Advertisement
ಎಲ್ಲೆಲ್ಲಿ ತ್ಯಾಜ್ಯ ರಾಶಿ?ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು, ಉಚ್ಚಿಲ ಮಹಾಲಕ್ಷ್ಮೀ ಸಭಾಭವನದ ಎದುರು, ಉಚ್ಚಿಲ ಮಾರುಕಟ್ಟೆ ಪರಿಸರ, ಮೂಳೂರು ಮಸೀದಿ ಮುಂಭಾಗ, ಪಾಂಗಾಳ, ಕಟಪಾಡಿ, ಉದ್ಯಾವರದಲ್ಲಿ ಕಸ – ತ್ಯಾಜ್ಯ ರಾಶಿಯಾಗುತ್ತಿದೆ. ಅದರೊಂದಿಗೆ ಕಾಪು – ಶಿರ್ವ ರಸ್ತೆಯಲ್ಲಿ ಮಲ್ಲಾರು, ಮಜೂರು, ಚಂದ್ರನಗರದಲ್ಲಿ ಹಾಗೂ ಕಟಪಾಡಿ – ಶಿರ್ವ ರಸ್ತೆಯಲ್ಲಿ ಸರಕಾರಿಗುಡ್ಡೆ, ಚೊಕ್ಕಾಡಿ, ಶಂಕರಪುರ, ಬಂಟಕಲ್ಲು ಸಹಿತ ಹಲವೆಡೆ ತ್ಯಾಜ್ಯದ ರಾಶಿ ಎದ್ದು ಕಾಣುತ್ತಿದೆ.
ಉಚ್ಚಿಲ, ಕಟಪಾಡಿ, ಉದ್ಯಾವರ, ಮಜೂರು ಮೊದಲಾದ ಪ್ರದೇಶಗಳಲ್ಲಿ ಇಲ್ಲಿ ತ್ಯಾಜ್ಯ ಎಸೆಯಬಾರದು ಎಂದು ನಾಮಫಲಕ ಅಳವಡಿಸಲಾಗಿದೆ. ಆದರೆ ಈ ಬೋರ್ಡ್ ಅಡಿಯಲ್ಲೇ ತ್ಯಾಜ್ಯದ ರಾಶಿ ಇದೆ. ಕೆಲವೆಡೆಗಳಲ್ಲಿ ಜನರು ಹಗಲಿನಲ್ಲೇ ವಾಹನದಲ್ಲಿ ನಿಂತು ರಸ್ತೆಗೆ ಕಸ ಎಸೆದು ಹೋದರೆ, ಮತ್ತೆ ಕೆಲವು ಕಡೆಗಳಲ್ಲಿ ರಾತ್ರಿ ವೇಳೆ ಕದ್ದುಮುಚ್ಚಿ ಬಂದು ರಸ್ತೆ ಬದಿಯಲ್ಲಿ ಕಸ ತಂದು ಎಸೆದು ಹೋಗುತ್ತಿದ್ದಾರೆ. ಒಂದೆರಡು ದಿನ ಕಸ ಬಿದ್ದ ಪ್ರದೇಶ ಶುಚಿಯಾಗದೇ ಇದ್ದಲ್ಲಿ ಅಲ್ಲಿ ಬಳಿಕ ಕಸದ ಗುಡ್ಡೆಯೇ ನಿರ್ಮಾಣವಾಗುತ್ತದೆ. ನಾಗರಿಕರು ಕೈಜೋಡಿಸಿ
ಕಸ – ತ್ಯಾಜ್ಯ ವಿಲೇವಾರಿ ಸ್ಥಳೀಯಾಡಳಿತ ಸಂಸ್ಥೆಗಳ ಹೊಣೆಯಾದರೂ ಈ ಬಗ್ಗೆ ಜನರು ಕೂಡಾ ಜಾಗೃತರಾಗುವುದು ಅತ್ಯಗತ್ಯವಾಗಿದೆ. ನಾಗರಿಕರು ಕೈ ಜೋಡಿಸದೇ ಇದ್ದರೆ ಈ ಸಮಸ್ಯೆ ಪರಿಹಾರ ಅಸಾಧ್ಯ.
– ರಾಯಪ್ಪ, ಮುಖ್ಯಾಧಿಕಾರಿ, ಕಾಪು ಪುರಸಭೆ