Advertisement

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

10:31 AM Apr 23, 2024 | Team Udayavani |

ದಾವಣಗೆರೆ: ದೇಶದ ಭವಿಷ್ಯವಾಗಿರುವ ಯುವ ಸಮೂಹಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ನಿಜವಾದ ಗ್ಯಾರಂಟಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು.

Advertisement

ಸೋಮವಾರ ಹರಪನಹಳ್ಳಿ ತಾಲೂಕಿನ ಬಾಗಳಿ, ಮೈದೂರು, ಚಿಗಟೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಅವರ ಜೊತೆ ಮತಯಾಚಿಸಿ ಮಾತಾಡಿದ ಅವರು ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ ಸುಳ್ಳಿನ ಗ್ಯಾರಂಟಿ ನೀಡಿದೆ. ಮೋದಿ ಅವರು ದೇಶದ ಯುವಕರಿಗೆ, ಸಾಮಾನ್ಯ ಜನರಿಗೆ ನಿಜವಾದ ಗ್ಯಾರಂಟಿ ನೀಡಿದ್ದಾರೆ ಎಂದರು.

ಮೋದಿಯವರು ಅಗ್ನಿವೀರ್‌ ನೇಮಕಾತಿ ಮೂಲಕ ಯುವಕರಿಗೆ ಉದ್ಯೋಗ ಕೊಡುವ ಜೊತೆಗೆ ರಾಷ್ಟ್ರ ಪ್ರೇಮ ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮೇಕ್‌ ಇನ್‌ ಇಂಡಿಯಾ, ಮೇಡ್‌ ಇನ್‌ ಇಂಡಿಯಾ, ಮುದ್ರಾ ಸೇರಿದಂತೆ ಅನೇಕ ಯೋಜನೆ ಮೂಲಕ ಹೊಸ ಉದ್ಯಮ ಮತ್ತು ಕೋಟ್ಯಂತರ ಉದ್ಯೋಗ ಸೃಷ್ಟಿಗೆ ಕಾರಣೀಕರ್ತರಾಗಿ ದೇಶದ ಯುವಕರಿಗೆ ನಿಜವಾದ ಗ್ಯಾರಂಟಿಯಾಗಿದ್ದಾರೆ ಎಂದು ಬಣ್ಣಿಸಿದರು. ರಾಜ್ಯ ಸರ್ಕಾರ ನಿರುದ್ಯೋಗಿ ಯುವಕರಿಗೆ ಯುವ ನಿಧಿ ನೀಡುತ್ತೇವೆ ಎಂದು ಹೇಳಿ ಯಾಮಾರಿಸಿದೆ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗೆ ಮರುಳಾದರೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಭವಿಷ್ಯ ಇರುವುದಿಲ್ಲ. ದೇಶದ ರಕ್ಷಣೆ, ನಮ್ಮ ನಿಮ್ಮ ರಕ್ಷಣೆ, ಅಭಿವೃದ್ಧಿಗಾಗಿ ಮೋದಿ ಅವರು ಮತ್ತೂಮ್ಮೆ ಪ್ರಧಾನಿ ಆಗಬೇಕಿದೆ. ನನ್ನ ಕ್ರಮ ಸಂಖ್ಯೆ 1, ಹೆಸರು ಗಾಯಿತ್ರಿ ಸಿದ್ದೇಶ್ವರ, ಗುರುತು ಕಮಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರೆ ಮೋದಿ ಅವರು ಮತ್ತೂಮ್ಮೆ ಪ್ರಧಾನಿ ಆಗುವುದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಹರಪನಹಳ್ಳಿ ಭಾಗದ ಕೆಲ ಗ್ರಾಮಗಳ ಜನ ಉದ್ಯೋಗ ಅರಸಿಕೊಂಡು ಮಲೆನಾಡಿನ ಕಾಫಿ ತೋಟಗಳ ಕಡೆಗೆ ಗುಳೇ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಜನರು ಕೆಲಸ ಅರಸುತ್ತಾ ಗುಳೇ ಹೋಗುವುದನ್ನು ಶಾಶ್ವತವಾಗಿ ತಡೆಗಟ್ಟಿ ಅವರವರ ಗ್ರಾಮಗಳಲ್ಲಿಯೇ ಉದ್ಯೋಗ ಖಾತ್ರಿ ಯೋಜನೆ
ಮೂಲಕ ಉದ್ಯೋಗ ದೊರಕಿಸಿಕೊಟ್ಟು ಸ್ವಗ್ರಾಮ ಗಳಲ್ಲಿಯೇ ನೆಮ್ಮದಿಯಿಂದ ಜೀವನ ನಡೆಸುವಂತಾಗಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಮಾತನಾಡಿ, ಭಾರತ ವಿಶ್ವದಲ್ಲೇ ಬಲಾಡ್ಯ ದೇಶವಾಗಿ ಹೊರ ಹೊಮ್ಮುತ್ತಿದೆ. ಅದಕ್ಕೆ ಪ್ರಧಾನಿ ನರೇಂದ್ರ
ಮೋದಿಯವರೇ ಕಾರಣ. ಮೋದಿಯವರು ಸದಾ ರೈತರ ಪರವಾಗಿ ಚಿಂತಿಸುವ, ಪರವಾಗಿ ದುಡಿಯುವ ಹೃದಯವಂತರು. ಹರಪನಹಳ್ಳಿ ತಾಲೂಕು ಅಭಿವೃದ್ಧಿಗೆ ನಾನು ಸಿದ್ದೇಶಣ್ಣ ಸಾಕಷ್ಟು ಅನುದಾನ ತಂದಿದ್ದೇವೆ. ಸಿಸಿ ರಸ್ತೆ, ಚರಂಡಿ, ಕುಡಿವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿದ್ದೇವೆ.

