Advertisement

Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ

12:27 AM Jan 03, 2025 | Team Udayavani |

ವೇದಾದಿಗಳಲ್ಲಿ ದೇಹಾತಿರಿಕ್ತವಾದ ಆತ್ಮ ಇದ್ದಾನೆಂದು ಹೇಳಿದ್ದರಿಂದ ಸಿದ್ಧವೆಂದು ಹೇಳುವುದಕ್ಕೆ ಆಕ್ಷೇಪಗಳಿವೆ. ವಿವಿಧ ಮತಗಳಲ್ಲಿ ಆ ಮತಪ್ರವರ್ತಕರು ಹೇಳಿದ್ದೇ ಮುಂದೆ ಪ್ರಮಾಣವೆಂದು ಒಪ್ಪುವುದು. ಅನೇಕ ಮತಗಳನ್ನು ಅನೇಕರು ಪ್ರವರ್ತಿಸಿದ್ದು ಅವರವರ ಅನುಯಾಯಿಗಳು ಆಯಾ ಪ್ರವರ್ತಕರೇ ಪ್ರಮಾಣ ಎಂದು ಒಪ್ಪುತ್ತಾರೆ. ವೇದಕ್ಕೆ ಹಾಗಲ್ಲ, ಅದಕ್ಕೆ ಕರ್ತೃವೇ ಇಲ್ಲ. ಕರ್ತೃವಿನ ಹೆಸರಿನಲ್ಲಿ ಒಬ್ಬರು ಒಂದನ್ನು ಹೇಳಿದರೆ, ಇನ್ನೊಬ್ಬರು ಅದಕ್ಕೆ ವಿರುದ್ಧವಾದದ್ದನ್ನು ಹೇಳುತ್ತಾರೆ. ಒಬ್ಬ ಪ್ರವರ್ತಕ ಹೇಳಿದ್ದಕ್ಕೆ ಇನ್ನೊಬ್ಬರು ವಿರುದ್ಧವಿರುತ್ತಾರೆ. ಅಂತಹ ಸಂದರ್ಭದಲ್ಲಿ ಪರಮಪ್ರಮಾಣವೆಂದು ಹೇಗೆ ಒಪ್ಪಿಕೊಳ್ಳುವುದು? ಪ್ರತ್ಯಕ್ಷದಲ್ಲಿ ಪ್ರಾಮಾಣ್ಯವೇ ಇಲ್ಲ ಎಂದು ಹೇಳುವುದಿಲ್ಲ. ಪ್ರತ್ಯಕ್ಷವೂ ಅದಕ್ಕೆ ವಿರುದ್ಧವಾಗಿದ್ದರೆ ಪ್ರಾಮಾಣ್ಯವನ್ನು ಒಪ್ಪಬೇಕೆಂದಿಲ್ಲ. ಹಾಗಿದ್ದರೆ ವೇದಕ್ಕೂ ಪ್ರಾಮಾಣ್ಯ ಸಿದ್ಧವಾಗಲಿಲ್ಲ ಎಂಬ ಆಕ್ಷೇಪ ಬರುತ್ತದೆ. ವೇದವು ಅಪೌರುಷೇಯವಾದ ಕಾರಣ ಇನ್ನೊಂದು ಅಪೌರುಷೇಯವಿಲ್ಲ. ಅಪೌರುಷೇಯವೆಂದರೆ ಪುರುಷನ ಪಾತ್ರವಿಲ್ಲ. ಆದ್ದರಿಂದ ವೇದವೇ ಸ್ವತಃಪ್ರಾಮಾಣ್ಯ. “ಪ್ರಾಮಾಣ್ಯ’ ಎಂಬುದು ಬಹಳ ದೊಡ್ಡ ಚಾಪ್ಟರ್‌. ಕೆಲವು ಬಾರಿ ಆಕ್ಷೇಪವಿದ್ದರೆ ಸ್ವತಃಪ್ರಾಮಾಣ್ಯ ಬರುವುದಿಲ್ಲ. ಆಗ ಇತರೆಲ್ಲ ಪ್ರವರ್ತಕರು ಬರುತ್ತಾರೆ. “ವಾರೀಸುದಾರರಿದ್ದರೆ ಬನ್ನಿ’ ಎಂದು ನೋಟೀಸು ಕೊಡುವುದಿದೆ. ಕೆಲವು ಕಡೆ ಯಾರೂ ಬರುವುದಿಲ್ಲ. ಕೆಲವು ಕಡೆ ಹತ್ತು ಜನ ಬರುತ್ತಾರೆಂಬ ಹಾಗಾಗುತ್ತದೆ.

Advertisement

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

 ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next