“ಲಾಸು ಇಲ್ಲ, ಲಾಭವೂ ಆಗಿಲ್ಲ. ಎಲ್ಲವೂ ಅಲ್ಲಿಗಲ್ಲಿಗೆ ಆಗಿದೆ. ಆದರೆ, ನನ್ನ ಸಿನಿಮಾ ಕೆರಿಯರ್‌ನಲ್ಲೇ ಒಳ್ಳೇ ಸಿನಿಮಾ ಮಾಡಿದ ತೃಪ್ತಿ ನನಗಿದೆ…
-ಗಣೇಶ್ ಹೀಗೆ ಹೇಳುತ್ತಾ ಹೋದರು. ಅವರು ಹೇಳಿದ್ದು ತಮ್ಮ ನಿರ್ಮಾಣ, ನಟನೆಯ “ಗೀತಾ’ ಚಿತ್ರದ ಬಗ್ಗೆ. ಹೌದು, “ಗೀತಾ’ ಕುರಿತು. ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಪತ್ರಿಕಾ ಮಾಧ್ಯಮದಿಂದಲೂ ಒಳ್ಳೆಯ ಅಭಿಪ್ರಾಯ ಕೇಳಿಬಂದಿತ್ತು. ಹಾಗಾಗಿ, ಎಲ್ಲರಿಗೂ ಒಂದು ಥ್ಯಾಂಕ್ಸ್ ಹೇಳುವ ಸಲುವಾಗಿಯೇ ತಮ್ಮ ತಂಡದೊಂದಿಗೆ ಆಗಮಿಸಿದ್ದರು ಗಣೇಶ್.
ಅಂದು ಗಣೇಶ್ ತಮ್ಮ ಚಿತ್ರದ ಕುರಿತು ಹೇಳಿದ್ದು ಹೀಗೆ. “ಗೀತಾ’ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿವೆ. ಇದುವರೆಗೂ ಪತ್ರಿಕಾ ಮಾಧ್ಯಮ ಚೆನ್ನಾಗಿ ಮಾಡಿದ್ದನ್ನು ಬೆನ್ನುತಟ್ಟಿದೆ. ಚೆನ್ನಾಗಿಲ್ಲದ್ದನ್ನು ತಿದ್ದಿ ,ಬುದ್ಧಿ ಹೇಳಿದೆ. “ಗೀತಾ’ ನನ್ನ ಸಿನಿಪಯಣದಲ್ಲಿ ಬೇರೆಯದ್ದೇ ಚಿತ್ರ. ಹಾಗಾಗಿ, ನಾನು ಏನು ಅಂದುಕೊಂಡಿದ್ದೆನೋ ಅದು ಆಗಿಲ್ಲ. ಆದರೂ, ಒಳ್ಳೆಯ ಸಿನಿಮಾ ಮಾಡಿದ ಬಗ್ಗೆ ಕಾಮೆಂಟ್ಸ್ ಕೇಳಿಬರುತ್ತಿದೆ. ಮೊದಲ ದಿನ ನಿರೀಕ್ಷೆ ತಲುಪಲಿಲ್ಲ.ಎರಡನೇ ದಿನ, ಹೆಚ್ಚಾಯ್ತು, ಮೂರನೇ ದಿನದಲ್ಲೂ ಅದೇ ವೇಗ ಉಳಿಸಿಕೊಂಡಿತ್ತು.ಪರಭಾಷೆ ಚಿತ್ರಗಳು ಬಂದರೂ ಯಾವುದೇ ತೊಂದರೆ ಆಗಲಿಲ್ಲ. ಹಾಗಾಗಿ, ನಮಗೆ ಇಲ್ಲಿಯವರೆಗೆ “ಗೀತಾ’ ಲಾಸ್ ಎನಿಸಿಲ್ಲ. ಹಾಗಂತ, ಲಾಭವೂ ಆಗಿಲ್ಲ. ಈಗ ಸಾಲು ಸಾಲು ರಜೆಗಳು ಇರುವುದರಿಂದ, ಜನ ನುಗ್ಗಿಬಂದರೆ, “ಗೀತಾ’ ಮೊಗದಲ್ಲಿ ಇನ್ನಷ್ಟು ಖುಷಿ ಅರಳುತ್ತದೆ. ದೊಡ್ಡ ಮಟ್ಟದಲ್ಲಿ ಆಗದಿದ್ದರೂ, ಅಲ್ಲಿಂದ ಅಲ್ಲಿಗೆ ಆಗಿದೆ ಎಂಬುದೇ ಸಮಾಧಾನ. ಆದರೂ, ಮಾಡಿದ ಕೆಲಸ ತೃಪ್ತಿ ಇದೆ. ನಾನು ಇರುವುದನ್ನು ನೇರವಾಗಿ ಹೇಳುತ್ತೇನೆ. ಬೇರೆಯವರ ರೀತಿ ಹಾಗೆ, ಹೀಗೆ ಅಂತ ಹೇಳಲ್ಲ. ಒಬ್ಬ ನಟನಾಗಿ, ಇಂಥದ್ದೊಂದು ಚಿತ್ರ ಕೊಟ್ಟಿದ್ದಕ್ಕೆ ಹೆಮ್ಮೆಯಂತೂ ಇದೆ. ಎಷ್ಟೋ ಸಲ ಕಮರ್ಷಿಯಲ್ ಆಗಿ ಖುಷಿಕೊಟ್ಟರೂ ತೃಪ್ತಿ ಇರಲ್ಲ.ಇಲ್ಲಿ ಅಂಥ ದ್ದೊಂದು ಖುಷಿ ಕೊಟ್ಟಿದೆ. ಗಳಿಕೆ ಅಷ್ಟಾಗಿದೆ, ಇಷ್ಟಾಗಿದೆ ಅಂತಹೇಳಲ್ಲ. ಮನಸ್ಸಿಗೆ ಸಂತಸ ಕೊಟ್ಟ ಚಿತ್ರ ಎಂದು ಹೇಳುತ್ತೇನೆ’ ಎಂದರು ಗಣೇಶ್.
