ಮಳೆಗಾಲದ ಸಂಜೆಯಲ್ಲಿ ಬಿಸಿಬಿಸಿಯಾದ, ನಾಲಿಗೆಗೆ ರುಚಿ ಅನ್ನಿಸುವ ಏನಾದರೂ ತಿಂಡಿ ಬೇಕು ಅನ್ನಿಸುವುದುಂಟು. ಅಂಥ ತಿನಿಸುಗಳಲ್ಲಿ ವಡೆಗೆ ಪ್ರಮುಖ ಸ್ಥಾನ. ಬಾಯಿ ಚಪಲ ತೀರಿಸುವ ಕೆಲ ಬಗೆಯ ವಡೆ ತಯಾರಿಸುವ ರೆಸಿಪಿ ಇಲ್ಲಿದೆ.
ರವೆ ವಡೆ
ಬೇಕಾಗುವ ಸಾಮಗ್ರಿ: ರವೆ- 1 ಕಪ…, ಹುಳಿ ಮೊಸರು ಸ್ವಲ್ಪ, ಉಪ್ಪು, ಹಸಿಮೆಣಸಿನಕಾಯಿ, ಸಕ್ಕರೆ ಚಿಟಿಕೆ, ಶುಂಠಿ, ಸೋಡಾ, ಸ್ವಲ್ಪ ಸಿಹಿ ಮೊಸರು, ಕರಿಯಲು ಎಣ್ಣೆ.
ಮಾಡುವ ವಿಧಾನ: ರವೆಯ ಜೊತೆಗೆ ಚಿಟಿಕೆ ಸೋಡಾ ಬೆರೆಸಿ, ಹುಳಿ ಮೊಸರಿನಲ್ಲಿ ಅರ್ಧ ಗಂಟೆ ನೆನೆ ಹಾಕಿ. ಸಿಹಿ ಮೊಸರು ತೆಗೆದುಕೊಂಡು ಅದರಲ್ಲಿ ಉಪ್ಪು, ಸಕ್ಕರೆ, ಶುಂಠಿ ಪೇಸ್ಟ್, ಹಸಿಮೆಣ ಸಿನಕಾಯಿ ಚೂರು ಹಾಕಿ. ನಂತರ, ತುಪ್ಪದಲ್ಲಿ ಜೀರಿಗೆ ಮತ್ತು ಒಣಮೆಣಸಿನಕಾಯನ್ನು ಹುರಿದು ಮೊಸರಿಗೆ ಹಾಕಿ ಕಲಸಿಡಿ. ನೆನೆಸಿದ ರವೆಗೆ ಸ್ವಲ್ಪ ಉಪ್ಪು ಬೆರೆಸಿ, ವಡೆ ತಟ್ಟಿ, ಕಾದ ಎಣ್ಣೆಯಲ್ಲಿ ಕರಿ ಯಿರಿ. ವಡೆ ಹೊಂಬ ಣ್ಣಕ್ಕೆ ತಿರುಗಿದಾಗ ಅದನ್ನು ಎಣ್ಣೆಯಿಂದ ತೆಗೆದು, ಮೊಸರಿನೊಳಗೆ ಅರ್ಧ ಗಂಟೆ ನೆನೆಸಿ, ಸವಿಯಿರಿ.
ಮಡಕೆ ಕಾಳು
ಬೇಕಾಗುವ ಸಾಮಗ್ರಿ: ಮಡಕೆ ಕಾಳು- 1 ಕಪ್, ಖಾರದ ಪುಡಿ, ಉಪ್ಪು, ಇಂಗು, ಅರಿಶಿನ, ಜೀರಿಗೆ, ಕೊತ್ತಂಬರಿ ಸೊಪ್ಪು, ಎಣ್ಣೆ, ಕಡಲೆ ಹಿಟ್ಟು.
ಮಾಡುವ ವಿಧಾನ: ಮಡಕೆ ಕಾಳನ್ನು ನೆನೆ ಹಾಕಿ, ಮೊಳಕೆ ಬಂದ ಮೇಲೆ ಚೆನ್ನಾಗಿ ರುಬ್ಬಿ. ಅದಕ್ಕೆ ಜಿಗುಟು ಬರುವಷ್ಟು ಕಡಲೆ ಹಿಟ್ಟು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಅರಿಶಿನ, ಕೊತ್ತಂಬರಿ ಸೊಪ್ಪು, ಕಾದ ಎಣ್ಣೆ ಹಾಕಿ ಚೆನ್ನಾಗಿ ಕಲಸಿ. ನಂತರ ವಡೆ ತಟ್ಟಿ ಎಣ್ಣೆಯಲ್ಲಿ ಕರಿಯಿರಿ.
ಕೊತ್ತಂಬರಿ ಸೊಪ್ಪು
ಬೇಕಾಗುವ ಸಾಮಗ್ರಿ: ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು, ಬೆಲ್ಲ, ಅಕ್ಕಿಹಿಟ್ಟು, ಕಡಲೆ ಹಿಟ್ಟು, ಕರಿಯಲು ಎಣ್ಣೆ.
ಮಾಡುವ ವಿಧಾನ: ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಂಡು, ಮೆಣಸಿನಕಾಯನ್ನು ನುಣ್ಣಗೆ ಅರೆದುಕೊಳ್ಳಿ. ಅವೆರಡರ ಜೊತೆಗೆ ಸ್ವಲ್ಪ ಕಡಲೆಹಿಟ್ಟು, ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪನ್ನು ಸೇರಿಸಿ, ವಡೆ ತಟ್ಟಿ ಎಣ್ಣೆಯಲ್ಲಿ ಕರಿಯಿರಿ..