Advertisement

ಗಾರ್ಮೆಂಟ್‌ ನೌಕರರು ಇಲ್ಲಿ ನಿರ್ಣಾಯಕ

12:22 PM Mar 26, 2019 | Lakshmi GovindaRaju |

ಕ್ಷೇತ್ರದ ವಸ್ತುಸ್ಥಿತಿ: ಬೆಂಗಳೂರಿನ “ಸಿಲಿಕಾನ್‌ ವ್ಯಾಲಿ’ ಎಂಬ ಹಿರಿಮೆಗೆ ಪಾತ್ರವಾಗಿರುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಐಟಿ ಕಂಪನಿಗಳನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗೆ ಗಾರ್ಮೆಂಟ್ಸ್‌ ಮತ್ತು ಸಣ್ಣ ಕೈಗಾರಿಕೆಗಳನ್ನು ಹೊಂದಿದೆ.

Advertisement

ವಿಧಾನಸಭಾ ಚುನಾವಣೆ ಇರಲಿ, ಲೋಕಸಭಾ ಚುನಾವಣೆಯೇ ಆಗಲಿ, ಬಿಜೆಪಿಗೆ ಸಂಪೂರ್ಣ ಬೆಂಬಲ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರುವ ಈ ಕ್ಷೇತ್ರದಲ್ಲಿ 2014ರಲ್ಲಿ ಚಲಾವಣೆಯಾದ 4,11,193 ಮತಗಳ ಪೈಕಿ, ಬಿಜೆಪಿ ಅಭ್ಯರ್ಥಿಯಾಗಿದ್ದ ನಂತಕುಮಾರ್‌ 1,16,973 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ನಂದನ್‌ ನಿಲೇಕಣಿ 61,210, ಆಮ್‌ ಆದ್ಮಿ ಪಕ್ಷ 4,810 ಮತ್ತು ಜೆಡಿಎಸ್‌ ಅಭ್ಯರ್ಥಿ 3,431 ಮತ ಪಡೆದಿದ್ದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಕಣಕ್ಕಿಳಿದಿದ್ದಾರೆ. ಆದರೆ, ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ.
ಪಾಲಿಕೆಯಲ್ಲೂ ಬಿಜೆಪಿ ಬಿಗಿಹಿಡಿತವಿದ್ದು, 8 ವಾರ್ಡ್‌ಗಳ ಪೈಕಿ ಏಳು ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದು, ಕಾಂಗ್ರೆಸ್‌ ಒಂದು ವಾರ್ಡ್‌ ಪಡೆದಿದೆ. ಜೆಡಿಎಸ್‌ಗೆ ಇಲ್ಲಿ ನೆಲೆಯಿಲ್ಲ. ಸುಮಾರು 60 ಸಾವಿರ ಗಾರ್ಮೆಂಟ್‌ ಕಾರ್ಮಿಕರು ಇಲ್ಲಿದ್ದು, ರೆಡ್ಡಿ, ಒಕ್ಕಲಿಗ,ಬ್ರಾಹ್ಮಣ,ಲಿಂಗಾಯತರ ಮತಗಳು ನಿರ್ಣಾಯಕವಾಗಿವೆ.

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣಕ್ಕೆ ಅನುದಾನ
-ದೇವರ ಚಿಕ್ಕನಹಳ್ಳಿ ಸ್ಮಶಾನದ ಸ್ಥಳ ಅಭಿವೃದ್ಧಿಗೆ ಅನುದಾನ

ನಿರೀಕ್ಷೆಗಳು
-ವಿಕ್ಟೋರಿಯಾ ಮಾದರಿಯ ಆಸ್ಪತ್ರೆ
-ರಸ್ತೆಗಳ ಅಭಿವೃದ್ಧಿಗೆ ಅನುದಾನ

Advertisement

-ವಾರ್ಡ್‌ಗಳು- 8
-ಬಿಜೆಪಿ -7
-ಕಾಂಗ್ರೆಸ್‌ – 1
-ಜೆಡಿಎಸ್‌ -0

-ಜನಸಂಖ್ಯೆ -6,25,678
-ಮತದಾರರ ಸಂಖ್ಯೆ -4,11,193
-ಪುರುಷರು -2,22,226
-ಮಹಿಳೆಯರು-1,88,967

2014ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು-1,90,073 (52.17%)
-ಬಿಜೆಪಿ ಪಡೆದ ಮತಗಳು -1,16,973 (61.5%)
-ಕಾಂಗ್ರೆಸ್‌ ಪಡೆದ ಮತಗಳು – 61,210 (32.2%)
-ಜೆಡಿಎಸ್‌ ಪಡೆದ ಮತಗಳು – 3,431 (1.8%)

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಸತೀಶ್‌ ರೆಡ್ಡಿ ಬಿಜೆಪಿ ಶಾಸಕ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು-8
-ಕಾಂಗ್ರೆಸ್‌ ಸದಸ್ಯರು-0
-ಜೆಡಿಎಸ್‌-0

ಮಾಹಿತಿ: ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next