Advertisement

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಚಾಲನೆ ಕೊಟ್ಟಿದ್ದು ನಾವೇ. ಈ ಬಾರಿ ಗಾಯಿತ್ರಿ ಸಿದ್ದೇಶ್ವರ ಅವರು ಹೆಚ್ಚಿನ ಮತಗಳ ಅಂತರದಿಂದ ಗೆದ್ದು ದೆಹಲಿಗೆ ಹೋದರೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ. ಕಾರ್ಯಕರ್ತರು ನೀವೇ ಅಭ್ಯರ್ಥಿ ಎಂದುಕೊಂಡು ಮನೆ ಮನೆಗೂ ಹೋಗಿ ಗಾಯಿತ್ರಿ ಸಿದ್ದೇಶ್ವರ್‌ ಅವರ ಪರ ಮತಯಾಚಿಸಬೇಕು ಎಂದು ಕರೆ ನೀಡಿದರು.

ಕಮಲಾ ನಿರಾಣಿ, ಬಿಜೆಪಿ ಮುಖಂಡರಾದ ಗಣೇಶ್‌, ಚಿಗಟೇರಿ ಮಂಜುನಾಥ್‌, ಬೆಣ್ಣೆಹಳ್ಳಿ ಮಾರುತಿ, ಲೋಕೇಶ್‌, ಕಲ್ಲಣ್ಣಗೌಡ, ಮಂಜುನಾಥ್‌, ಹನುಮಂತಪ್ಪ, ಮಹಾಂತೇಶ್‌, ಬಸವರಾಜ್‌, ಅಂಜಿನಪ್ಪ, ಮಂಡಲ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್‌ ಮಟ್ಟದ ಅಧ್ಯಕ್ಷರು, ಬಿಜೆಪಿ ಮುಖಂಡರು ಸೇರಿದಂತೆ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಅನೇಕ ಮುಖಂಡರು ಇದ್ದರು. ಅನೇಕರು ವಿವಿಧ ಪಕ್ಷ ತೊರೆದು ಬಿಜೆಪಿ ಸೇರಿದರು.

Advertisement

Udayavani is now on Telegram. Click here to join our channel and stay updated with the latest news.

Next