Advertisement

ಗಂಜೀಫಾ ಕಲೆ ಅಜರಾಮರ: ಡಾ|ಹೆಗ್ಗಡೆ

01:00 AM Mar 12, 2019 | Harsha Rao |

ಬೆಳ್ತಂಗಡಿ: ಬಣ್ಣಗಳು ಇಲ್ಲದ ಕಾಲದಲ್ಲಿ ಆಕೃತಿಗಳನ್ನು ಪೋಣಿಸುವ ಮಾಧ್ಯಮವಾಗಿ ಕಾವಿ ಚಿತ್ರಕಲೆ ಪ್ರಸಿದ್ಧಿ ಪಡೆದಿದ್ದು, ಅದರ ಉಳಿವಿಗೆ ಶ್ರಮಿಸಿದ ಗಂಜೀಫಾ ರಘುಪತಿ ಭಟ್ಟರ ಸೇವೆ ಅಜರಾಮರ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಬಣ್ಣಿಸಿದರು. ಧರ್ಮಸ್ಥಳ ಬೀಡಿನಲ್ಲಿ ಸೋಮವಾರ ಗಂಜೀಫಾ ರಘುಪತಿ ಭಟ್ಟರ ಕಾವಿ ಚಿತ್ರಕಲೆ ಮೂಲ ರಚನಾ ವಿಧಾನದ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ಪುರಾತನ ಕಾಲದಲ್ಲಿ ವಿಶೇಷವಾಗಿ ಮಣ್ಣಿನಲ್ಲಿ ಕಾವಿ ಚಿತ್ರ ಕಲೆ ಮೂಡಿಸಲಾಗುತ್ತಿತ್ತು. ಉತ್ತರಕನ್ನಡದ ಕುಮಟಾದಿಂದ ಗೋವಾದವರೆಗೆ ಅಂದು ಪ್ರಸಿದ್ಧಿಗೆ ಬಂದಿದ್ದ ಕಲೆ ಕಾಲಕ್ರಮೇಣ ಪ್ರಾಶಸ್ತ್ಯ ಕ್ಷೀಣಿಸಿತ್ತು ಎಂದರು. ಕ್ಷೇತ್ರದ ವತಿಯಿಂದ ಗಂಜೀಫಾ ರಘುಪತಿ ಭಟ್ಟ ದಂಪತಿಯನ್ನು ಹೆಗ್ಗಡೆ ಸಮ್ಮಾನಿಸಿದರು. ರಮ್ಯಾ ರಘುಪತಿ ಭಟ್ಟ, ಸಾಹಿತಿ ಗುರುರಾಜ ಮಾರ್ಪಳ್ಳಿ, ಕಲಾವಿದರಾದ ಪ್ರಸಾಂತ್‌ ಭಟ್‌, ರವಿ ಹಿರೇಬೆಟ್ಟು, ವೆಂಕಿ ಪಲಿಮಾರು, ಉಷಾದೇವಿ, ಗುರುರಾಜ್‌ ಸನಿಲ್‌, ಕೃಷ್ಣಮೂರ್ತಿ ಭಟ್‌ ಉಡುಪಿ, ಬಲರಾಮ್‌ ಭಟ್‌, ಸುಮಾ ಶ್ರೀನಾಥ್‌, ಮಂಗಳಾ ಭಟ್‌ ಮತ್ತಿತರರಿದ್ದರು.

ತರಂಗದಿಂದ ಕಲೆ ಉಳಿವು
ಗಂಜೀಫಾ ರಘುಪತಿ ಭಟ್ಟರು ಕಲೆ ಬೆಳೆಸಿದರು. ಅದನ್ನು ತರಂಗ ವಾರಪತ್ರಿಕೆ ಉಳಿಸುವ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಕಲೆ ಮುಂದೆ ಕೋಟಿ ರೂ. ಬೆಲೆ ಬಾಳಬಹುದು ಎಂದು 40 ವರ್ಷದ ಹಿಂದೆ ನಾನು ಹೇಳಿದ್ದೆ, ಇಂದು ನಿಜವಾಗಿದೆ ಎಂದು ಡಾ| ಹೆಗ್ಗಡೆ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next