Advertisement

ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಗೆ ಗಾರ್ಬಾ!

09:08 PM Aug 28, 2022 | Team Udayavani |

ನವದೆಹಲಿ: ಗುಜರಾತ್‌ನ ಅತ್ಯಂತ ಪ್ರಸಿದ್ಧ ನೃತ್ಯ ಶೈಲಿಯಾಗಿರುವ ಗಾರ್ಬಾವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲು ನಾಮ ನಿರ್ದೇಶನ ಮಾಡಲಾಗಿದೆ.

Advertisement

ಮುಂದಿನ ವರ್ಷ ನಡೆಯಲಿರುವ ಸೇರ್ಪಡೆಯಲ್ಲಿ ಗಾರ್ಬಾ ಪಟ್ಟಿಗೆ ಸೇರುವ ಸಾಧ್ಯತೆಯಿದೆ. ಈ ಬಗ್ಗೆ ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಕಾರ್ಯದರ್ಶಿ ಟಿಮ್‌ ಕರ್ಟಿಸ್‌ ಮಾಹಿತಿ ಕೊಟ್ಟಿದ್ದಾರೆ.

ನಾಮ ನಿರ್ದೇಶನವನ್ನು 2023ರ ಮಧ್ಯದಲ್ಲಿ ಪರಿಶೀಲನೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಕೋಲ್ಕತದ ದುರ್ಗಾ ಪೂಜೆಯು ಈ ಪಟ್ಟಿಗೆ ಸೇರ್ಪಡೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next