Advertisement
ಇದು ಪಾಕಿಸ್ತಾನದಲ್ಲಿ ಕುಸಿಯುತ್ತಿರುವ ಆರ್ಥಿಕತೆಯ ಪ್ರತೀಕವಾಗಿದೆ. ಅಲ್ಲದೇ ಅಪಾಯಕಾರಿಯೂ ಹೌದು. ಖೈಬರ್ ಪಖು¤ಂಖ್ವಾ ಪ್ರಾಂತ್ಯದಲ್ಲಿ ನಾಗರಿಕರು ಎಲ್‌ಪಿಜಿ ಅನಿಲ ತುಂಬಿರುವ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ, ಸರಬರಾಜುದಾರರು ಕೂಡ ಎಲ್‌ಪಿಜಿ ಅನಿಲ ಸರಬರಾಜಿನಲ್ಲಿ ಕಡಿತ ಮಾಡಿದ್ದಾರೆ.
ಕಂಪ್ರಸರ್ ಸಹಾಯದಿಂದ ಸರಬರಾಜುದಾರರು, ಪ್ಲಾಸ್ಟಿಕ್ ಬ್ಯಾಗ್ ಅನ್ನು ನಳಿಕೆ ಮತ್ತು ಕವಾಟ ಬಳಸಿ ಬಿಗಿಯಾಗಿ ಕಟ್ಟುತ್ತಾರೆ. ನಂತರ ಪ್ಲಾಸ್ಟಿಕ್ ಬ್ಯಾಗ್‌ಗೆ ಅನಿಲ ತುಂಬಿಸುತ್ತಾರೆ. 3-4 ಕೆಜಿ ಎಲ್‌ಪಿಜಿ ಅನಿಲವನ್ನು ಪ್ಲಾಸ್ಟಿಕ್ ಬ್ಯಾಗ್‌ಗೆ ತುಂಬಲು ಅಂದಾಜು ಒಂದು ಗಂಟೆ ಬೇಕಾಗುತ್ತದೆ. ಒಂದು ಪ್ಲಾಸ್ಟಿಕ್ ಬ್ಯಾಗ್ ಅನಿಲಕ್ಕೆ 500ರಿಂದ 900 ಪಾಕಿಸ್ತಾನಿ ರೂ. ಇದೆ. ಸಾಮಾನ್ಯವಾಗಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಸುಮಾರು 10,000 ಪಾಕಿಸ್ತಾನಿ ರೂ. ಇದೆ.