Advertisement

ಸಿನ್ಸಿನಾಟಿ ಟೆನಿಸ್‌ ಚಾಂಪಿಯನ್‌ ಮುಗುರುಜಾ ಔಟ್‌

06:00 AM Aug 17, 2018 | Team Udayavani |

ಸಿನ್ಸಿನಾಟಿ: ಹಾಲಿ ಚಾಂಪಿಯನ್‌ ಗಾರ್ಬಿನ್‌ ಮುಗುರುಜಾ ಸಿನ್ಸಿನಾಟಿ ಟೆನಿಸ್‌ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಬುಧವಾರ ರಾತ್ರಿ ಮಳೆ ನಡುವೆ ಸಾಗಿದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಉಕ್ರೇನಿನ ಲೆಸಿಯಾ ಸುರೆಂಕೊ 2-6, 6-4, 6-4 ಅಂತರದಿಂದ ಮುಗುರುಜಾ ಆಟವನ್ನು ಕೊನೆಗಾಣಿಸಿದರು.

Advertisement

ಸುರೆಂಕೊ ಅವರಿನ್ನು ರಶ್ಯದ ಎಕತೆರಿನಾ ಮಕರೋವಾ ವಿರುದ್ಧ ಆಡಲಿದ್ದಾರೆ. ಮಕರೋವಾ ಫ್ರಾನ್ಸ್‌ನ ಅಲಿಜೆ ಕಾರ್ನೆಟ್‌ ಅವರನ್ನು 6-2, 6-0 ಅಂತರದಿಂದ ಹಿಮ್ಮೆಟ್ಟಿಸಿದರು. ವಿಶ್ವದ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್‌ ಪಂದ್ಯಕ್ಕೂ ಮಳೆಯಿಂದ ಅಡಚಣೆಯಾಗಿದೆ. ಪಂದ್ಯ ಸ್ಥಗಿತಗೊಂಡಾಗ ಅವರು ಆಸ್ಟ್ರೇಲಿಯದ ಅಜ್ಲಾ ಟೊಮ್ಲಾನೊವಿಕ್‌ ವಿರುದ್ಧ 4-6, 6-3, 4-3ರ ಮುನ್ನಡೆಯಲಿದ್ದರು. ಆ್ಯಂಜೆಲಿಕ್‌ ಕೆರ್ಬರ್‌ 3 ಸೆಟ್‌ಗಳ ಹೋರಾಟದ ಬಳಿಕ ಅನಾಸ್ತಿಸಿಯಾ ಪಾವುಚೆಂಕೋವಾ ವಿರುದ್ಧ 4-6, 7-5, 6-4 ಅಂತರದಿಂದ ಗೆದ್ದು ಬಂದರು.

ಯುಎಸ್‌ ಓಪನ್‌ ಚಾಂಪಿಯನ್‌ ಸ್ಲೋನ್‌ ಸ್ಟೀಫ‌ನ್ಸ್‌ ಜರ್ಮನಿಯ ಟಜಾನಾ ಮರಿಯಾ ವಿರುದ್ಧ 6-3, 6-2 ಅಂತರದಿಂದ ಸೋಲಿಸಿದರು. ಇವರ ಮುಂದಿನ ಎದುರಾಳಿ ಬೆಲ್ಜಿಯಂನ ಎಲಿಸೆ ಮಾರ್ಟೆನ್ಸ್‌. ಅವರು 3-6, 6-2, 7-6 (1)ರಿಂದ ಸ್ವೀಡನ್ನಿನ ರಬೆಕಾ ಪೀಟರ್‌ಸನ್‌ಗೆ ಸೋಲುಣಿಸಿದರು.

ಬೆಲರೂಸ್‌ನ ಅರಿನಾ ಸಬಲೆಂಕೊ ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು 2-6, 6-3, 7-5ರಿಂದ; ಆಸ್ಟ್ರೇಲಿಯದ ಆ್ಯಶೆ ಬಾರ್ಟಿ 7-5, 6-3ರಿಂದ ಎಸ್ತೋನಿಯಾದ ಕಯಾ ಕನೆಪಿ ಅವರನ್ನು ಸೋಲಿಸಿ 3ನೇ ಸುತ್ತಿಗೆ ಮುನ್ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next