Advertisement

ಹೆದ್ದಾರಿ ಬದಿಯಲ್ಲಿಯೇ ಕಸ ವಿಲೇವಾರಿ

09:04 PM Jun 26, 2019 | Lakshmi GovindaRaj |

ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ಶ್ರೀರಾಮದೇವರ ಗುಡ್ಡ ಸಮೀಪ ಪುರಸಭೆಯ ಕಸ ವಿಲೇವಾರಿ ಘಟಕಕ್ಕೆ ಸುರಿಯಬೇಕಾದ ಕಸವನ್ನು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ವಿಲೇವಾರಿ ಮಾಡುತ್ತಿದ್ದಾರೆ. ಈ ಕಸ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

Advertisement

ಪಟ್ಟಣದಿಂದ ಕೇರಳಕ್ಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರ ಬದಿಯಲ್ಲಿರುವ ಶ್ರೀರಾಮದೇವರ ಗುಡ್ಡದ ಪಕ್ಕದಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕವಿದೆ. ಪಟ್ಟಣದ ವಿವಿಧ ಬಡಾವಣೆಯಿಂದ ಸಂಗ್ರಹಿಸಿದ ಕಸವನ್ನು ಜೋಪಾನವಾಗಿ ಘಟಕದಲ್ಲಿ ಸುರಿಯಬೇಕು. ಆದರೆ, ಹೆದ್ದಾರಿಯ ಪಕ್ಕದಲ್ಲೇ ಸುರಿಯುತ್ತಿರುವುದರಿಂದ ರಸ್ತೆಯ ಪಕ್ಕದಲ್ಲಿ ಸಂಚಾರ ಮಾಡುವ ಸಾರ್ವಜನಿಕರಿಗೆ ಮತ್ತು ಸುತ್ತಮುತ್ತಲಿನ ಜನರಿಗೆ ದುರ್ವಾಸನೆ ಬೀರುತ್ತಿದೆ.

ನಿತ್ಯ ರಸ್ತೆ ಬದಿಯಲ್ಲಿಯೇ ವಿಲೇವಾರಿ: ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ಕಸದಿಂದ ತುಂಬಿ ತುಳುಕುತ್ತಿದೆ. ಹದ್ದು, ಕಾಗೆಗಳು, ನಾಯಿಗಳ ಬೀಡಾಗಿದೆ. ಇಲ್ಲಿನ ಕಸವನ್ನು ನಾಯಿಗಳು ರಸ್ತೆಗೆ ಎಳೆದಾಡುತ್ತಿದ್ದು, ಸುತ್ತಲೂ ಗಬ್ಬುನಾರುತ್ತಿದೆ. ಈ ಗಬ್ಬುವಾಸನೆಯಿಂದ ಕಸವನ್ನು ವಾಹನಗಳಲ್ಲಿ ತಂದ ಪುರಸಭೆ ವಾಹನ ಚಾಲಕರು ಸಹ ಒಳಗೆ ಹೋಗಲಾಗದ ಪ್ರತಿದಿನವೂ ಪಟ್ಟಣದಲ್ಲಿ ಸಂಗ್ರಹವಾದ ಕಸವನ್ನು ರಸ್ತೆಯ ಬದಿಯಲ್ಲಿಯೇ ಸುರಿಯುತ್ತಿದ್ದಾರೆ.

ಸಾಂಕ್ರಾಮಿಕ ರೋಗದ ಭೀತಿ: ಪಟ್ಟಣದ ಕೋಳಿ ಹಾಗೂ ಮಾಂಸದ ಅಂಗಡಿಗಳು, ಕ್ಲಿನಿಕಲ್‌ ತ್ಯಾಜ್ಯಗಳನ್ನೂ ಸಹ ರಸ್ತೆಯ ಬದಿಯಲ್ಲಿಯೇ ಸುರಿಯುತ್ತಿರುವುದರಿಂದ ಅನೈರ್ಮಲ್ಯವುಂಟಾಗಿದೆ. ಪರಿಣಾಮ ರಸ್ತೆಯಲ್ಲಿ ಸಂಚಾರ ಮಾಡುವ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ಪ್ರಯಾಣಿಕರು ದುರ್ವಾಸನೆ ಸಹಿಸಲಾಗದಂತಾಗಿದೆ. ಇತ್ತೀಚಗೆ ಮಳೆ ಬೀಳುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯುಂಟಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಕಸ ವಿಲೇವಾರಿ ಘಟಕದ ಸಮೀಪದಲ್ಲಿಯೇ ಶ್ರೀರಾಮದೇವರ ಗುಡ್ಡ, ಗವಿಸಿದ್ದೇಶ್ವರ ದೇವಸಾªನ, ಶ್ರೀರಾಘವೇಂದ್ರ ಸ್ವಾಮಿ ಬೃಂದಾವನ ಮಠ, ಅಗ್ನಿಶಾಮಕ ದಳದ ಕಚೇರಿ ಹಾಗೂ ಸಿಬ್ಬಂದಿ ವಸತಿ ಗೃಹಗಳಿವೆ. ದೇವಸ್ಥಾನಗಳಿಗೆ ತೆರಳುವ ಭಕ್ತರು ಈ ದುರ್ವಾಸನೆಯನ್ನು ಸಹಿಸಿಕೊಂಡು ಹೋಗಬೇಕಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ.
-ಜಿ.ಎಸ್‌.ಗಣೇಶ್‌ಪ್ರಸಾದ್‌, ಗುಂಡ್ಲುಪೇಟೆ ನಿವಾಸಿ

Advertisement

ಮಡಹಳ್ಳಿ ಸಮೀಪದಲ್ಲಿ ನೂತನ ಘಟಕವನ್ನು ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಆದರೆ, ಸ್ಥಳೀಯರ ವಿರೋಧದಿಂದ ಪರ್ಯಾಯ ಸ್ಥಳ ಗುರುತಿಸಲಾಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುತ್ತೇವೆ.
-ಎ.ರಮೇಶ್‌, ಮುಖ್ಯಾಧಿಕಾರಿ, ಪುರಸಭೆ

* ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next