Advertisement

ವಿಶಾಖಪಟ್ಟಣ ಅನಿಲ ದುರಂತದ ಫ್ಯಾಕ್ಟರಿ ಮೂಲ ದಕ್ಷಿಣ ಕೊರಿಯಾ; ಹಲವು ಪ್ರಾಣಿ, ಪಕ್ಷಿ ಸಾವು

08:29 AM May 08, 2020 | Nagendra Trasi |

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಿಯಾ ಕೆಮಿಕಲ್ ಪ್ಲ್ಯಾಂಟ್ ನಲ್ಲಿ ಸಂಭವಿಸಿದ ಅನಿಲ ಸೋರಿಕೆ ದುರಂತದಲ್ಲಿ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದು ದಕ್ಷಿಣ ಕೊರಿಯಾದ ಎಲ್ ಜಿ ಗ್ರೂಪ್ ನ ಕಂಪನಿಯಾಗಿದ್ದು, ಇದರ ಕೇಂದ್ರ ಕಚೇರಿ ಮುಂಬೈನಲ್ಲಿ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

1961ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಕಂಪನಿ ಪಾಲಿಸ್ಟ್ರಿಯೆನ್ ತಯಾರಿಸುತ್ತಿತ್ತು. ಈ ಕಂಪನಿ 1978ರಲ್ಲಿ ಮೆಕ್ ಡೊವೆಲ್ ಮತ್ತು ಯುಬಿ ಗ್ರೂಪ್ ಜತೆ ವಿಲೀನವಾಗಿತ್ತು. ನಂತರ ದಕ್ಷಿಣ ಕೊರಿಯಾದ ಎಲ್ ಜಿ ಕೆಮಿಕಲ್ ಭಾರತದಲ್ಲಿ ಮಾರುಕಟ್ಟೆಗಾಗಿ ಹುಡುಕಾಟ ನಡೆಸುತ್ತಿತ್ತು. ಆಗ ಯುಬಿ ಗ್ರೂಪ್ ಒಡೆತನದಲ್ಲಿದ್ದ ಹಿಂದೂಸ್ತಾನ್ ಪಾಲಿಮರ್ಸ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡು 1997ರಲ್ಲಿ ಎಲ್ ಜಿ ಪಾಲಿಮರ್ಸ್ ಇಂಡಿಯಾ ಎಂದು ಹೆಸರನ್ನು ಬದಲಾಯಿಸಿತ್ತು.

ಎಲ್ ಜಿ ಪಾಲಿಮರ್ಸ್ ಪಾಲಿಸ್ಟ್ರೀಯನ್ ಉತ್ಪಾದಿಸುವ ಪ್ರಮುಖ ಕಂಪನಿಯಾಗಿದೆ. ಇದೀಗ ವಿಶಾಖಪಟ್ಟಣಂನ ಆರ್ ಆರ್ ವೆಂಕಟಾಪುರಂನಲ್ಲಿರುವ ಎಲ್ ಜಿ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅನಿಲ ದುರಂತದಿಂದಾಗಿ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸುತ್ತಮುತ್ತಲಿನ ಐದು ಗ್ರಾಮಗಳ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ವಿವರಿಸಿದೆ.

ಅನಿಲ ಸೋರಿಕೆಯಿಂದಾಗಿ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 5ಸಾವಿರ ಜನರ ಅಸ್ವಸ್ಥರಾಗಿದ್ದಾರೆ. ಪ್ಲ್ಯಾಂಟ್ ಇದ್ದ ಸುಮಾರು ಮೂರು ಕಿಲೋ ಮೀಟರ್ ದೂರದವರೆಗೆ ಅನಿಲ ಹರಡಿದ್ದು ಜನರ ಮೇಲೆ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿದೆ. ಹಲವು ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next