Advertisement

ಗರುಡಾ ಮಾಲ್‌ನಲ್ಲಿ ವೈನ್‌ ಉತ್ಸವಕ್ಕೆ ಚಾಲನೆ

11:54 AM Apr 15, 2017 | Team Udayavani |

ಬೆಂಗಳೂರು: ದ್ರಾಕ್ಷಿ ಬೆಳೆಗಾರರ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕ ದ್ರಾಕ್ಷಾರಸ ಮಂಡಳಿ ಸಹಯೋಗದಲ್ಲಿ ನಗರದ ಗರುಡಾ ಮಾಲ್‌ನಲ್ಲಿ ಮೂರು ದಿನಗಳ ವೈನ್‌ ಉತ್ಸವಕ್ಕೆ ಚಲನಚಿತ್ರ ನಟಿ ಮಯೂರಿ ಶುಕ್ರವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವೈನ್‌ ಮಿತವಾದ ಸೇವನೆ ಆರೋಗ್ಯದಾಯಕವಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು. 

Advertisement

ವೈನ್‌ ಉತ್ಸವ ಏ.14ರಿಂದ 16ರವರೆಗೆ ನಡೆಯಲಿದ್ದು, ದೇಶದ ಪ್ರಖ್ಯಾತ ವೈನ್‌ ತಜ್ಞರು ವಿವಿಧ ಬ್ರಾಂಡ್‌ಗಳ ವೈನ್‌ ಪ್ರದರ್ಶಿಸಲಿದ್ದಾರೆ. ವೈನ್‌ ಉತ್ಸವದಲ್ಲಿ ಆಸ್ಟ್ರೇಲಿಯ, ಜರ್ಮನ್‌ ಸೇರಿ ಕರ್ನಾಟಕದ 10 ವೈನರಿಗಳು ಪಾಲ್ಗೊಂಡಿದ್ದು, ಸುಮಾರು 20 ವೆರೈಟಿ ವೈನ್‌ ಮಾರಾಟಕ್ಕೆ ಇಡಲಾಗಿದೆ. ಗ್ರಾಹಕರಿಗೆ ಟೇಸ್ಟ್‌ ಮಾಡಲು ಅವಕಾಶವಿದ್ದು, ವೈನ್‌ ಬಾಟಲ್‌ಗ‌ಳಿಗೆ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ.  

ವೈನ್‌ ಪ್ರಿಯರು ವೈನ್‌ ರುಚಿಯೊಂದಿಗೆ  ಮನೋರಂಜನೆ ಸವಿಯಲು ಅವಕಾಶ ನೀಡಲಾಗಿದ್ದು, ಉತ್ಸವದ ಪ್ರತಿದಿನ ಸಂಜೆ ಸಂಗೀತ ಸೇರಿ ವಿವಿಧ ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಹಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವೈನ್‌ಗೆ ಹೊಂದಿಕೆಯಾಗುವ ತಿನಿಸುಗಳು ಕೂಡ ಲಭ್ಯವಿದೆ.
 

Advertisement

Udayavani is now on Telegram. Click here to join our channel and stay updated with the latest news.

Next