Advertisement

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

03:21 PM Jun 24, 2024 | Team Udayavani |

ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಂದಿನ ಮುಖ್ಯ ತರಬೇತುದಾರನ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಮುಂದಿನ ಕೋಚ್ ಆಗುವುದು ಬಹುತೇಕ ಅಂತಿಮವಾಗಿದೆ. ಗೌತಮ್ ಇತ್ತೀಚೆಗಷ್ಟೇ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಎದುರು ಸಂದರ್ಶನಕ್ಕೆ ಹಾಜರಾಗಿದ್ದರು.

Advertisement

ಈ ಸಂದರ್ಶನದಲ್ಲಿ ಗೌತಿ ಹಲವು ಬೇಡಿಕೆಗಳನ್ನು ಇರಿಸಿದ್ದಾರೆ. ಅವುಗಳಿಗೆ ಅಸ್ತು ಎಂದರೆ ಮಾತ್ರ ತಾನು ಹುದ್ದೆಗೆ ಬರಲು ಸಿದ್ದ ಎಂದಿದ್ದಾರೆ ಎಂದು ವರದಿಯಾಗಿದೆ.

ಸಂದರ್ಶನದಲ್ಲಿ ಗಂಭೀರ್ ಬಿಸಿಸಿಐನ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಒಂದಲ್ಲ ಐದು ಷರತ್ತುಗಳನ್ನು ಹಾಕಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ.

ತಂಡದ ಎಲ್ಲಾ ಕ್ರಿಕೆಟಿಂಗ್ ಕಾರ್ಯಾಚರಣೆಗಳು ತನ್ನ ನಿಯಂತ್ರಣದಲ್ಲಿರಬೇಕು. ಇದಕ್ಕೆ ಮಂಡಳಿ ಅಡ್ಡಿಬರಬಾರದು ಎಂದು ಮೊದಲ ಷರತ್ತು ಇರಿಸಿದ್ದಾರೆ.

ಎರಡನೆಯದಾಗಿ ತನ್ನ ಸಹಾಯಕ ಸಿಬ್ಬಂದಿಗಳು ತಾನು ಹೇಳಿದವರೇ ಆಗಬೇಕು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಗಳನ್ನು ತಾನು ಹೇಳಿದವರೇ ಆಗಬೇಕು ಎಂದು ಹೇಳಿದ್ದಾರೆ.

Advertisement

ಅತ್ಯಂತ ಪ್ರಮುಖ ಷರತ್ತು ಏನೆಂದರೆ, ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರಿಗೆ 2025ರ ಚಾಂಪಿಯನ್ಸ್ ಟ್ರೋಫಿ ಕೊನೆಯದಾಗಿರಬಹುದು. ಈ ಆಟಗಾರರು ಭಾರತವನ್ನು ಗೆಲ್ಲಿಸಲು ವಿಫಲವಾದರೆ, ಅವರನ್ನು ತಂಡದಿಂದ ಕೈಬಿಡಲಾಗುವುದು.

ನಾಲ್ಕನೇಯ ಷರತ್ತು ಏನೆಂದರೆ, ಟೆಸ್ಟ್ ಕ್ರಿಕೆಟ್ ಗೆ ಪ್ರತ್ಯೇಕ ತಂಡ ಇರಬೇಕು ಎನ್ನುವುದು.

ಐದನೇಯದಾಗಿ ಗಂಭೀರ್ ಅವರು ಈಗಿನಿಂದಲೇ 2027ರ ಏಕದಿನ ವಿಶ್ವಕಪ್ ಗೆ ತಯಾರಿ ನಡೆಸುತ್ತಾರೆ. ಇದಕ್ಕೆ ಬಿಸಿಸಿಐ ಅನುಮತಿ ನೀಡಬೇಕು.

ಹೀಗಾಗಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್, ರೋಹಿತ್, ಶಮಿ ಮತ್ತು ಜಡೇಜಾ ಉತ್ತಮ ಪ್ರದರ್ಶನ ನೀಡದಿದ್ದರೆ ಅವರನ್ನು ಏಕದಿನ ಕ್ರಿಕೆಟ್ ನಿಂದ ಕೈಬಿಡಲಾಗುವುದು. ಆದರೆ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಮುಂದುವರಿಯುತ್ತಾರೆಯೇ ಎನ್ನುವುದು ಇದುವರೆಗೆ ಖಚಿತವಾಗಿಲ್ಲ.

ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ಯುವ ತಂಡವನ್ನು ಕಟ್ಟಲು ಗಂಭೀರ್ ಸಿದ್ದರಾಗಿದ್ದಾರೆ ಎನ್ನುತ್ತವೆ ವರದಿ.

Advertisement

Udayavani is now on Telegram. Click here to join our channel and stay updated with the latest news.

Next