Advertisement

Gangolli boat Tragedy: ಜನವರಿ ಮೊದಲ ವಾರದಲ್ಲಿ ಪರಿಹಾರ: ಸಚಿವ ಮಂಕಾಳ ವೈದ್ಯ

07:35 PM Dec 24, 2023 | Team Udayavani |

ಉಡುಪಿ: ಗಂಗೊಳ್ಳಿಯಲ್ಲಿ ನಡೆದ ಬೋಟ್‌ ಗಳಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ 12 ಕೋ.ರೂ.ಗಳಷ್ಟು ನಷ್ಟ ಉಂಟಾಗಿದೆ. ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ತಲಾ 10 ಲ.ರೂ.ನಂತೆ ಪರಿಹಾರ ನೀಡಲು ತೀರ್ಮಾನಿಸಲಾಗಿದ್ದು, ಜನವರಿ ಮೊದಲ ವಾರದಲ್ಲಿ ಪರಿಹಾರ ನೀಡಲಾಗುವುದು ಎಂದು ಬಂದರು, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು.

Advertisement

ರವಿವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರ ಮೀನುಗಾರರೊಂದಿಗಿದೆ. ಅವರ ಬೇಡಿಕೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಲಾಗುವುದು ಎಂದರು.

ಹಿಜಾಬ್‌ ಪರ ವಿರೋಧ ಚರ್ಚೆಯ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಸುಳ್ಳು ಹೇಳುವುದು ಬಿಟ್ಟು ಏನಾದರೂ ಒಳ್ಳೇದು ಮಾಡಿದೆಯಾ ಎಂದು ಪ್ರಶ್ನಿಸಿದರು. ಯಾರ ಬಾಯಿಂದ ಏನು ವ್ಯತ್ಯಾಸ ಆಗುತ್ತದೆ ಎಂದು ಬಿಜೆಪಿ ಕಾಯುತ್ತಿರುತ್ತದೆ. ಮುಖ್ಯಮಂತ್ರಿಗಳು ಬಹಳ ಮೇಧಾವಿಯಾಗಿದ್ದಾರೆ. ಅವರು ಎಲ್ಲ ಸಮಸ್ಯೆಯನ್ನು ಬಗೆಹರಿಸುತ್ತಾರೆ. ನಾವೆಲ್ಲ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next