Advertisement
ಇದರಲ್ಲಿ ಪ್ರತಿಯೊಬ್ಬರ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ದುಃಖದಲ್ಲಿ ರುವಾಗ ಇದನ್ನು ಓದಿದರೆ ಸ್ವಲ್ಪಮಟ್ಟಿಗೆ ಸಮಾ ಧಾನವಾಗಿ ಮನಸ್ಸಿಗೆ ಶಾಂತಿ ಲಭಿಸು ತ್ತದೆ ಮತ್ತು ಸಂತೋಷದಲ್ಲಿರುವಾಗ ಗ್ರಂಥ ವನ್ನು ಓದಿದರೆ ಯಶಸ್ಸು ನಮ್ಮ ತಲೆಗೆ ಏರ ದಂತೆ ನೋಡಿಕೊಳ್ಳುತ್ತದೆ. ಪ್ರತೀಸಲ ಇದನ್ನು ಓದುವಾಗ ಒಂದು ಹೊಸ ಅರ್ಥ ಗೋಚರಿ ಸುತ್ತದೆ. ಹೊಸ ವಿಷಯಗಳು ಹೊಳೆಯುತ್ತವೆ. ಯಾವ motivational ಪುಸ್ತಕಗಳು ಬೇಕಾ ಗಿಲ್ಲ, ಭಗವದ್ಗೀತೆ ಒಂದೇ ಸಾಕು ನಮ್ಮ ಇಚ್ಛಾಶಕ್ತಿಯನ್ನು ಹೆಚ್ಚಿಸಲು ಮತ್ತು ನಮ್ಮನ್ನು ಜೀವನ್ಮುಖೀಯನ್ನಾಗಿಸಲು.
ಅಸಕೊ¤ ಹಯಚರನ್ ಕರ್ಮ ಪರಮಾಪನೊತಿ ಪುರುಷಃ
ಎಂಬ ಶ್ಲೋಕದ ಭಾವಾರ್ಥದಂತೆ ಆಸಕ್ತಿ ರಹಿತನಾಗಿ ಸದಾಕಾಲ ಕರ್ತವ್ಯ ಕರ್ಮ ನಿರ್ವಹಿಸು, ನೀನು ಪರಮಾತ್ಮನನ್ನು ಪಡೆಯುತ್ತಿಯಾ ಎಂಬುದರಿಂದ ಪ್ರಭಾವಿತಳಾಗಿ ಎಲ್ಲ ಚಿಂತೆಗಳನ್ನು ಕೊಡವಿ ಮೇಲೆದ್ದು ಚಿಕಿತ್ಸೆಯ ಕುರಿತು ಅನೇಕ ಕಡೆ ವಿಚಾರಿಸಿ ದೂರದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭಿಸಿ ಈಗ ಆರೋಗ್ಯವಂತ ಜೀವನ ನಡೆಸುತ್ತಿದ್ದಾಳೆ. ಈಗ ಬದುಕು ತ್ತಿರುವ ಪ್ರತಿಯೊಂದು ದಿನವೂ ತನಗೆ ಸಿಕ್ಕ ಬೋನಸ್ ದಿನ ಎಂದು ಆಕೆ ಅನುಕ್ಷಣವು ನೆನೆಸಿಕೊಳ್ಳುತ್ತಾಳೆ. ಕೆಲವೊಮ್ಮೆ ಖನ್ನಳಾದಾಗ, ಹತಾಶಳಾದಾಗ ಗೀತೆಯ ಮೊರೆ ಹೋಗುತ್ತಾಳೆ. ಗೀತೆಯಿಂದಾಗಿಯೇ ತನಗೆ ಇರುವ ಸಮಸ್ಯೆಯ ಕುರಿತು ಕೊರಗುವುದನ್ನು ಬಿಟ್ಟು ಅದನ್ನು ಸ್ವೀಕರಿಸಿ ಧೈರ್ಯದಿಂದ ಬದುಕಲು ತಿಳಿದಿದೆ ಎನ್ನುತ್ತಾಳೆ.
Related Articles
ಗೀತೆಯ ಬಗ್ಗೆ ತಿಳಿಯಲು ಸಂಸ್ಕೃತ ಜ್ಞಾನವೇ ಬೇಕೆಂದಿಲ್ಲ. ಭಾರತವೇ ಏಕೆ ಅನೇಕ ರಾಷ್ಟ್ರಗಳ ಹೆಚ್ಚಿನ ಎಲ್ಲ ಭಾಷೆಗಳಿಗೆ ಭಗವದ್ಗೀತೆ ಅನುವಾದಗೊಂಡಿದೆ.
Advertisement
ಇಂದಿನ ಆಧುನಿಕ ಜೀವನಶೈಲಿಯಲ್ಲಿ ಭಗವದ್ಗೀತೆ ಕಂಠಪಾಠ ಮಾಡುವುದು ಅಥವಾ ದಿನನಿತ್ಯ ಓದುವುದು ಕಷ್ಟಸಾಧ್ಯ. ಆದರೆ ಸಮಯ ಹೊಂದಿಸಿಕೊಂಡು, ಹೇಗೆ ನಾವು ಟಿವಿಯಲ್ಲಿ ಯಾವ್ಯಾವ ಚಾನೆಲ್‌ನಲ್ಲಿ ಏನೇನಿದೆ ಎಂದು ನೋಡುತ್ತೇವೋ ಅದೇ ರೀತಿ ಗೀತೆಯ ಪುಟ ತಿರುಗಿಸಿ ಶ್ಲೋಕ ಮತ್ತು ಅದರ ಭಾವಾರ್ಥ ಓದಿ ಮನನ ಮಾಡಿಕೊಂಡರೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಸಮಾಧಾನ ಸಿಗುವುದರಲ್ಲಿ ಸಂಶಯವಿಲ್ಲ.
ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈ ವಾತ್ಮ ನಾಅನಾತ್ಮನಸ್ತು ಶತ್ರುತ್ವೇ
ವರ್ತೆತಾತ್ಮೈವ ಶತ್ರುವತ್(7-6)
ಎಂಬ ಗೀತೆಯ ಶ್ಲೋಕದಂತೆ ಯಾರು ಮನಸ್ಸನ್ನು ಗೆದ್ದಿದ್ದಾನೋ ಅವನಿಗೆ ಮನಸ್ಸು ಬಂಧುವಾಗುತ್ತದೆ. ಅದರೆ ಹಾಗೇ ಮಾಡದಿರುವವನಿಗೆ ಅವನ ಮನಸ್ಸೇ ಅತ್ಯಂತ ದೊಡ್ಡ ಶತ್ರುವಾಗುತ್ತದೆ. ನಾವೆಲ್ಲರೂ ಗೀತೆಯ ಸಾರವನ್ನು ಗ್ರಹಿಸಿ ಮನೋ ನಿಗ್ರಹ ಸಾಧಿಸಿ ನೆಮ್ಮದಿಯ ಬದುಕು ಬಾಳ್ಳೋಣ. – ಶಾಂತಲಾ ಎನ್. ಹೆಗ್ಡೆ, ಸಾಲಿಗ್ರಾಮ