ಮುಂಬೈ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟಿಗ ರಿಷಭ್ ಪಂತ್ ಅವರು ಇನ್ನು ಹಲವು ತಿಂಗಳ ಕಾಲ ಕ್ರಿಕೆಟ್ ಆಡುವುದು ಅನುಮಾನವಾಗಿದೆ. ಇದೀಗ ಮುಂದಿನ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂತ್ ಅಲಭ್ಯತೆ ಸ್ಪಷ್ಟವಾಗಿದೆ.
ಪಂತ್ ಅವರು ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಈಗಾಗಲೇ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ತಮ್ಮ ಮೊಣಕಾಲಿನ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.
ಬಿಸಿಸಿಐ ಮಾಜಿ ಅಧ್ಯಕ್ಷ, ಸದ್ಯ ಪಂತ್ ನಾಯಕರಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ನ ನಿರ್ದೇಶಕ ಸೌರವ್ ಗಂಗೂಲಿ ಅವರು ಪಂತ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪೊಲೀಸ್ ರಂತೆ ನಟಿಸಿ ಪತ್ರಕರ್ತೆಯಿಂದ ಹಣ ವಸೂಲಿಗೆ ಯತ್ನ: ಆರೋಪಿ ಬಂಧನ
“ರಿಷಭ್ ಪಂತ್ ಐಪಿಎಲ್‌ಗೆ ಲಭ್ಯವಿರುವುದಿಲ್ಲ. ನಾನು ಡೆಲ್ಲಿ ಕ್ಯಾಪಿಟಲ್ಸ್ ನ ಸಂಪರ್ಕದಲ್ಲಿದ್ದೇನೆ. ಇದೊಂದು ಶ್ರೇಷ್ಠ ಐಪಿಎಲ್ ಆಗಲಿದೆ. ನಾವು ಚೆನ್ನಾಗಿ ಆಡಲಿದ್ದೇವೆ. ಆದರೂ ರಿಷಭ್ ಪಂತ್ ಅವರ ಗಾಯವು ತಂಡದ ಮೇಲೆ ಪರಿಣಾಮ ಬೀರುತ್ತದೆ ಎಂದು ಗಂಗೂಲಿ ಕೋಲ್ಕತ್ತಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.