Advertisement

ಎರಡು ವರ್ಷಗಳಾದರೂ ಹೆತ್ತವರ ಗುರುತಿಸುತ್ತಿಲ್ಲ ಗೀತಾ

07:50 AM Dec 03, 2017 | Harsha Rao |

ಇಂದೋರ್‌: ಹಲವು ವರ್ಷಗಳ ಕಾಲ ಪಾಕಿಸ್ಥಾನದಲ್ಲಿದ್ದು, 2015ರಲ್ಲಿ ಸ್ವದೇಶಕ್ಕೆ ಮರಳಿದ ಗೀತಾ ಇನ್ನೂ ತನ್ನ ಹೆತ್ತವರನ್ನು ಗುರುತು ಹಿಡಿದಿಲ್ಲ. ಬಿಹಾರದ ದಂಪತಿಯು, ನಾವೇ ಗೀತಾಳ ಹೆತ್ತವರಾಗಿದ್ದು, ಬಹಳ ವರ್ಷಗಳ ಹಿಂದೆ ಕಳೆದುಕೊಂಡಿದ್ದೇವೆ ಎಂದು ಹೇಳಿಕೊಂಡು ಬಂದಿದ್ದರು. ಹೀಗಾಗಿ, ನಳಂದಾ ಮೂಲದ ರಾಮಸ್ವರೂಪ್‌ ಚೌಧರಿ ಮತ್ತು ಚಿಂತಾದೇವಿ ದಂಪತಿಯ ಮುಂದೆ ಗೀತಾಳನ್ನು ಕರೆದುಕೊಂಡು ಹೋಗಿದ್ದೆವು. ಆದರೆ, ಗೀತಾ ಕೈಸನ್ನೆಯ ಮೂಲಕವೇ ಅವರು ನನ್ನ ಹೆತ್ತವರಲ್ಲ ಎಂಬುದನ್ನು ಹೇಳಿದಳು ಎಂದು ಸಾಮಾಜಿಕ ನ್ಯಾಯ ಇಲಾಖೆ ಜಂಟಿ ನಿರ್ದೇಶಕ ಬಿ.ಸಿ.ಜೈನ್‌ ತಿಳಿಸಿದ್ದಾರೆ. ಇದೇ ವೇಳೆ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ‌ ಇಬ್ಬರು ದಂಪತಿಗಳೂ ಗೀತಾಳ ಹೆತ್ತವರೆಂದು ಹೇಳಿಕೊಂಡಿದ್ದು, ಡಿ.11ರಂದು ಅವರ ಭೇಟಿ ಮಾಡಿಸಲಿದ್ದೇವೆ ಎಂದಿದ್ದಾರೆ ಜೈನ್‌. ಈವರೆಗೆ ದೇಶಾದ್ಯಂತದ 10 ಕುಟುಂಬಗಳು ಮುಂದೆ ಬಂದರೂ, ಗೀತಾ ಮಾತ್ರ ಹೆತ್ತವರನ್ನು ಗುರುತಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next