Advertisement
ಈ ನಿಟ್ಟಿನಲ್ಲಿ “ಸಮಗ್ರ ಟೆಂಡರ್’ಗೆ ಚಿಂತನೆ ನಡೆಸಿದೆ. ನಗರದಲ್ಲಿ ನಿತ್ಯ ಬೆಳಗ್ಗೆ 10 ಗಂಟೆ ಹೊತ್ತಿಗೆ ಬಹುತೇಕ ಪ್ರದೇಶಗಳಲ್ಲಿ ಕಸ ವಿಲೇವಾರಿ ಆಗಿರುತ್ತದೆ. ಆದರೂ ಮಧ್ಯಾಹ್ನ 2 ಗಂಟೆ ವೇಳೆಗೆ ಅಲ್ಲಲ್ಲಿ ಮತ್ತೆ ಕಸದ ಗುಡ್ಡೆಗಳು ಉತ್ಪತ್ತಿಯಾಗಿರುತ್ತವೆ. ಈ ಮಧ್ಯೆ ಕಟ್ಟಡ ನಿರ್ಮಾಣ, ರಸ್ತೆಯಲ್ಲಿ ಸತ್ತುಬಿದ್ದ ಪ್ರಾಣಿಗಳು, ಇ-ತ್ಯಾಜ್ಯ, ಮರದ ರೆಂಬೆಗಳು, ಬೆಸ್ಕಾಂ ಮತ್ತು ಜಲಮಂಡಳಿ ರಸ್ತೆ ಅಗೆತ ಸೇರಿದಂತೆ ಹತ್ತಾರು ಪ್ರಕಾರದ ತ್ಯಾಜ್ಯ ಉತ್ಪತ್ತಿ ಆಗುತ್ತದೆ.
Related Articles
Advertisement
ನಗರದಲ್ಲಿ ಎಷ್ಟು ಮನೆಗಳಿವೆ? ಎಷ್ಟು ಕಸದ ವಾಹನಗಳಿವೆ? ಲಭ್ಯವಿರುವ ವಾಹನಗಳು ಮತ್ತು ಪ್ರಸ್ತುತ ವೆಚ್ಚದಲ್ಲಿ ಹಲವು ಬಾರಿ ಕಸ ವಿಲೇವಾರಿ ಸಾಧ್ಯವೇ? ಹಾಗೊಂದು ವೇಳೆ ಹೆಚ್ಚಳವಾಗುತ್ತಿದ್ದರೆ, ಅದಕ್ಕೆ ತಗಲುವ ವೆಚ್ಚ ಎಷ್ಟು? ಇಡೀ 198 ವಾಡ್ ìಗಳಿಗೆ ಒಂದು ಟೆಂಡರ್ ಕರೆಯುವುದಾ ಅಥವಾ ವಾರ್ಡ್‌ಗೊಂದು ಸಮಗ್ರ ಕಸ ವಿಲೇವಾರಿ ಟೆಂಡರ್ ಕರೆಯುವುದು ಸೂಕ್ತವೇ? ಈ ಎಲ್ಲ ಗೊಂದಲಗಳ ನಿವಾರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತಾವನೆ ತಯಾರಿಸಿ, ಸಾರ್ವಜನಿಕರು ಮತ್ತು ತಜ್ಞರ ಸಲಹೆಗಳನ್ನು ಪಡೆಯಲಾಗುವುದು. ನಂತರ ಸರ್ಕಾರಕ್ಕೆ ಕಳುಹಿಸ ಲಾಗುವುದು. ಅಲ್ಲಿಂದ ಸೂಕ್ತ ತೀರ್ಮಾನ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು
ಇನ್ನೂ ಚಿಂತನೆ ಹಂತ; ವಿಶೇಷ ಆಯುಕ್ತರು
“ಸಮಗ್ರ ಟೆಂಡರ್ ಇನ್ನೂ ಚಿಂತನೆ ಹಂತದಲ್ಲಿದೆ. ಇದರ ಉದ್ದೇಶ ದಿನದ 24 ಗಂಟೆ ನಗರವನ್ನು ಸ್ವತ್ಛವಾಗಿಡುವುದಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಕೆಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇಲ್ಲ. ಉದಾಹರಣೆಗೆ ರಸ್ತೆಯಲ್ಲಿ ಒಂದು ನಾಯಿ ಸಾವನ್ನಪ್ಪಿದೆ ಅಂದುಕೊಳ್ಳೋಣ. ಬಿಬಿಎಂಪಿಗೆ ಕರೆ ಮಾಡಿದ ತಕ್ಷಣ, ಅವರಿಂದ ಸಂಬಂಧಪಟ್ಟವರಿಗೆ ಫೋನ್ ಹೋಗುತ್ತದೆ.
