Advertisement

ಗ್ಯಾರಿ ಸ್ಟೀಡ್‌ ಕಿವೀಸ್‌ ಕ್ರಿಕೆಟ್‌ ಕೋಚ್‌

06:00 AM Aug 16, 2018 | Team Udayavani |

ವೆಲ್ಲಿಂಗ್ಟನ್‌: ಮಾಜಿ ಕ್ರಿಕೆಟಿಗ ಗ್ಯಾರಿ ಸ್ಟೀಡ್‌ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಅವರು 2 ವರ್ಷಗಳ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. 1999ರಲ್ಲಿ ನ್ಯೂಜಿಲ್ಯಾಂಡ್‌ ಪರ 5 ಟೆಸ್ಟ್‌ ಪಂದ್ಯಗಳನ್ನು ಆಡಿದ್ದ ಗ್ಯಾರಿ ಸ್ಟೀಡ್‌, ಕಿವೀಸ್‌ ವನಿತಾ ಕ್ರಿಕೆಟ್‌ ತಂಡದ ಹಾಗೂ ಕ್ಯಾಂಟರ್‌ಬರಿ ತಂಡದ ತರಬೇತುದಾರರಾಗಿ ದುಡಿದ ಅನುಭವ ಹೊಂದಿದ್ದಾರೆ. ಇವರ ಕೋಚಿಂಗ್‌ ಅವಧಿಯಲ್ಲಿ ನ್ಯೂಜಿಲ್ಯಾಂಡ್‌ ವನಿತಾ ತಂಡ 2009ರ ವಿಶ್ವಕಪ್‌ ಫೈನಲ್‌ ತಲುಪಿತ್ತು. ಕ್ಯಾಂಟರ್‌ಬರಿ ತಂಡ 3 ಸಲ “ಪ್ಲಂಕೆಟ್‌ ಶೀಲ್ಡ್‌’ ಪ್ರಶಸ್ತಿ ಜಯಿಸಿತ್ತು. 101 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಸ್ಟೀಡ್‌, 32.15ರ ಸರಾಸರಿಯಲ್ಲಿ 4,984 ರನ್‌ ಗಳಿಸಿದ್ದಾರೆ. ಕಳೆದ ಜೂನ್‌ನಲ್ಲಿ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ ಮೈಕ್‌ ಹೆಸ್ಸನ್‌ ಅವರ ಉತ್ತರಾಧಿಕಾರಿಯಾಗಿ ಸ್ಟೀಡ್‌ ಅವರನ್ನು ನೇಮಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next