Advertisement

ಏಷ್ಯಾದ ಅಗ್ರ ಶ್ರೀಮಂತ ಅದಾನಿ! ಮುಕೇಶ್‌ ಅಂಬಾನಿಯನ್ನು ಹಿಂದಿಕ್ಕಿ ಟಾಪ್‌ 10ನೇ ಸ್ಥಾನಕ್ಕೆ

08:33 PM Feb 08, 2022 | Team Udayavani |

ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮೊದಲಿದ್ದ ಉದ್ಯಮಿ ಮುಕೇಶ್‌ ಅಂಬಾನಿ ಅವರನ್ನು ಹಿಂದಿಕ್ಕಿ, ಉದ್ಯಮಿ ಗೌತಮ್‌ ಅದಾನಿ ಆ ಸ್ಥಾನಕ್ಕೇರಿದ್ದಾರೆ. ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ ವರದಿಯ ಪ್ರಕಾರ, ಅದಾನಿ ಅವರ ಆಸ್ತಿ ಮೌಲ್ಯ 6.61 ಲಕ್ಷ ಕೋಟಿ(88.5 ಬಿಲಿಯನ್‌ ಡಾಲರ್‌) ರೂ. ಇದ್ದರೆ, ಮುಕೇಶ್‌ ಅಂಬಾನಿ ಆಸ್ತಿ ಮೌಲ್ಯ 6.56 ಲಕ್ಷ ಕೋಟಿ ರೂ.(87.9 ಬಿಲಿಯನ್‌ ಡಾಲರ್‌)ನಷ್ಟಿದೆ.

Advertisement

ಏರಿಕೆ ಎಷ್ಟು?
2021ರಲ್ಲಿ ಗೌತಮ್‌ ಅದಾನಿ ಆಸ್ತಿಮೌಲ್ಯ ಬರೋಬ್ಬರಿ 12 ಶತಕೋಟಿ ಡಾಲರ್‌ (89,600 ಕೋಟಿ ರೂ.) ಏರಿದೆ. 2021ರಲ್ಲಿ ವಿಶ್ವದಲ್ಲೇ ತಮ್ಮ ಆಸ್ತಿ ಮೌಲ್ಯವನ್ನು ಅತಿ ಹೆಚ್ಚು ಏರಿಸಿಕೊಂಡ ಉದ್ಯಮಿಗಳಲ್ಲಿ ಗೌತಮ್‌ ಅದಾನಿ ಮೊದಲ ಸ್ಥಾನದಲ್ಲಿದ್ದಾರೆ.

ಕಾರಣವೇನು?
ಅದಾನಿ ಅವರ ಆಸ್ತಿಮೌಲ್ಯ ಒಮ್ಮೆಲೆ ಏರಿಕೆ ಕಾಣುವುದಕ್ಕೆ ಕಾರಣ ಗ್ರೀನ್‌ ಎನರ್ಜಿಯತ್ತ ಅವರ ಕೆಲಸ. ಹಾಗೆಯೇ ಆಸ್ಟ್ರೇಲಿಯಾದಲ್ಲಿ ಅವರು ಆರಂಭಿಸಿದ ಕಾರ್‌ವೆುಚೆಲ್‌ ಕಲ್ಲಿದ್ದಲು ಗಣಿ. ಹಲವು ಕ್ಷೇತ್ರಗಳಲ್ಲಿ ಅಂಗಸಂಸ್ಥೆ ತೆರೆದಿರುವ ಅದಾನಿ ಅವರ ಕೆಲವು ಅಂಗಸಂಸ್ಥೆಗಳ ಮೌಲ್ಯ ಕಳೆದ ಎರಡೇ ವರ್ಷಗಳಲ್ಲಿ ಬರೋಬ್ಬರಿ ಶೇ.600ರಷ್ಟು ಏರಿಕೆ ಕಂಡಿದೆ.

ಜುಕರ್‌ಬರ್ಗ್‌ರನ್ನು ಹಿಂದಿಕ್ಕಿದ ಭಾರತೀಯರು:
ಈವರೆಗೆ ಜಾಗತಿಕ ಶ್ರೀಮಂತರ ಪಟ್ಟಿಯ ಟಾಪ್‌ 10ರಲ್ಲಿ ಸ್ಥಾನ ಪಡೆದ ಭಾರತೀಯ ಅಂದರೆ ಮುಕೇಶ್‌ ಅಂಬಾನಿ ಮಾತ್ರ. ಆದರೆ ಇದೀಗ ಗೌತಮ್‌ ಅದಾನಿ ಮುಕೇಶ್‌ರನ್ನೂ ಮೀರಿಸಿ ಟಾಪ್‌ 10ನೇ ಸ್ಥಾನದಲ್ಲಿದ್ದಾರೆ. 11ನೇ ಸ್ಥಾನದಲ್ಲಿ ಮುಕೇಶ್‌ ಅಂಬಾನಿಯಿದ್ದಾರೆ. ಇತ್ತೀಚೆಗೆ ಅಮೆರಿಕ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಪೆಟ್ಟು ತಿಂದ ಫೇಸ್‌ಬುಕ್‌ ಮಾಲೀಕ ಮಾರ್ಕ್‌ ಜುಕರ್‌ಬರ್ಗ್‌ 13ನೇ ಸ್ಥಾನಕ್ಕಿಳಿದಿದ್ದಾರೆ.

ಸ್ಥಾನ ವಿಶ್ವದ ಶ್ರೀಮಂತರು ಏಷ್ಯಾದ ಶ್ರೀಮಂತರು
1 ಎಲಾನ್‌ ಮಸ್ಕ್ ಗೌತಮ್‌ ಅದಾನಿ
2 ಜೆಫ್ ಬೆಜೋಸ್‌ ಮುಕೇಶ್‌ ಅಂಬಾನಿ
3 ಬರ್ನಾರ್ಡ್‌ ಅರ್‍ನಾಲ್ಟ್ ಮಾ ಹೌಟೆಂಗಾ
4 ಬಿಲ್‌ ಗೇಟ್ಸ್‌ ಕೊಲಿನ್‌ ಹಾಂಗ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next