Advertisement

ಚೀನವನ್ನು ಹಿಂದಿಕ್ಕಲಿದೆ ಭಾರತದ ಜಿಡಿಪಿ!

04:13 AM Mar 11, 2021 | Team Udayavani |

ಹೊಸದಿಲ್ಲಿ: ದೇಶದ ಆರ್ಥಿಕತೆ ಮತ್ತೆ ಹಳಿಗೆ ಬರುತ್ತಿದ್ದು, 2021-22ನೇ ಸಾಲಿನಲ್ಲಿ ಜಿಡಿಪಿ ದರ ಶೇ. 12.6 ಮಟ್ಟ ತಲುಪಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಅಂದಾಜಿಸಿದೆ.

Advertisement

ಜಿಡಿಪಿ ಬೆಳವಣಿಗೆ ಶೇ. 12.6ರಷ್ಟು ಆಗಲಿದೆ. ಈ ಮೂಲಕ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಲಿದೆ. 2021-22ರಲ್ಲಿ ಚೀನದ ಆರ್ಥಿಕತೆ ಶೇ. 7.8ರಷ್ಟು ಬೆಳವಣಿಗೆ ಕಾಣಲಿದ್ದು, 2ನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಒಇಸಿಡಿ ವರದಿ ತಿಳಿಸಿದೆ.

ಒಇ ಸಿಡಿ ವರದಿ ಪ್ರಕಾರ, ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳೂ 2021-22ರ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಕಾಣಲಿವೆ. ಇದಕ್ಕೆ ಕಾರಣ ಒಂದು ಲಸಿಕೆ ನೀಡಿಕೆ ಮತ್ತು ಸರಕಾರಗಳು ಘೋಷಿಸುತ್ತಿರುವ ಪ್ರೋತ್ಸಾಹ ಪ್ಯಾಕೇಜ್ಗಳು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next