ಆತ ಅದರ ಫೋಟೋ ಮತ್ತು ತೆರವುಗೊಳಿಸಿದ ಫೋಟೋ ತೆಗೆದು, ಅಪ್‌ಲೋಡ್ ಮಾಡುತ್ತಾನೆ. ಆತನಿಗೆ ಹಣ ಕೂಡ ಪಾವತಿ ಆಗುತ್ತದೆ. ಇದೇ ರೀತಿ, ನಿರ್ಮಾಣ ಮತ್ತಿತರ ತ್ಯಾಜ್ಯವೂ ಇರುತ್ತದೆ. ಅದಕ್ಕೆ ಬೇರೆ ಬೇರೆ ವಿಂಗ್‌ಗಳೂ ಇವೆ. ಇದೆಲ್ಲವನ್ನೂ ಒಂದೇ ಟೆಂಡರ್‌ನಲ್ಲಿ ತಂದರೆ ಉತ್ತಮ ಎಂಬ ಯೋಚನೆ ಇದೆ’ ಎಂದು ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಾ.ಕೆ. ಹರೀಶ್ ಕುಮಾರ್ ತಿಳಿಸಿದರು.
ತಿಂಗಳಿಗೆ 40 ಕೋಟಿ ಖರ್ಚು
ನಗರದಲ್ಲಿ ಪ್ರಸ್ತುತ ನಿತ್ಯ 4,500 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರ ವಿಲೇವಾರಿಗೆ ಪ್ರತಿ ತಿಂಗಳು 40 ಕೋಟಿ ರೂ. ಖರ್ಚು ಆಗುತ್ತಿದೆ! ಉತ್ಪತ್ತಿಯಾಗುವ ಕಸದಲ್ಲಿ ಶೇ. 60ರಷ್ಟು ಹಸಿ ಮತ್ತು 40ರಷ್ಟು ಒಣತ್ಯಾಜ್ಯ ಆಗಿದೆ. ಇದರಲ್ಲಿ ಶೇ. 5ರಷ್ಟು ಸ್ಯಾನಿಟರಿ ತ್ಯಾಜ್ಯವೂ ಇರುತ್ತದೆ. ಗುತ್ತಿಗೆ ಪಡೆದ ಏಜೆನ್ಸಿಗೆ ವಿಲೇವಾರಿಗೆ 40 ಕೋಟಿ ರೂ. ಪಾವತಿಸಲಾಗುತ್ತಿದೆ. ಇದರೊಂದಿಗೆ 122 ಒಣತ್ಯಾಜ್ಯ ಸಂಗ್ರಹ ಘಟಕಗಳಿದ್ದು, ಹಸಿರುದಳ, ಸಮರ್ಥನಂ, ಕೆಲವು ಸ್ವಸಹಾಯ ಸಂಘಗಳು ಸೇವೆ ರೂಪದಲ್ಲಿ ಇದನ್ನು ನಿರ್ವಹಣೆ ಮಾಡುತ್ತಿವೆ
800 ಬ್ಲಾಕ್ ಸ್ಪಾಟ್ ಗಳು
ನಗರಾದ್ಯಂತ ಸುಮಾರು 800 ಬ್ಲಾಕ್ ಸ್ಪಾಟ್‌ಗಳಿವೆ ಎಂದು ಗುರುತಿಸಲಾಗಿದೆ. 2015-16ರಲ್ಲಿ 2,500 ಬ್ಲಾಕ್ ಸ್ಪಾಟ್‌ಗಳಿದ್ದವು. ಹಂತ-ಹಂತವಾಗಿ ಅವುಗಳನ್ನು ಕಡಿತಗೊಳಿಸಿದ್ದು, ಪ್ರಸ್ತುತ 800ಕ್ಕೆ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- – ವಿಜಯಕುಮಾರ್ ಚಂದರಗಿ