Advertisement

Festival ಕರಾವಳಿಯಲ್ಲಿ ಗೌರಿ, ಗಣೇಶ ಹಬ್ಬದ ಸಂಭ್ರಮ

01:10 AM Sep 06, 2024 | Team Udayavani |

ಮಂಗಳೂರು/ಉಡುಪಿ: ಗಣೇಶ ಚತುರ್ಥಿಯ ಸಂಭ್ರಮದ ಆಚರಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಿದ್ಧತೆ ನಡೆದಿದೆ. ಶುಕ್ರವಾರ ಗೌರಿ ಹಬ್ಬ ಮತ್ತು ಶನಿವಾರ ಗಣಪತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಗಣೇಶ ಹಬ್ಬ ನಡೆಯಲಿದೆ.

Advertisement

ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯನ್ನು ಒಳಗೊಂಡಿ ರುವ ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ 165 ಕಡೆಗಳಲ್ಲಿ ಮತ್ತು ಜಿಲ್ಲಾ ವ್ಯಾಪ್ತಿಯ 221 ಸೇರಿ ಒಟ್ಟು 386 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯಲಿದೆ.

ಪೆಂಡಾಲು ನಿರ್ಮಾಣ, ಸ್ವಾಗತ ಕಮಾನು, ದೀಪಾಲಂಕಾರ ಸಹಿತ ಉತ್ಸವ ಆಚರಣೆಗೆ ಸಂಬಂಧಿಸಿದ ಸಿದ್ಧತೆ ಅಂತಿಮ ಹಂತದಲ್ಲಿವೆ. ಗಣಪತಿ ಮೂರ್ತಿ ತಯಾರಕರೂ ಮೂರ್ತಿ ಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಉಡುಪಿಯಲ್ಲಿ
ಉಡುಪಿ ಜಿಲ್ಲೆಯಲ್ಲೂ ಗೌರಿ, ಗಣೇಶ ಹಬ್ಬಕ್ಕಾಗಿ ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸಂಘ ಸಂಸ್ಥೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ.

ಗುರುವಾರ ನಗರಾದ್ಯಂತ ಖರೀದಿ ಸಂಭ್ರಮ ಅಧಿಕವಾಗಿತ್ತು. ಮಹಿಳೆಯರು ಗೌರಿ ಹಬ್ಬಕ್ಕೆ ಬೇಕಿರುವ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಶುಕ್ರವಾರ ಬಹುಪಾಲು ಮಹಿಳೆಯರು ಮನೆಯಲ್ಲೇ ಪೂಜೆ ಸಲ್ಲಿಸುತ್ತಾರೆ. ಕೆಲವರು ದೇವಸ್ಥಾನಕ್ಕೆ ಬರುವುದು ಉಂಟು. ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನಡೆಯಲಿದೆ.

ವಿವಿಧೆಡೆ ಟ್ರಾಫಿಕ್‌ ದಟ್ಟಣೆ
ನಗರದ ಎಲ್ಲ ಅಂಗಡಿಗಳು, ಮಾಲ್‌ಗ‌ಳಲ್ಲಿ ಜನರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸುವಲ್ಲಿ ನಿರತ ರಾಗಿದ್ದರು. ಕಲ್ಸಂಕ, ಸಿಟಿ ಬಸ್‌ ನಿಲ್ದಾಣ, ತೆಂಕಪೇಟೆ, ಬಡಗುಪೇಟೆ ಭಾಗಗಳಲ್ಲಿ ಟ್ರಾಫಿಕ್‌ ದಟ್ಟಣೆ ಕಂಡುಬಂತು. ಈ ನಡುವೆ ಬಿಟ್ಟು ಬಿಟ್ಟು ಮಳೆ ಸುರಿದರೂ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿರಲಿಲ್ಲ. ರಾತ್ರಿಯವರೆಗೂ ಜನರ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು.

Advertisement

ಹೂವುಗಳ ಖರೀದಿ
ನಗರದಲ್ಲಿ ಹೊರಜಿಲ್ಲೆಯ ವ್ಯಾಪಾರಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಹೂವುಗಳ ಮಾರಾಟದಲ್ಲಿ ನಿರತರಾಗಿದ್ದಾರೆ. ನಗರದ ಹೂವಿನ ಹಾಗೂ ಹಣ್ಣು ಮಾರಾಟದಲ್ಲೂ ಉತ್ತಮ ವ್ಯಾಪಾರ ನಡೆಯಿತು. ಬೇಕರಿ ತಿನಿಸುಗಳ ಖರೀದಿಗೂ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next