Advertisement

ಮಧು ಬಂಗಾರಪ್ಪ ಪರ ಗೀತಾ ಪ್ರಚಾರ

10:51 PM Apr 09, 2019 | Lakshmi GovindaRaju |

ರಿಪ್ಪನ್‌ಪೇಟೆ: “ಕಳೆದ ಐದಾರು ತಿಂಗಳ ಹಿಂದೆ ಲೋಕಸಭಾ ಉಪ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಅಣ್ಣ ಮಧು ಬಂಗಾರಪ್ಪನವರಿಗೆ ಸೋಲಾಗಿರಬಹುದು. ಕಾರಣ ಆಗ ಕೇವಲ 10 ದಿನಗಳ ಅವಕಾಶದಲ್ಲಿ ಮತದಾರರನ್ನು ತಲುಪಲು ಸಾಧ್ಯವಾಗಿರಲಿಲ್ಲ.

Advertisement

ಆದರೆ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸಾಕಷ್ಟು ದಿನಗಳಿಂದ ಪ್ರಚಾರ ಮಾಡಲು ಅವಕಾಶ ಇದೆ’ ಎಂದು ಜೆಡಿಎಸ್‌ ಮುಖಂಡರಾದ ಗೀತಾ ಶಿವರಾಜ್‌ಕುಮಾರ್‌ ತಿಳಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ ತೆರಳಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಅಚ್ಚೇ ದಿನ್‌ ಕಣ್ಮರೆಯಾಗಿದೆ. ಬಡವರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ ಮೋದಿ ನಯಾಪೈಸೆ ಖಾತೆಗೆ ಹಾಕದೆ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಉದ್ಯೋಗ ಸೃಷ್ಟಿಯಾಗಿಲ್ಲ. ಈ ಬಗ್ಗೆ ಮತದಾರರು ಯೋಚಿಸಿ ಮತದಾನ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next