Advertisement
ಪ್ರತಿ ವರ್ಷವೂ ಶ್ರೀ ಗವಿಮಠವು ಜಾತ್ರೆಯ ಸಮಯದಲ್ಲಿ ಒಂದೊಂದು ವಿಶಿಷ್ಟ ಹಾಗೂ ವಿಭಿನ್ನ ಜಾಗೃತಿಯ ಅಭಿಯಾನ, ಕಾರ್ಯಕ್ರಮಗಳ ಮೂಲಕ ನಾಡಿನ ಭಕ್ತರ ಗಮನ ಸೆಳೆಯುತ್ತಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಮಠವನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ಸಾವಿರಾರು ಜನರ ಪ್ರಾಣ ಉಳಿಸಿ ನಾಡಿನೆಲ್ಲೆಡೆ ಹೆಸರಾಗಿತ್ತು. ಇದಲ್ಲದೇ ಪರಿಸರ ಜಾಗೃತಿ, ಜಲ ಸಂರಕ್ಷಣೆ, ಹಿರೇಹಳ್ಳ ಸ್ವಚ್ಛತೆ, ಕೆರೆಗಳ ಹೂಳೆತ್ತುವುದು ಸೇರಿದಂತೆ ಪ್ರತಿಭಾನ್ವಿತರಿಗೆ ದಿನದ 24 ಗಂಟೆಯೂ ಅಭ್ಯಾಸಕ್ಕಾಗಿ ಗ್ರಂಥಾಲಯದ ಸೌಕರ್ಯವನ್ನು ಶ್ರೀಮಠದಲ್ಲಿ ಕಲ್ಪಿಸಿ ಹೆಸರಾಗಿದೆ.
Related Articles
Advertisement
ಈ ಕಾರ್ಯಕ್ರಮದಲ್ಲಿ ಬಿಜಕಲ್‌ನ ವಿರಕ್ತಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಘನಶ್ಯಾಮ ಬಾಂಡಗೆ, ಸೆಲ್ಕೋ ಕಂಪನಿ ವಲಯ ವ್ಯವಸ್ಥಾಪಕ ಮಂಜುನಾಥ ಭಾಗವತ, ಜಿಲ್ಲಾ ವಿಶೇಷಚೇತನ ಹಾಗೂ ಕಲ್ಯಾಣಯೋಜನಾಅಧಿಕಾರಿ ಶ್ರೀದೇವಿ ನಿಡಗುಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶೃಂಗೇರಿ ಅವರು ಭಾಗವಹಿಸಲಿದ್ದಾರೆ.
ಸಾಮೂಹಿಕ ವಿವಾಹ ಮಹೋತ್ಸವವು ಸಾಂಪ್ರದಾಯಿಕ ವಿಧಿವಿದಾನಗಳಂತೆ ನಡೆಯಲಿದ್ದು11.30 ಕ್ಕೆ ಮಾಂಗಲ್ಯಧಾರಣ ಕಾರ್ಯಕ್ರಮ ನೆರವೇರುವುದು. ನವ ಜೋಡಿಗಳ ಸಂಬಂಧಿಕರು, ಭಕ್ತರು ಭಾಗವಹಿಸಲಿದ್ದಾರೆ. ಕು. ಶಕುಂತಲಾ ಬಿನ್ನಾಳ ಸಂಗೀತ ಕಾರ್ಯಕ್ರಮ ನಡೆಸುವರು. ಗವಿಮಠದಲ್ಲಿನ ಮಹಾದಾಸೋಹದಲ್ಲಿ ಪ್ರಸಾದ ವ್ಯವಸ್ಥೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 9448263019, 9901501235 ಸಂಖ್ಯೆಗಳನ್ನು ಸಂಪರ್ಕಿಸಲು ಮಠವು ಪ್ರಕಟಣೆಯಲ್ಲಿ ತಿಳಿಸಿದೆ.