ಮುಂಬಯಿ: ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠ ಗೋವಾ ಪೋಂಡಾ ಇಲ್ಲಿ ನೂತನ ಶ್ರೀ ವಿಟuಲ ರುಕು¾ಣಿ ಪ್ರತಿಷ್ಠಾಪನಾ ಮಹೋತ್ಸವವು ಮಾ. 13ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಪರಮಪೂಜ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಉತ್ಸವದಲ್ಲಿ ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ವಿವಿಧೆಡೆಗಳಿಂದ, ಗೋವಾ, ಬೆಂಗಳೂರು, ಕರ್ನಾಟಕ, ಹುಬ್ಬಳಿ, ಧಾರವಾಡ, ಕೊಂಕಣ ಮಹಾರಾಷ್ಟ್ರದ ವಿವಿಧೆಡೆಗಳಿಂದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಮಾ. 10ರಿಂದ ಮಾ. 16ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದಿನಂಪ್ರತಿ ವಿವಿಧ ಪೂಜೆಗಳು, ಯಜ್ಞ ಯಾಗಾದಿಗಳು, ಲಘು ರುದ್ರ ಹವನ, ವಿಷ್ಣು ಯಾಗ, ತುಳಸಿ ಪೂಜೆ, ಪಲ್ಲಕ್ಕಿ ಉತ್ಸವ, ಶಾಂತಿ ಪಾಠ, ಪೂಜೆ, ಆರತಿ, ನೂತನ ಮೂರ್ತಿ ಅಭಿಷೇಕ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿತು.
ಪಂಡಿತ್ ಭೀಮ್‌ಸೇನ್ ಜೋಶಿ ಅವರ ಶಿಷ್ಯ ಪಂಡಿತ್ ಉಪೇಂದ್ರ ಭಟ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಮಂಗೇಶ್ ದೇವಸ್ಥಾನ್, ಅಭಯ್ ಕಾಕೋಡ್ಕರ್, ಭೂಷಣ್ ಜ್ಯಾಕ್, ಪ್ರಮೋದ್ ಗಾಯೊ¤ಂಡೆ, ಕಿಶೋರ್ ಕುಲಕರ್ಣಿ, ಜಯಂತ್ ಗಾಯೊ¤ಂಡೆ, ಸುನೀಲ್ ದೇಶ್ಪಾಂಡೆ, ಅಶೋಕ್ ನಾಯಕ್, ಸಂತೋಷ್ ವಾಗ್ಲೆ, ಸುಬ್ರಹ್ಮಣ್ಯ ಭಟ್, ಧ್ಯಾನೇಶ್ ಸರಾಫ್, ಅಮೋಲ್ ರೇಗೆ, ತೋನ್ಸೆ ವೆಂಕಟೇಶ್ ಶೆಣೈ, ಜಗದೀಶ್ ಶೆಣೈ, ಕಮಲಾಕ್ಷ ಸರಾಫ್ ಮೊದಲಾದವರು ಉಪಸ್ಥಿತರಿದ್ದರು.
ಮಾ. 13ರಂದು ಸಂಜೆ ಕವಳೆ ಮಠದ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಅತಿಥಿಗಳನ್ನು ಶ್ರೀಗಳು ಫಲ ಮಂತ್ರಾಕ್ಷತೆಯನ್ನಿತ್ತು ಅಭಿನಂದಿಸಿ ಗೌರವಿಸಿದರು. ಕವಳೆ ಮಠ ಮುಂಬಯಿ ಸ್ಥಳೀಯ ಸಮಿತಿಯ ಪಿಆರ್‌ಒ ಕಮಲಾಕ್ಷ ಸರಾಫ್ ಅವರು ಪಾಲ್ಗೊಂಡು ಸಹಕರಿಸಿದರು. ದಾನಿಗಳನ್ನು, ವಿವಿಧ ಕ್ಷೇತ್ರಗಳ ಗಣ್ಯರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಸಮಾಜ ಬಾಂಧವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.