ಹುಣಸೂರು: ಅಡುಗೆ ಮಾಡುತ್ತಿದ್ದ ವೇಳೆ ಅನಿಲ ಸಿಲೆಂಡರ್ ಸೋರಿಕೆಯಾಗಿ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ ಫ್ರಿಡ್ಜ್ ಸ್ಫೋಟಗೊಂಡು ಮಹಿಳೆ ಸೇರಿದಂತೆ ಐವರು ತೀವ್ರ ಗಾಯಗೊಂಡಿರುವ ಘಟನೆ ನಗರದ ಲಾಲ್ ಬಂದ್ ಬೀದಿಯಲ್ಲಿ ನಡೆದಿದೆ.
ನಗರದ ಲಾಲ್ ಬಂದ್ ಬೀದಿ ನಿವಾಸಿ ಆಟೋ ಚಾಲಕ ಚಂದ್ರುರವರಿಗೆ ಸೇರಿದ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಸಾಮಗ್ರಿಗಳು ಸೇರಿದಂತೆ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದೆ.
ಇದನ್ನೂ ಓದಿ:ಮಹಿಳೆಗೆ ಕಿರುಕುಳ, ನಾಲ್ವರು ಆರೋಪಿಗಳ ಮೇಲೆ ಕ್ರಿಮಿನಲ್ ಕೇಸ್
ಘಟನೆಯಲ್ಲಿ ಚಂದ್ರುರ ಪುತ್ರ ಶಿವಕುಮಾರ್, ತಾಯಿ ಜಯಮ್ಮ, ಪತ್ನಿ ಸುಶ್ಮಿತಾ, ಶಿವಕುಮಾರ್, ಸಹೋದರ ಮಹೇಶ್ ಹಾಗೂ ಬೆಂಕಿ ನಂದಿಸಲು ಬಂದಿದ್ದ ಪಕ್ಕದ ಮನೆಯ ತಾವುಲ್ಲಾರ ಪುತ್ರ ಮಹಮದ್ ಉರ್ ರೆಹಮಾನ್ ರವರಿಗೆ ಸುಟ್ಟ ಗಾಯಗಳಾಗಿದ್ದು, ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸ್ವಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿದ ಬಿಜೆಪಿ!
ಸಾರ್ವಜನಿಕರ ಮಾಹಿತಿಯ ಮೇರೆಗೆ ಅಗ್ನಿಶಾಮಕ ಸಿಬ್ಬಂದಿಗಳು ಸಕಾಲದಲ್ಲಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.