ನಿರ್ಮಾಪಕ ಸೈಯದ್ ಸಲಾಂ ಅವರಿಗೂ “ಗೀತಾ’ ಮಾಡಿದ್ದು ಖುಷಿಕೊಟ್ಟಿದೆ. ಅವರೇ ಹೇಳುವಂತೆ, “ನನ್ನ ಇದುವರೆಗಿನ ನಿರ್ಮಾಣದ ಚಿತ್ರಗಳ ಪೈಕಿ “ಗೀತಾ’ ಮೆಚ್ಚಿನ ಚಿತ್ರ. ಪ್ರತಿ ಸಲವೂ ಆಟ ಆಡಿದಾಗ ಗೆಲ್ಲಬೇಕು ಅಂತಾನೇ ಆಡ್ತೀವಿ. “ಗೀತಾ’ ಮನಸ್ಸಿನಿಂದ ಮಾಡಿದ ಚಿತ್ರವಾದ್ದರಿಂದ ಇದು ಪ್ರತಿ ಬಾರಿಯೂ ಕಾಡುವ ಸಿನಿಮಾ ಆಗಿಯೇ ಇರುತ್ತೆ. ನಿಜ ಹೇಳುವುದಾದರೆ, ಇಲ್ಲಿ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಇಲ್ಲೂ ಪ್ಲಸ್, ಮೈನಸ್ ಇದೆ. ಹಾಗಂತ “ಗೀತಾ’ ಖುಷಿಗೆ ಕೊರತೆ ಬಾರದಂತೆ ನೋಡಿಕೊಂಡಿದೆ. ಪರಭಾಷೆ ಸಿನಿಮಾಗಳು ಬಂದಾಗ, “ಗೀತಾ’ಗೆ ಸ್ವಲ್ಪ ಪೆಟ್ಟು ಬಿದ್ದಿರಬಹುದು. ನಾನು ಇಲ್ಲ ಎಂದು ಹೇಳಲ್ಲ.ಆದರೆ, ಸುಳ್ಳು ಹೇಳುವುದು ಸರಿಯಲ್ಲ. ಇಲ್ಲಿ ಕನ್ನಡತನ ಹೇರಳವಾಗಿದೆ. ಜನರು ಇಷ್ಟಪಟ್ಟಿದ್ದಾರೆ.ಅಷ್ಟು ಸಾಕು. ನಮಗೆ ಸಿನಿಮಾವನ್ನು ಸಾಯಿಸಲು ಇಷ್ಟವಿಲ್ಲ.ಆದರೂ, ಜನರು ಮೆಚ್ಚಿಕೊಂಡಿದ್ದಾರೆ.ಅಷ್ಟು ಸಾಕು, ಸದ್ಯಕ್ಕೆ ಲಾಸ್ ಅಂತೂ ಇಲ್ಲ. ದೊಡ್ಡದ್ದಾಗಿ ಏನೂ ಆಗಿಲ್ಲ.ನಿಮ್ಮ ಜೊತೆ ಖುಷಿ ಹಂಚಿಕೊಂಡು ಥ್ಯಾಂಕ್ಸ್ ಹೇಳಬೇಕೆಂಬ ಕಾರಣಕ್ಕೆ ಬಂದಿದ್ದೇವೆ’ ಎಂದು ಮಾತು ಮುಗಿಸಿದರು ಸಲಾಂ.
ನಿರ್ದೇಶಕ ವಿಜಯ್ ನಾಗೇಂದ್ರ ಅವರು ಹೆಚ್ಚು ಮಾತಾಡಲಿಲ್ಲ. “ಜನರು ಪ್ರೀತಿಯಿಂದಲೇ “ಗೀತಾ’ಳನ್ನು ಸ್ವೀಕರಿಸಿದ್ದಾರೆ. ಮೊದಲ ವಾರ 5 ಕೋಟಿ ಗಳಿಕೆ ಕಂಡಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಸಿಂಗಲ್ ಥಿಯೇಟರ್‌ನಲ್ಲಿ
ಗೀತಾ ಪ್ರದರ್ಶನಕಾಣುತ್ತಿದೆ.
ಒಳ್ಳೆಯ ಚಿತ್ರ ಕೊಟ್ಟ ತೃಪ್ತಿ ನನಗಿದೆ’ ಎಂದರು ಅವರು.
ವಿಜಯ್